Site icon TUNGATARANGA

ಜು 2 : ಪೋಲೀಸ್ ಸಭಾಂಗಣದಲ್ಲಿ ಸಾಹಿತ್ಯ ಹುಣ್ಣಿಮೆ

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರತಿ ತಿಂಗಳು ಹುಣ್ಣಿಮೆ ದಿನ ಏರ್ಪಡಿಸುವ ಮನೆ, ಮನ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 214 ನೇ ತಿಂಗಳ ಕಾರ್ಯಕ್ರಮವನ್ನು ಜುಲೈ 2 ರ ಭಾನುವಾರ ಸಂಜೆ 06:00 ಗಂಟೆಗೆ ಡಿ.ಎ.ಆರ್. ಆವರಣದಲ್ಲಿರುವ ಪೋಲಿಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಪ್ರತಿಭಾವಂತ ಕವಿಗಳು, ಗಾಯಕರುಗಳನ್ನು ಗುರುತಿಸಿ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸಿವಿಲ್, ಡಿ.ಎ.ಆರ್., ಕೆ.ಎಸ್.ಆರ್.ಪಿ ಯಲ್ಲಿ ಸೇವೆ ಸಲ್ಲಿಸುವವರು, ಅವರ ಕುಟುಂಬದ ಸದಸ್ಯರು ಭಾಗವಹಿಸಬಹುದಾಗಿದೆ.

ಕಾರ್ಯಕ್ರಮವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಿ.ಕೆ. ಮಿಥುನ್ ಕುಮಾರ್  ಉದ್ಘಾಟಿಸಲಿದ್ದಾರೆ. ಹೆಚ್ಚುವರಿ ಜಿಲ್ಲಾ ಪೋಲಿಸ್ ಅದೀಕ್ಷಕರಾದ ಅನಿಲ್ ಕುಮಾರ್ ಎಸ್. ಭೂಮಾರೆಡ್ಡಿ ಮುಖ್ಯ ಅತಿಥಿಗಳಾಗಿ, ಹಿರಿಯ ಸಾಹಿತಿಗಳಾದ ಡಾ. ಶಾಂತಾರಾಮ್ ಪ್ರಭು ಉಪನ್ಯಾಸ ನೀಡಲಿದ್ದಾರೆ. ಡಿ.ಎ.ಆರ್. ಪೋಲಿಸ್ ಉಪ ಅಧೀಕ್ಷಕರಾದ ಟಿ.ಪಿ. ಕೃಷ್ಣಮೂರ್ತಿ, ಉಪ ಪೋಲಿಸ್ ಅಧೀಕ್ಷಕರಾದ ಬಿ.ಬಾಲರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್, ಜಿಲ್ಲಾ ಕಸಾಸಾಂ ವೇದಿಕೆ ಕೋಶಾಧ್ಯಕ್ಷರಾದ ಯು.ಮಧುಸೂದನ್ ಐತಾಳ್, ಉಪಾಧ್ಯಕ್ಷರಾದ ಟಿ.ಕೃಷ್ಣಪ್ಪ, ಭಾರತಿ ರಾಮಕೃಷ್ಣ, ಹಿಂದಿನ ಆತಿಥ್ಯ ನೀಡಿದ್ದ ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಎಚ್.ಎಂ.ಸತ್ಯನಾರಾಯಣ, ಸಿದ್ದಿ ಬುದ್ದಿ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.

ಖ್ಯಾತ ಗಾಯಕಿ ಸುರೇಖಾ ಹೆಗಡೆ, ನಳಿನಾಕ್ಷಿ ಮತ್ತು ತಂಡದವರು ಹಳೆಯ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ. ವಾದ್ಯ ಸಹಕಾರ ನೀಡಲು ಸಿದ್ದಪ್ಪ, ರಾಘವೇಂದ್ರ ಪ್ರಭು, ಸಾಗರದ ಮೋನಿಕ್ ಭಾಗವಹಿಸಲಿದ್ದಾರೆ. ದೂರದರ್ಶನ ಹರಟೆ ಖ್ಯಾತಿಯ ಉಮೇಶ್ ಗೌಡರಿಂದ ಹಾಸ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕರಾದ ಸತೀಶ್ ಕಪ್ಪನಹಳ್ಳಿ ಅವರು ಕಥೆ ಹೇಳಲಿದ್ದಾರೆ.

ಪೋಲೀಸ್ ಹವಾಲ್ದಾರ್ ಖಾಕಿಕವಿ ಮಂಜುನಾಥ ನಗರ, ಡಿಎಆರ್ ಪೋಲೀಸ್ ಎಚ್.ಜಿ. ಸಂತೋಷ, ಕೆ.ಎಸ್.ಆರ್.ಪಿ ಪೋಲೀಸರಾದ ಉಮಾಪತಿ ಆರ್., ಟಿ. ಲಕ್ಷಣ್, ಕವಿಗಳಾದ ಡಿ.ಗಣೇಶ್ , ಡಾ.ಆಸ್ಮಾ ಮೇಲಿನಮನೆ, ಪೋಲೀಸರಾದ ರೇಣುಕಾ ಶಿವಪ್ಪ, ಮಂಜಪ್ಪ ಬೆಜ್ಜುವಳ್ಳಿ, ಮಧುಸೂದನ್ ಸಿ. ಎಸ್., ನಾಗಿಬಾಯಿ, ಲೀಲಾವತಿ ಯುವರಾಜ್ ಕವನ ವಾಚನ ಮಾಡಲಿದ್ದಾರೆ.

Exit mobile version