Site icon TUNGATARANGA

ಶ್ರೀ ಶ್ರೀ ರೋಜಾ ಗುರೂಜಿ ಇಂಟರ್‌ನ್ಯಾಷನಲ್ ಟ್ರಸ್ಟ್ ವತಿಯಿಂದ | ಅದ್ಧೂರಿಯಾಗಿ ಗುರು ಪೂರ್ಣಿಮಾ ಆಚರಣೆ

ಶ್ರೀ ಶ್ರೀ ರೋಜಾ ಗುರೂಜಿ ಇಂಟರ್ ನ್ಯಾಷನಲ್ ಟ್ರಸ್ಟ್ ವತಿಯಿಂದ ಅದ್ದೂರಿ ಯಾಗಿ ಗುರು ಪೂರ್ಣಿಮಾ ಸಮಾರಂಭವನ್ನು ಆಚರಿಸಲಾಯಿತು. ಈ ಅಂಗವಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ಗುರು ಅಷ್ಟಕ ಕಂಠ ಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಗುರುಗಳ ಆಶೀರ್ವಾದ ಎಲ್ಲರನ್ನೂ ತಲುಪಲು ಉದ್ದೇಶ ಇದಾಗಿತ್ತು. ಈ ಸ್ಪರ್ಧೆಯಲ್ಲಿ ವಿಶ್ವದ ನಾನಾ ಮೂಲೆಗಳಿಂದ ಅಭ್ಯರ್ಥಿಗಳು ಭಾಗವಹಿಸಿದ್ದರು. ೭ ವರ್ಷದ ಮಗುವಿನಿಂದ ೭೫ ವರ್ಷದ ಹಿರಿಯರ ವರೆಗೂ ಅಭ್ಯರ್ಥಿಗಳು ಭಾಗವಹಿಸಿದ್ದರು.


ಎಲ್ಲಾ ಅಭ್ಯರ್ಥಿಗಳು ಬಹಳ ಉತ್ಸಾಹ ದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪು ಗಾರರ ಮೆಚ್ಚುಗೆಯನ್ನು ಪಡೆದರು.
ಗುರು ಪೂರ್ಣಿಮಾ ಪ್ರಯುಕ್ತ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿ ಯವರು ನೆಲೆಯಾಗಿರುವ ಹೊಸೂಡಿ ಫಾರ್ಮ್ ನಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಶ್ರೀ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ಗುರೂಜಿ ಅವರ ಪಾದುಕೆಗೆ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಭಜನಾ ಕಾರ್ಯಕ್ರಮವು ಹಾಗೂ ಮದ್ಯಾಹ್ನ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು.

ಗೌರಮ್ಮ ರೋಜಾ ಷಣ್ಮುಗಂ ರವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ್, ದುರೈ , ಶ್ರೀನಿವಾಸ್ ದಂಪತಿಗಳು, ಮಳೇಬೆನ್ನುರ್ ಮಂಜು ಗುರುಸ್ವಾಮಿ ಯವರು ಪಾಲ್ಗೊಂಡಿ ದ್ದರು. ಶ್ರೀ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ಕೇಶವ್ ಸ್ವಾಮಿ, ಮುರುಗೇಶ್ ಸ್ವಾಮಿ, ರಂಜಿತ್ ಸ್ವಾಮಿ, ನಿಖಿಲ್ ಸ್ವಾಮಿ, ನೇತ್ರಾ, ಉಮಾ, ಜಯಮ್ಮ, ಶ್ರೀ ಶಬರೀಶ ಭಕ್ತ ಮಂಡಳಿಯ ಸದಸ್ಯರು ಹಾಗೂ ಹೊಸೂಡಿ ಫಾರ್ಮ್ ಗ್ರಾಮಸ್ಥರು ಉಪಸ್ಥಿತರಿದ್ದರು.


ಗುರು ಪೂರ್ಣಿಮಾ ಸಮಾರಂಭವನ್ನು ಆನ್ಲೈನ್ ಸಹ ಆಚರಿಸಲಾಯಿತು. ಈ ಕಾರ್ಯಕ್ರಮ ಶ್ರೀ ಶ್ರೀ ರೋಜಾ ಗುರೂಜಿ ಯವರಿಗೆ ನಮನ ತೋರುವ ಮೂಲಕ ಶುರು ಮಾಡಲಾಯಿತು. ಗುರುಗಳ ಬಗ್ಗೆ ಹಾಗೂ ಗುರು ಪೂರ್ಣಿಮೆಯ ಮಹತ್ವವನ್ನು ಚೆನ್ನೈ ಇಂದ ಸುರೇಶ್ ರವರು ಹಾಗೂ ಆಸ್ಟ್ರೇಲಿಯಾದಿಂದ ಶ್ರೀವಿದ್ಯಾರವರು ತಿಳಿಸಿಕೊಟ್ಟರು.


ಝೀ ಕನ್ನಡದ ಸ ರಿ ಗ ಮ ಪ ಸ್ಪರ್ಧೆಯ ಪುಟಾಣಿ ಜ್ಞಾನ ಗುರುರಾಜ್ ಗುರು ಹಾಗೂ ಅಯ್ಯಪ್ಪನ ಹಾಡಿನಿಂದ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಶ್ರೀ ಶಬರೀಶ್ ಗುರುಸ್ವಾಮಿ ಯವರು ಶ್ರೀ ಶ್ರೀ ರೋಜಾ ಗುರೂಜಿ ಯವರ ಬಗ್ಗೆ ಹಾಗೂ ಗುರುವಿನ ವಿಶೇಷತೆ ಬಗ್ಗೆ ತಿಳಿಸಿಕೊಟ್ಟರು. ಮುಂದಿನ ದಿನಗಳಲ್ಲಿ .ಶ್ರೀ ಶ್ರೀ ರೋಜಾ ಗುರೂಜಿ ಇಂಟರ್‌ನ್ಯಾಷನಲ್ ಟ್ರಸ್ಟ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು. ಈ ಸಮಾರಂಭದಲ್ಲಿ ಭಾರತದ ವಿವಿಧ ರಾಜ್ಯಗಳು ಹಾಗೂ ವಿದೇಶದ ಆಸ್ಟ್ರೇಲಿಯಾ, ಅಮೆರಿಕ ಇನ್ನು ಮುಂತಾದ ರಾಜ್ಯಗಳಿಂದ ಭಾಗವಹಿ ಸಿದ್ದರು. ಈ ಕಾರ್ಯಕ್ರಮದ ಸ್ವಯಂಸೇವಕ ರಾದ ಸುರೇಶ್, ಜಯಶ್ರೀ, ಅಶೋಕ್, ಅಭಿನೇಶ್, ಮಂಜು ಇತರರಿದ್ದರು.

Exit mobile version