Site icon TUNGATARANGA

ಸರ್ಕಾರಿ ಕಟ್ಟಡದಲ್ಲಿ ಸಭೆಗೆ ಅವಕಾಶ ನೀಡುವಂತೆ ಸಚಿವ ಮಧು ಬಂಗಾರಪ್ಪಗೆ ಮನವಿ

ಸಭೆ ಮತ್ತು ವಾರದ ಕವಾಯತು ನಡೆಸಲು ಸರ್ಕಾರಿ ಕಟ್ಟಡದಲ್ಲಿ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಗೃಹರಕ್ಷಕದಳದ ವತಿಯಿಂದ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.


ಪೊಲೀಸ್ ಇಲಾಖೆಗೆ ಸಹಾಯಕವಾಗಿ ಗೃಹರಕ್ಷಕ ದಳದ ಸದಸ್ಯರು ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.


ಆದರೆ, ಪಟ್ಟಣದಲ್ಲಿ ಕಚೇರಿ ಇಲ್ಲದೆ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ ಎಂದು ಗೃಹ ರಕ್ಷಕದಳದ ಘಟಕಾಧಿಕಾರಿ ಬಿ. ರೇವಣಪ್ಪ ತಿಳಿಸಿದರು.


ಮಳೆಗಾಲದಲ್ಲಿ ವಾರದ ಕವಾಯತು ಹಾಗೂ ಸಭೆ ನಡೆಸುವುದು ಕಷ್ಟವಾಗಿದೆ. ಘಟಕದ ದಾಖಲೆಗಳು, ಪೀಠೋಪಕರಣಗಳನ್ನು ಇಡಲು ಸಹ ತೊಂದರೆಯಾ ಗಿದೆ. ತಾಲ್ಲೂಕು ಕೇಂದ್ರದಲ್ಲಿ ಲಭ್ಯವಿರುವ ಯಾವುದಾದರೂ ಸರ್ಕಾರಿ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.


ಮನವಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ, ಶೀಘ್ರದಲ್ಲಿ ಗೃಹರಕ್ಷಕ ದಳದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗೃಹರಕ್ಷಕದಳದ ಬಿ.ಎನ್. ಗೋಪಾಲ್, ಜರಿಕೋತಾ, ಸಿ.ಆರ್. ದುರ್ಗಪ್ಪ, ಎನ್.ಬಿ. ನಾಗರಾಜ್ ಮತ್ತು ಘಟಕದ ಸದಸ್ಯರು ಇದ್ದರು.

Exit mobile version