ಶಿವಮೊಗ್ಗ: ಭ್ರಷ್ಟ ಪೊಲೀಸ್ ಅಧಿಕಾರಿಯ ಮೇಲೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ ಎಫ್‌ಐಆರ್ ಆಗಿದೆ. ಈ ದೂರನ್ನು ವಾಪಸ್ ಪಡೆಯುವಂತೆ ಶಿರಾಳಕೊಪ್ಪ ಪೊಲೀಸರು ಕಿರುಕುಳ ನೀಡಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಶಿರಾಳಕೊಪ್ಪದ ರೈತ ಮುಖಂಡ ಸತೀಶ್ ಆರೋಪಿಸಿದರು.
ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ರಮೇಶ್ ವಿರುದ್ಧ ದೂರು ನೀಡಿದ್ದರಿಂದ ಅಂದಿನ ಎಸ್ಪಿ ಅವರು ವರ್ಗಾವಣೆ ಮಾಡಿದ್ದರು ಎಂದರು.
ಕೊಟ್ಟ ಕೇಸನ್ನು ವಾಪಸ್ ಪಡೆಯುವಂತೆ ಶಿರಾಳಕೊಪ್ಪ ಠಾಣೆಯ ಪಿಎಸ್‌ಐ ಮಂಜುನಾಥ್ ಎಎಸ್‌ಐ ಕವಿತಾ ಹಾಗೂ ಇತರೆ ಸಿಬ್ಬಂದಿಗಳು ಆಗಾಗ ರಾಜೀ ಮಾಡಿಸಲು ಪ್ರಯತ್ನಪಟ್ಟರು. ಆದರೂ ನಾನು ಕೇಸು ವಾಪಸ್ ಪಡೆಯವುದಿಲ್ಲ. ಈಗಾಗಿ ಪೊಲೀಸರು ನನ್ನನ್ನು ಫಾಲೋ ಮಾಡುತ್ತಿದ್ದಾರೆ ಹಾಗೂ ನನ್ನ ಮೇಲೆ ವಿನಾಕಾರಣ ಎಫ್‌ಐಆರ್ ಹಾಕಿದ್ದಾರೆ ಆದ್ದರಿಂದ ನನಗೆ ಪ್ರಾಣ ಭಯವಿದೆ.
ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಭ್ರಷ್ಟ ಅಧಿಕಾರಿಗಳ ವಿರುದ್ಧ ನನ್ನ ಪ್ರಾಣ ಹೋದರೂ ಕಾನೂನು ಹೋರಾಟ ಬಿಡುವುದಿಲ್ಲ. ಇವರ ವಿರುದ್ಧ ಪಿಸಿಆರ್ ಹಾಕುತ್ತೇನೆ ಎಂದರು.
ಈ ಸಂದರ್ಭದಲ್ಲಿ ನವೀನ್ ಇದ್ದರು.