Site icon TUNGATARANGA

ನಾಳೆ ಶಿವಮೊಗ್ಗದಲ್ಲಿ ಆಯುಷ್ ಇಲಾಖೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ, ಬಾಗವಹಿಸಿ ಯೋಗ ಮಾಡಿ, ಕಲಿಯಿರಿ


ಶಿವಮೊಗ್ಗ, ಆಯುಷ್ ಇಲಾಖೆಯು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನ ಆಸ್ಪತ್ರೆ ಹಾಗೂ

ಮಾಚೇನಹಳ್ಳಿ ಕೆ.ಎಸ್.ಆರ್.ಪಿ.8ನೇ

ಬೆಟಾಲಿಯನ್‍ರವರುಗಳ ಸಹಯೋಗದೊಂದಿಗೆ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ.8ನೇ ಬೆಟಾಲಿಯನ್ ಸ್ಥಳದಲ್ಲಿ ಜೂನ್ 21 ರಂದು ಬೆಳಗ್ಗೆ 7-00 ರಿಂದ 8.00 ರ ವರೆಗೆ ಯೋಗ ಪ್ರದರ್ಶನ ಕಾರ್ಯಕ್ರಮವನ್ನು

ಆಯೋಜಿಸಲಾಗಿದ್ದು, ವಿವಿಧ ಯೋಗಸಂಸ್ಥೆಯ ಯೋಗಪಟುಗಳು, ಶಾಲಾ/ಕಾಲೇಜು

.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಎ.ಎಸ್.ಪುಷ್ಪ ಪ್ರಕಟಣೆಯಲ್ಲಿ ಕೋರಿರುತ್ತಾರೆ.

Exit mobile version