ಮಲೇಶಿಯಾದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಪುರುಷರ ಚಾಂಪಿಯನ್ ಶಿಫ್‌ನಲ್ಲಿ ಶಿವಮೊಗ್ಗ ನಗರದ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಾದ ಹೇಮಂತ್‌ಗೌಡ-ಮಣಿಕಂಠ ಎಸ್ ಉತ್ತಮ ಆಟದ ಪ್ರದರ್ಶನ ನೀಡಿ, ಏಷ್ಯನ್ ಗೇಮ್ಸ್ ಮತ್ತು ವರ್ಡ್ ಚಾಂಪಿಯನ್ ಶಿಫ್‌ಗೆ ಆಯ್ಕೆಯಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಭಾರತ ಪುರುಷರ ಡಾಡ್ಜ್ ಬಾಲ್ ತಂಡದ ಆಯ್ಕೆ ತರಬೇತಿಯನ್ನು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಆವರಣದಲ್ಲಿ ಪುರುಷರ ಮತ್ತು ಮಹಿಳೆಯರ ಡಾಡ್ಜ್ ಬಾಲ್ ತಂಡದ ತರಬೇತಿಯನ್ನು ಹಮ್ಮಿಕೊಂಡಿತ್ತು, ಈ ತರಬೇತಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪ್ರತಿಭಾವಂತ ಕ್ರೀಡಾ ಪಟುಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಡಾಡ್ಜ್ ಬಾಲ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಹೇಮಂತ್ ಗೌಡ, ತಂದೆ ಯೋಗೀಶ್ ಮತ್ತು ತನುಜಾ ದಂಪತಿಗಳ ಪುತ್ರನಾಗಿರುತ್ತಾನೆ. ಅದೇ ರೀತಿ ಮಣಿಕಂಠ ಎಸ್. ತಂದೆ ಸುರೇಂದ್ರ ಎಸ್ ನಾಯ್ಕ ಹಾಗೂ ಸುಮಾ ದಂಪತಿಗಳ ಪುತ್ರ ನಾಗಿರುತ್ತಾನೆ. ಕ್ರೀಡೆಯ ಜೊತೆಗೆ ಓದಿನಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ.
ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕಾರ್ತಿಕ್ ಪಟೇಲ್ ಜಿ.ಎನ್. ಇವರ ತರಬೇತಿಯಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಹಾಗೂ ಭಾರತ ಡಾಡ್ಜ್ ಬಾಲ್ ಪುರುಷರ ತಂಡದ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿರುವುದು ಮತ್ತೊಂದು ಹೆಮ್ಮೆಯ ವಿಚಾರ.
ಈ ಸಾಧನೆ ಪರಿಶ್ರಮದ ಹಿಂದೆ ಬೆನ್ನು ತಟ್ಟಿ, ಮಾರ್ಗದರ್ಶನವನ್ನು ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲೆ ಹೇಮಾ ಎಸ್. ಆರ್. ಹಾಗೂ ಅಧ್ಯಾಪಕ ವೃಂದದವರು ಮತ್ತು ಭಾರತೀಯ ಡಾಡ್ಜ್ ಬಾಲ್ ಸಂಸ್ಥೆಯ ಕಾರ್ಯದರ್ಶಿ, ನರಸಿಂಹ ರೆಡ್ಡಿ, ರಾಜ್ಯ ಡಾಡ್ಜ್ ಬಾಲ್ ಕಾರ್ಯದರ್ಶಿ, ರಾಜೇಶ್ ಇವರ ಸೂಕ್ತ ಮಾರ್ಗದರ್ಶನ ನಮ್ಮ ಕ್ರೀಡಾ ಬದುಕಿಗೆ ಹೊಸ ದಾರಿ ತೋರಿಸಿತು ಎನ್ನುತ್ತಾರೆ ಈ ಪ್ರತಿಭೆಗಳು.
ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದ ಡಾಡ್ಜ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ಇನ್ನೂ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆಯಲಿ ಎನ್ನುವುದೇ ನಮ್ಮೆಲ್ಲರ ಶುಭ ಹಾರೈಕೆ.