Site icon TUNGATARANGA

ಯೋಗದಿಂದ ವಿಶ್ವದ ಗಮನ ಸೆಳೆದ ಮೋದಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಯೋಗ ಮಾಡುವ ಮೂಲಕ ಪ್ರಧಾನಿ ಮೋದಿಯವರು ವಿಶ್ವದ ಗಮನ ಸೆಳೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.


ಅವರು ಇಂದು ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

.


ಎಲ್ಲರೂ ಪ್ರತಿನಿತ್ಯ ಅರ್ಧಗಂಟೆ ಎಲ್ಲರೂ ಕೂಡ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಇಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅನೇಕರ ಗಣ್ಯರ ಸಮಕ್ಷಮ ಅಮೆರಿಕ ದೇಶದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಯೋಗ ಮಾಡುವ ಮೂಲಕ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ ಎಂದರು.


ಪ್ರಧಾನಿ ಮೋದಿಯವರು ಯೋಗದ ಮೂಲಕ ಪ್ರೇರಣೆ ನೀಡಿದ್ದಾರೆ. ಕೇವಲ ಭಾರತವಲ್ಲದೆ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಇದರ ರೂವಾರಿಯಾಗಿದ್ದು ಈಗ ಭಾರತದ ಯೋಗ ವಿಶ್ವದ ತುಂಬಾ ಹರಡಿದೆ ಎಂದರು.


ಅಮೆರಿಕದಲ್ಲಿ ಒಂದು ಅದ್ಭುತವಾದ ಕಾರ್ಯಕ್ರಮ ನಡೆಯುತ್ತಿದೆ. ಹಾಗೆಯೇ ಶಿವಮೊಗ್ಗದಲ್ಲಿ ಡಾ. ವೀರೇಂದ್ರ ಹೆಗ್ಗಡೆ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಶ್ರೀಗಳ ಸಮ್ಮುಖದಲ್ಲಿ ಯೋಗ ದಿನ ಆಚರಣೆ ನಡೆದಿರುವುದು ವಿಶೇಷ ಎಂದರು.

Exit mobile version