Site icon TUNGATARANGA

ಲೋಕಾಯುಕ್ತ ಬಲೆಗೆ ಬಿದ್ದ ಸೊರಬ ಪುರಸಭೆ ಕೇಸ್‍ವರ್ಕರ್ ಚಂದ್ರಕಲಾ ಬಂಧನ

ಸುದ್ದಿ, ಮತ್ತು ಜಾಹೀ944825683183


ಶಿವಮೊಗ್ಗ, ಜೂನ್ 28:

ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಲು ಎಲ್ಲಾ ಅಧಿಕಾರಿಗಳಿಗೂ ಹಾಗೂ ನೌಕರರಿಗೆ ಮಾಮೂಲಿ ಕೊಡಬೇಕೆಂದು ಲಂಚಬಾಕತನಕ್ಕೆ ಮುಂದಾದ ಸೊರಬ ಪುರಸಭೆ ಕೇಸ್ ವರ್ಕರ್ ಈಗ ಲೋಕಾಯುಕ್ತ ಬಲೆಗೆ ಬಿದ್ದು ಬಂಧಿಯಾಗಿದ್ದಾರೆ.

ಮಂಜುನಾಥ, ಬಿನ್ ಕೊರಗಯ್ಯ ಶೆಟ್ಟಿ, ವ್ಯವಸಾಯ ಕೆಲಸ, ಚರ್ಚ್ ಸಮುದಾಯ ಭವನದ ಹಿಂಭಾಗ, ಜೀವಜ್ಯೋತಿ ಬಡವಣೆ, ಹೊಸಪೇಟೆ ಹಕ್ಕಲು, ಸೊರಬ ಟೌನ್, ಶಿವಮೊಗ್ಗ ಜಿಲ್ಲೆ ವಾಸಿಯಾಗಿದ್ದು, ಇವರ ಸಹೋದರ ಭಾಸ್ಕರ್ ಕೆ.ಎಸ್ ಇವರು ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ, ಸೊರಬ ತಾಲ್ಲೂಕು ಕಸಬಾ ಹೋಬಳಿಯ ಹಳೇ ಸೊರಬ ಸ.ನಂ.179 ರಲ್ಲಿ ಅಲಿನೇಷನ್ ಆಗಿದ್ದರಲ್ಲಿ ಡಿ.ರಿ. ನಂ. 21ನೇದ್ದರ ನಿವೇಶನವು ಫಿರ್ಯಾದುದಾರರ ಸಹೋದರ ಭಾಸ್ಕರ್ ಇವರ ಹೆಸರಿನಲ್ಲಿರುತ್ತದೆ. ಸದರಿ ನಿವೇಶನವು ಹಳೇ ಸೊರಬ ಗ್ರಾ.ಪಂ ವ್ಯಾಪ್ತಿಗೆ ಒಳಟ್ಟಿದ್ದು, ಸೊರಬ ಟೌನ್ ಈಗ ಪುರಸಭೆಯಾಗಿ ಮಾರ್ಪಟ್ಟಿದ್ದರಿಂದ ಸದರಿ ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಬೇಕಾಗಿದ್ದು, ಸಹೋದರ ಭಾಸ್ಕರ್ ಇವರಿಗೆ ಈ ಕೆಲಸದ ನಿಮಿತ್ತ ಓಡಾಡಲು ಅನಾನುಕೂಲವಾಗಿದ್ದರಿಂದ ಪುರಸಭೆಗೆ ಅರ್ಜಿ ಸಲ್ಲಿಸಿ ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಕೊಳ್ಳುವ ಕೆಲಸ ಮಾಡಲು ಪಿರ್ಯಾದಿಗೆ ಸೂಚಿಸಿದ್ದರಿಂದ ಪಿರ್ಯಾದಿಯು ದಿ:17-06-2013ರಂದು ಸೊರಬ ಪುರಸಭೆಗೆ ಹೋಗಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ನಂತರ ದಿ:21-06-2023ರಂದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಫಿರ್ಯಾದಿಯು ಸೊರಬ ಪುರಸಭೆ ಕಛೇರಿಗೆ ಹೋಗಿ ಅಲ್ಲಿನ ಕೇಸ್ ವರ್ಕರ್ ಚಂದ್ರಕಲಾ ಇವರನ್ನು ವಿಚಾರಿಸಿದಾಗ, ಅವರು ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಲು ಖರ್ಚಾಗುತ್ತದೆ ಎಂದು ತಿಳಿಸಿರುತ್ತಾರೆ. ನಂತರ ಫಿರ್ಯಾದಿ ಮಂಜುನಾಥ ಇವರು ದಿ:26-06-2022ರಂದು ಕೇಸ್ ವರ್ಕರ್ ಚಂದ್ರಕಲಾ ಇವರ ಮೊಬೈಲ್‍ಗೆ ತನ್ನ ಮೊಬೈಲ್‍ನಿಂದ ಕರೆ ಮಾಡಿ ನಿವೇಶನದ ಖಾತೆ ಬಗ್ಗೆ ವಿಚಾರಿಸಿದಾಗ ಅವರು ನಿವೇಶನವನ್ನು ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡಲು ಸಾಹೇಬ್ರಿಗೆ, ಆರ್‍ಓ, ಆರ್‍ಐ, ಮ್ಯಾನೇಜರ್, ಬಿಲ್ ಕಲೆಕ್ಟರ್ ಇವರಿಗೆ ಕೊಡಲು ಖರ್ಚಾಗುತ್ತದೆ, ನೀವು 15,000/-ಗಳನ್ನು ತೆಗೆದುಕೊಂಡು ಬನ್ನಿ ಎಂದು ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ.

