Site icon TUNGATARANGA

ಸರಳತೆ ನಡುವೆ ಸಂಭ್ರಮದ ವಿಜಯದಶಮಿ ಆಚರಣೆ

ತಹಶಿಲ್ದಾರರಿಂದ ವಿಜಯದಶಮಿ

ಶಿವಮೊಗ್ಗದಲ್ಲಿ ದಸರಾ ಸಂಭ್ರಮಕ್ಕೆ ತೆರೆ

ಶಿವಮೊಗ್ಗ, ಅ.26:
ಸರಳತೆ ಇದ್ದರೂ ಅಲ್ಲಿ ಸಂಭ್ರಮವಿತ್ತು. ಕಳೆದ ಬಾರಿಗೆ ಹೋಲಿಸಿದರೆ ಶೇಕಡ 10ರಷ್ಟು ಮಾತ್ರ ಜನ ಸೇರಿದ್ದರು. ವರುಣನ ಅವಕೃಪೆಗೆ ಬಿದ್ದರೂ ಭಕ್ತಿಗೆ ಏನೂ ಕಡಿಮೆ ಇಲ್ಲ ಎಂಬಂತೆ ಜನ ಸೇರಿ ಸಂಭ್ರಮದಲ್ಲಿ ಬಾಳೆ ಕಡಿದು ಬನ್ನಿಮುಡಿದು ಸಂಭ್ರಮಿಸಿದರುು

ಮೇಯರ್, ಉಪಮೇಯರ್ ರಿಂದ ಪೂಜೆ


ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಇಂದು ಸಂಜೆ ನಡೆದ ವಿಜಯ ದಶಮಿ ಆಚರಣೆಯ ತುಣುಕುಗಳಿವು. ಶಿವಮೊಗ್ಗ ಮಹಾನಗರ ಪಾಲಿಕೆ ನೇತೃತ್ವದಲ್ಲಿ ನಡೆದ ಇಂದಿನ ಕಾರ್ಯಕ್ರಮ ಅತ್ಯಂತ ವಿಶೇಷ. ಕೊರೋನಾ ಹಿನ್ನೆಲೆಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿತ್ತು. ಆದರೆ ಜನಪ್ರತಿನಿಧಿಗಳಲ್ಲಿ ಕೆಲವರು ಮಾಸ್ಕ ದರಿಸದೆ ಬೇಕಾಬಿಟ್ಟಿ ಪೋಸ್ ನೀಡಿದ ಘಟನೆ ಮಾತ್ರ ಅತ್ಯಂತ ವಿಚಿತ್ರವಾಗಿ ವರದಿಯಾಗಿದ್ದಂತೂ ಸತ್ಯ.


ಬೆಳಿಗ್ಗೆಯ ಚಾಮುಂಡಿ ತಾಯಿಯ ಪೂಜೆಗೆ ಸಚಿವ ಕೆ.ಎಸ್. ಈಶ್ವರಪ್ಪ ಭಾಗವಹಿಸಿದ್ದರು.

ಕೆ.ಎಸ್. ಈಶ್ವರಪ್ಪ ರಿಂದ ಪೂಜೆ


ಶಿವಮೊಗ್ಗ ತಹಸಿಲ್ದಾರ್ ನಾಗರಾಜ್ ಅವರು ಬಾಳೆ ಕಡಿದು ಬನ್ನಿ ಮುಡಿಯಲು ಅವಕಾಶ ಮಾಡಿಕೊಟ್ಟರು. ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳಿಧರ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ವಿರೋಧಪಕ್ಷದ ನಾಯಕ ಯೋಗೀಶ್ ಸೇರಿದಂತೆ ಪಾಲಿಕೆ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಜರಾಜನ ಮೆರವಣಿಗೆ


ಶಿವಮೊಗ್ಗ ಫ್ರೀಡಂ ಪಾರ್ಕ್ ಗೆ ದೇವರುಗಳು ಆಗಮಿಸುವ ಪೂರ್ವದಲ್ಲಿ ಬಿದ್ದ ಭಾರಿ ಮಳೆಯಿಂದ ಮಂಟಪ ಕುಸಿದುಬಿದ್ದಿತ್ತು. ಗಾಳಿಯಬ್ಬರಕ್ಕೆ ರಾವಣನ ತಲೆಬಾಗಿತ್ತು. ಪ್ರತಿ ವರ್ಷ ದಂತಹ ಸಂಭ್ರಮ ಇಲ್ಲದಿದ್ದರೂ ದಸರಾ ಆಚರಣೆ ಶಿವಮೊಗ್ಗದಲ್ಲಿ ವಿಶೇಷವೇ ಹೌದು.

ವರುಣನಾಟ


ಶಿವಮೊಗ್ಗ ಕೋಟೆ ರಸ್ತೆಯಿಂದ ಚಾಮುಂಡಿಯನ್ನು ಹೊತ್ತ ಗಜರಾಜನಿಗೆ ಇಬ್ಬರು ಸಂಗಾತಿ ಯರು ಸಾಥ್ ನೀಡಿದರು. ಮೆರವಣಿಗೆಯಲ್ಲಿ ಪಾಲಿಕೆಯ ಮೇಯರ್ ನೇತೃತ್ವದಲ್ಲಿ ಅಪಾರ ಸದಸ್ಯರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಆದರೆ ಕೊರೊನಾ ನಿಯಮ ಎಂಬುದಿಲ್ಲಿ ಮಾಯವಾಗಿತ್ತು. ಇಂದಿನ ದಿನದ ಚಿತ್ರದ ತುಣುಕುಗಳನ್ನು ಗಮನಿಸಿದಾಗ ಶಿವಮೊಗ್ಗ ದಸರಾದ ಒಂದು ಚಿತ್ರಣ ನಿಮ್ಮ ಗಮನಕ್ಕೆ ಬರಬಹುದು.

ಪೂಜೆಗೆ ಮುನ್ನ
Exit mobile version