ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಲ್ಲಿನ ಮುಸ್ಲಿಮ್ ಸಮುದಾಯದ ಬಾಂಧವರು ಇಂದು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಜುಮ್ಮಾ ಮಸೀದಿ ಹಾಗೂ ಬದ್ರೀಯ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ, ತಮ್ಮ ಸಮುದಾಯದ ಬಡ ವರ್ಗದವರಿಗೆ ದಾನ ನೀಡುವ ಮೂಲಕ ಶುಭಹಾರೈಸಿದರು. ಹೊಸ ವಸ್ತ್ರದೊಂದಿಗೆ ಪ್ರಾರ್ಥನ ಸ್ಥಳಕ್ಕೆ ಭೇಟಿ ನೀಡಿದ ನೂರಾರು ಮುಸ್ಲಿಮರು ಅಲ್ಲಾಹನಲ್ಲಿ ವಿಶ್ವ ಸುಭಿಕ್ಷೆಗಾಗಿ ಪ್ರಾರ್ಥಿಸಿದರು.
ಪರಸ್ಪರ ಶುಭಾಷಯ ಕೋರಿ, ಗೆಳೆಯರ, ಸಂಬಂಧಿಗಳ ಮನೆಗಳಿಗೆ ತೆರಳಿ ಹಬ್ಬದ ವಿಶೇಷ ಖಾದ್ಯಗಳನ್ನು ಸವಿದು ಸಂಭ್ರಮ ಹಂಚಿಕೊಂಡಿದ್ದು ಕಂಡು ಬಂತು. ಈ ಬಾರಿ ಈದ್ಗಾ ಮೈದಾನದಲ್ಲಿನ ಸಾಮೂಹಿಕ ಪ್ರಾರ್ಥನೆಗೆ ಮಳೆರಾಯ
ಅಡ್ಡಿ ಪಡಿಸಿದ್ದ ಕಾರಣ ಮಸೀದಿಯಲ್ಲೆ ನೆಡೆಯಿತು.
ತಾಲೂಕಿನ ಬಟ್ಟೆಮಲ್ಲಪ್ಪ, ನಗರ, ಯಡೂರು, ಕೋಡೂರು, ರಿಪ್ಪನ್‌ಪೇಟೆ, ನಿಟ್ಟೂರು, ಜಯನಗರ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಣೆ ಕಂಡುಬಂತು.