ಆದರೆ ಲಂಚದ ಹಣ ಕೊಡಲು ಇಷ್ಟವಿರದ ಮಂಜುನಾಥ ಇವರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಅದರಂತೆ ಇಂದು ಆಪಾದಿತ ನೌಕರರು ತನ್ನ ಕಛೇರಿಯಲ್ಲಿ ಫಿರ್ಯಾದಿಯಿಂದ ರೂ. 15,000/-ಗಳ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಾಕ್ಷಿಸಮೇತ ಸಿಕ್ಕಿಬಿದ್ದಿರುತ್ತಾರೆ.
ಆಪಾದಿತೆ ಚಂದ್ರಕಲಾ, ಕೇಸ್‍ವರ್ಕರ್, ಪುರಸಭೆ ಕಚೇರಿ, ಸೊರಬ ಇವರನ್ನು ತನಿಖಾಧಿಕಾರಿಗಳಾದ ಹೆಚ್. ರಾಧಾಕೃಷ್ಣ, ಪೊಲೀಸ್ ನಿರೀಕ್ಷಕರು ಇವರು ಬಂಧಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಆಪಾದಿತರನ್ನು ಬಂಧಿಸಲಾಗಿರುತ್ತದೆ.

ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಉಪಾಧೀಕ್ಷಕರಾದ ಉಮೇಶ ಈಶ್ವರ ನಾಯ್ಕ್ ಮತ್ತು ಸಿಬ್ಬಂದಿಗಳಾದ ಪ್ರಸನ್ನ, ಸಿ.ಹೆಚ್.ಸಿ, ಮಹಂತೇಶ, ಸಿ.ಹೆಚ್.ಸಿ., ಬಿ.ಟಿ ಚನ್ನೇಶ, ಸಿಪಿಸಿ, ಪ್ರಶಾಂತ್‍ಕುಮಾರ್, ಸಿಪಿಸಿ, ಅರುಣ್‍ಕುಮಾರ್, ಸಿಪಿಸಿ, ಸುರೇಂದ್ರ, ಸಿ.ಪಿ.ಸಿ. ರಘುನಾಯ್ಕ, ಸಿ.ಪಿ.ಸಿ., ಪುಟ್ಟಮ್ಮ, ಮಪಿಸಿ, ಸಾವಿತ್ರಮ್ಮ, ಮಪಿಸಿ, ಗಂಗಾಧರ, ಎಪಿಸಿ, ತರುಣ್‍ಕುಮಾರ್, ಎಪಿಸಿ, ಮತ್ತು ಪ್ರದೀಪ್ ಕುಮಾರ್, ಎಪಿಸಿ, ಜಯಂತ್ ಎಪಿಸಿ ಮತ್ತು ವಿ. ಗೋಪಿ, ಎಪಿಸಿ ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.

Exit mobile version