Site icon TUNGATARANGA

ಕೆಂಪೇಗೌಡರು ಬೆಂಗಳೂರು ನಗರವನ್ನು ಮಾತ್ರ ಕಟ್ಟಲಿಲ್ಲ|ಜೊತೆಗೆ ಸಮಾನತೆಯ ತತ್ವವನ್ನು ಸಾರಿದವರು: ಪ್ರಾಂಶುಪಾಲ ಡಾ. ಎಸ್. ತಿಮ್ಮಯ್ಯನಾಯ್ಡುರವರಿಂದ ವಿಶೇಷ ಉಪನ್ಯಾಸ

ನಾಡಗೌಡ ಕೆಂಪೇಗೌಡರು ಇತಿಹಾಸ ದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಎಸ್. ತಿಮ್ಮಯ್ಯ ನಾಯ್ಡು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಒಕ್ಕಲಿಗರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಕೇವಲ ಬೆಂಗಳೂರು ನಗರವನ್ನು ಮಾತ್ರ ಕಟ್ಟಲಿಲ್ಲ ಅದರ ಜೊತೆಗೆ ಸಮಾನತೆಯ ತತ್ವವನ್ನು ಸಾರಿದವರು. ಎಲ್ಲಾ ಸಮುದಾಯಗಳನ್ನು ಪ್ರೀತಿಸಿದವರು. ಒಂದು ನಗರ ಹೇಗಿರ ಬೇಕು ಎಂಬ ಕಲ್ಪನೆಯನ್ನು ನೂರಾರು ವರ್ಷಗಳ ಹಿಂದೆಯೇ ಊಹಿಸಿದ್ದವರು. ಅವರ ಆದರ್ಶಗಳು ಸದಾ ಉಸಿರಾಡು ತ್ತಲೇ ಇರುತ್ತವೆ ಎಂದರು.


ವಿಜಯನಗರ ಸಾಮ್ರಾಜ್ಯ ಅಂದು ಉತ್ತುಂಗ ಸ್ಥಿತಿಗೆ ತಲುಪಿತ್ತು. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ಯಲಹಂಕ ಅವರ ರಾಜಧಾನಿಯಾಗಿತ್ತು. ವಿಜಯನಗರದ ಅಂದಿನ ವಿಜೃಂಭಣೆಯ ನಗರವನ್ನು ನೋಡಿದ ಕೆಂಪೇಗೌಡರಿಗೆ ತಾವೂ ಕೂಡ ಒಂದು ಬಹುದೊಡ್ಡ ನಗರವನ್ನು ಕಟ್ಟ ಬೇಕು ಎಂಬ ಆಸೆ ಹೊಂದಿ ವಿಜಯನಗರ ರಾಜರ ಒಪ್ಪಿಗೆ ಪಡೆದು ಧನ ಸಹಾಯ ವನ್ನೂ ಪಡೆದು ಬೆಂಗಳೂರು ನಗರವನ್ನು ಅತ್ಯಂತ ವಿಸ್ತಾರವಾಗಿ ಕಟ್ಟಿದರು. ಬಹುಶಃ ಅಧಿಕಾರಕ್ಕೆ ಬರುವ ಮೊದಲೇ ಬೆಂಗಳೂರು ನಗರ ಹೇಗಿರಬೇಕು ಎಂಬ ಕಲ್ಪನೆಯನ್ನು ಇವರು ಕಂಡುಕೊಂಡಿದ್ದರು ಎಂದರು.


ಒಂದು ಬಹುದೊಡ್ಡ ಕೋಟೆಯನ್ನು ನಿರ್ಮಿಸಿದರು. ಅದರ ಒಳಗೆ ಆಡಳಿತ, ಕೋಟೆಯ ಹೊರಗೆ ಪೇಟೆಗಳ ವಿಸ್ತಾರ ಎಲ್ಲಾ ಜಾತಿಯವರಿಗೂ ಮನ್ನಣೆ ನೀಡಿದ್ದರು. ಜೊತೆಗೆ ಎಲ್ಲಾ ಜಾತಿಯ ವ್ಯಾಪಾರಕ್ಕೂ ಮತ್ತು ವಿವಿಧ ಬಗೆಯ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟವರು. ಇಂದಿಗೂ ಚಿಕ್ಕಪೇಟೆ, ದೊಡ್ಡ ಪೇಟಿ, ಬಳೆಪೇಟೆ, ಅಕ್ಕಿಪೇಟೆ, ಅರಳೀಪೇಟೆ ಹೀಗೆ ಒಂದೊಂದು ವಸ್ತುವಿಗೂ ಒಂದೊಂದು ವ್ಯಾಪಾರ ಸ್ಥಳ ನಿಗದಿಪಡಿದ್ದರು ಎಂದರು.


