Site icon TUNGATARANGA

ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದಿಂದ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವ

ಶಿವಮೊಗ್ಗ : ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದೇಶದಲಿ ಉತ್ತಮ ಮಳೆ, ಬೆಳೆ ಹಾಗೂ ಜನರ ಯೋಗಕ್ಷೇಮಕ್ಕಾಗಿ ಜೂ.೨೫ರಂದು ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮದಿಂದ ಜರುಗಿತು.


ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಶ್ರೀ ಭೀಮೇಶ್ವರ ಜೋಷಿಯವರು ಧಾರ್ಮಿಕ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು, ಹೋಮ ಹವನಗಳಿಂದ ಇಷ್ಟರ್ಥಗಳು ಲಭಿಸಿ ಲೋಕಕಲ್ಯಾಣವಾಗುತ್ತದೆ, ಕಾಲ ಕಾಲಕ್ಕೆ ಮಳೆ ಬರುತ್ತದೆ ಎಂದು ನುಡಿದರು.


ಶ್ರೀ ಸತೀಶ್ ಅಯ್ಯಂಗಾರ, ಅರ್ಚಕರು ಸೀತಾ ರಾಮಮಂದಿರ ಹಾಗೂ ಚೇತನ್ ಭಟ್ , ಪ್ರಧಾನ ಅರ್ಚಕರು , ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ. ಶ್ರೀ ಕಲ್ಯಾಣೋತ್ಸವದ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.3


ಈ ಸಂದರ್ಭದಲ್ಲಿ ಎಸ್. ಚೆನ್ನಬಸಪ್ಪ (ಚೆನ್ನಿ) ಶಾಸಕರು,  ಶಿವಕುಮಾರ್ ಮಹಾಪೌರರು, ಲಕ್ಷ್ಮೀ ಶಂಕರ್ ನಾಯ್ಕ್ ಉಪಮಹಾಪೌರರು, ಡಿ.ಎಸ್.ಅರುಣ್, ವಿಧಾನಪರಿಷತ್ ಸದಸ್ಯರು,  ಡಾ. ಧನಂಜಯ ಸರ್ಜಿ ಖ್ಯಾತ ವೈದ್ಯರು,  ಡಾ. ಬಾಲಸುಬ್ರಮಣ್ಯಂ, ಎನ್.ಹೆಚ ಆಸ್ಪತ್ರೆ, ಸಿದ್ದೇಶ್‌, ಇವರನ್ನು ಸನ್ಮಾನಿಸಲಾಯಿತು.


 ಈ ಸಂದರ್ಭದಲ್ಲಿ ಗಂಗಾನಾಯ್ಕ., ಕೆ.ಶೇಖರ., ಜಿ.ಎಸ್. ಅನಂತ್., ಧರ್ಮರಾಜಪ್ಪ., ಬಿ.ಕೆ.ಲಕ್ಕುಂಡಿ.,  
ಶಿವಪ್ಪ., ಜಯಪ್ಪ., ಆದಿತ್ಯಕಾಮತ್., ಪ್ರವೀಣ್.,  ನವೀನ್ ಭಟ್, ಶಶಾಂಕ್., ಕಿರಣ್ , ಯಶವಂತ,ಅಭಿಷೇಕ್ ಮತ್ತು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

Exit mobile version