Site icon TUNGATARANGA

ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಸಲಿ ; ವಿಹೆಚ್‌ಪಿ ಆಗ್ರಹ

ಹೊಸನಗರ: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರ ನಿಷೇಧ ಮಾಡಲು ಮುಂದಾಗಿದೆ ಎಂಬ ಮಾಧ್ಯಮಗಳ ವರದಿ ಕುರಿತು ವಿವಿಧ ಹಿಂದೂಪರ ಸಂಘಟನೆಗಳು ಕಾಯ್ದೆ ಯತಾವತ್ತಾಗಿ ಮುಂದುವರೆಸಬೇಕೆಂದು ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರ ಮನವಿ ಸಲ್ಲಿಸಿದರು.

ಈ ವೇಳೆ ಬಿಜೆಪಿ ಯುವಮುಖಂಡ, ವಿಶ್ವ ಹಿಂದೂ ಪರಿಷತ್ತು ಸಾಗರ ಘಟಕದ ಮುಖ್ಯಸ್ಥ ಕೆ.ಎಸ್. ಪ್ರಶಾಂತ್ ಮಾತನಾಡಿ, ಗೋಮಾತೆಯಲ್ಲಿ 33 ಕೋಟಿ ದೇವರನ್ನು ಕಾಣುವ ಮೂಲಕ ಪೂಜ್ಯ ಭಾವನೆ ಹೊಂದಿರುವ ದೇಶ ನಮ್ಮದು. ಜನ್ಮದಾತೆ ಮಗುವಿಗೆ ಒಂದು ವರ್ಷ ಹಾಲುಣಿಸಿದರೆ ಗೋಮಾತೆ ಜೀವನ ರ‍್ಯಾಂತ ಹಾಲು ನೀಡುತ್ತಾಳೆ.

ಅಂತಹ ಗೋಹತ್ಯೆ ಕಾಯ್ದೆ ನಿಷೇಧಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಹಿಂದುಗಳ ಅಸ್ಥಿತ್ವವನ್ನು ಪ್ರಶ್ನಿಸುವಂತಿದೆ. ಅಲ್ಲದೇ ಶೀಘ್ರದಲ್ಲೆ ಸದನದಲ್ಲಿ ಕಾಯ್ದೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವನ್ನು ವಿವಿಧ ಹಿಂದೂಪರ ಸಂಘಟನೆಗಳು ಒಕ್ಕೊರಳಿನಿಂದ ತೀವ್ರವಾಗಿ ವಿರೋಧಿಸುತ್ತವೆ.

ಸ್ಥಳೀಯ ಶಾಸಕರು ಸಹ ಬರೀ ಅಲ್ಪಸಂಖ್ಯಾತರ ಮತಗಳಿಂದ ಗೆಲುವು ಸಾಧಿಸಿಲ್ಲ. ಅವರ ಗೆಲುವಿನ ಹಿಂದೆ ಸಾವಿರಾರು ಹಿಂದೂಗಳ ಮತಗಳು ಸಹ ಇದೆ. ಇದನ್ನು ಶಾಸಕರು ಅರಿತು ನಡೆಯಬೇಕಿದೆ. ಅಲ್ಲದೇ ಮತಾಂತರ ಕಾಯ್ದೆ ನಿಷೇಧವನ್ನು ಸಹ ರಾಜ್ಯದಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸರ್ಕಾರವನ್ನು ಅವರು ಆಗ್ರಹಿಸಿದರು.

.

ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ. ಸದಸ್ಯ ಸುರೇಶ್ ಸ್ವಾಮಿರಾವ್, ಪರಿಸರಾಸಕ್ತ ಹನಿಯ ರವಿ, ಗ್ರಾ.ಪಂ. ಮಾಜಿ ಸದಸ್ಯ ಜಯನಗರ ಪ್ರಹ್ಲಾದ್, ಪ್ರಮುಖರಾದ ಎನ್.ಆರ್. ದೇವಾನಂದ್, ಮುಂಜುನಾಥ್ ಸಂಜೀವ್, ಬಜಾಜ್ ಗುರುರಾಜ್, ಗಣಪತಿ ಬಿಳಗೋಡು, ಶಿವಾನಂದ ಹಿರೇಮಣತಿ, ಎಂ. ಗುಡೆಕೊಪ್ಪ ಪ್ರವೀಣ್‌ಗೌಡ ಮೊದಲಾದವರು ಇದ್ದರು.

Exit mobile version