ಜೊತೆಗೆ ಜಾತಿ ಆಧಾರಿತವಾಗಿ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ ಆ ಮೂಲಕ ಎಲ್ಲಾ ಜಾತಿಗಳಿಗೂ ಸಮಾನ ಅವಕಾಶವನ್ನು ಕೆಂಪೇಗೌಡರು ಕೊಟ್ಟಿದ್ದರು. ಉದಾ. ನಗರಕರ್ ಪೇಟೆ( ವೀರಶೈವ) ಗೌಡರ ಪೇಟೆ. ಕುರುಬರ ಪೇಟೆ, ತಿಗಳ ಪೇಟೆ, ಶೆಟ್ಟರ ಪೇಟೆ, ಸುಲ್ತಾನ್‌ಪೇಟೆ ಹೀಗೆ ಎಲ್ಲಾ ಜಾತಿ ಧರ್ಮದವರಿಗೂ ಆದ್ಯತೆ ನೀಡಿ ಬೆಂಗಳೂರು ಪಟ್ಟಣವನ್ನು ವಿಸ್ತಾರಗೊಳಿಸಿದವರು ಎಂದರು.
ಒಂದು ದಂತಕಥೆಯಂತೆ ಕಂಡು ಬರುವ ಇವರು ಇಂದಿಗೂ ಆದರ್ಶಪ್ರಾಯ ವಾಗಿದ್ದಾರೆ.

ಸುಮಾರು ೬೯ ವರ್ಷಗಳ ಕಾಲ ಆಡಳಿತ ನಡೆಸಿದರು. ಕೆಲವರು ೪೬ ವರ್ಷ ಎನ್ನುತ್ತಾರೆ. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ ಅವರು ಆಡಳಿತ ನಡೆಸಿದ್ದು ೬೯ ವರ್ಷಗಳು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಸಂಸದ ಬಿ.ವೈ. ರಾಘವೇಂದ್ರ, ಕೆಂಪೇಗೌಡರು ಇಂದಿನ ರಾಜಕಾರಣಿಗಳಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಹಾಕಿದ ಮೇಲ್ಪಂಕ್ತಿಗಳು ನಮಗೆ ಅನುಕರಣೀಯ ವಾಗಿವೆ. ಜಾತಿಗೆ ಜಯಂತಿಗಳು ಸೀಮಿತವಾ ಗಬಾರದು. ಬಿಜೆಪಿ ಸರ್ಕಾರ ನಾಡಗೌಡ ಕೆಂಪೇಗೌಡರ ಹೆಸರನ್ನು ಚಿರಸ್ಥಾಯಿಯ ನ್ನಾಗಿ ಮಾಡಿದೆ. ಹಲವು ಸ್ಥಳಗಳಿಗೆ ಅವರ ಹೆಸರನ್ನು ಇಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಟಿ ಆದಿಮೂರ್ತಿ, ಮೇಯರ್ ಎಸ್. ಶಿವಕುಮಾರ್, ಪ್ರಮುಖರಾದ ಡಿ.ಮಂಜುನಾಥ್, ಚಂದ್ರಕಾಂತ್, ಡಾ. ಶಾಂತಾ ಸುರೇಂದ್ರ, ಸುವರ್ಣಾ ಶಂಕರ್, ಅಪರ ಜಿಲ್ಲಾಧಿಕಾರಿ ಮೇಘನಾ ಸೇರಿದಂತೆ ಹಲವರಿದ್ದರು

Exit mobile version