ಶಿವಮೊಗ್ಗ:ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಮಹತ್ವದ ಸ್ಥಾನವಿದೆ. ಕಣ್ಣಿಲ್ಲದಿದ್ದರೆ ಪರಾವಲಂಬಿ ಆಗಬೇಕಾಗುತ್ತದೆ ಎಂದು ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಹೇಳಿದರು.
ಅವರು ನಗರದ ಶಾಂತಿನಗರ ರಾಗಿಗುಡ್ಡದ ಅಶೋಕ ಪ್ರೌಢಶಾಲೆ, ಆವಣದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಮತ್ತು ಶ್ರೀ ಶಂಕರ್ ನಾರಾಯಣ ಕಾಶಿ ಟ್ರಸ್ಟ್ ಶಿವಮೊಗ್ಗ ಇವರುಗಳ ಸಯುಕ್ತಾಕ್ಷರದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಶಿಬಿರಗಳನ್ನು ಸ್ಲಂಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬಡ ಹಾಗೂ ಕಾರ್ಮಿಕ ವರ್ಗದವರು ಇರುವ ಜಾಗಗಳಲ್ಲಿ ಯಾಕೆ ಹಮ್ಮಿಕೊಳ್ಳುತ್ತಾರೆಂದರೆ ಅಲ್ಲಿ ಅವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ದಿನನಿತ್ಯದ ಬದುಕಿಗಾಗಿ ಬೆಳಿಗ್ಗೆ ಎಂಟಕ್ಕೆ ಮನೆ ಬಿಟ್ಟರೆ ರಾತ್ರಿ ಎಂಟಕ್ಕೆ ಹಿಂದಿರುಗಿರುತ್ತಾರೆ. ಹಾಗಾಗಿ ಭಾನುವಾರ ಅವರಿಗೆ ಅನುಕೂಲವಾಗಲಿ ಎಂದು ಈ ಶಿಬಿರವನ್ನು ಆಯೋಜಿಸಿದ್ದಾರೆ. ಕಣ್ಣು ಪಂಚೇಂದ್ರಿಯಗಳಲ್ಲಿ ಪ್ರಮುಖವಾಗಿದ್ದು ಕಣ್ಣಿನ ಆರೋಗ್ಯ ಅತಿ ಮುಖ್ಯ ಎಂದರು.
ನಮ್ಮ ಆರೋಗ್ಯದ ದೋ?ಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಆದ್ದರಿಂದ ಇಂತಹ ಶಿಬಿರಗಳ ಸದುಪಯೋಗ ಪಡಿಸಿಕೊಳ್ಳಿ. ನಾನು ಸಣ್ಣವನಿದ್ದಾಗ ಕಣ್ಣಿನ ದೋ?ದ ಚಿಕಿತ್ಸೆಗೆ ಪೋ?ಕರು ನನ್ನನ್ನು ಸಿಖಂದರ ಬಾದಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಆಗ ಶಿವಮೊಗ್ಗದಲ್ಲಿ ಕಣ್ಣಿನ ಚಿಕಿತ್ಸೆಗೆ ಸೌಲಭ್ಯಗಳಿರಲಿಲ್ಲ. ಈಗ ಶಂಕರ ಕಣ್ಣಿನ ಆಸ್ಪತ್ರೆಯಂತಹ ಅತ್ಯಾಧುನಿಕ ಆಸ್ಪತ್ರೆಗಳು ಶಿವಮೊಗ್ಗದಲ್ಲಿ ಇದೆ. ಅಲ್ಲಿಗೆ ಹೋಗಿ ಬರಲು ಒಂದು ದಿನ ವ್ಯರ್ಥವಾಗುತ್ತದೆ ಈಗ ಅವರೇ ನಿಮ್ಮ ಬಳಿಗೆ ಬಂದಿದ್ದಾರೆ. ಉಚಿತ ತಪಾಸಣೆ ನಡೆಸಿ ಅಗತ್ಯ ಬಿದ್ದಲ್ಲಿ ಚಿಕಿತ್ಸೆ ಕೂಡ ಉಚಿತವಾಗಿ ನೀಡುತ್ತಾರೆ. ಕಣ್ಣು ಕಳೆದುಕೊಂಡರೆ ಇನ್ನೊಬ್ಬನನ್ನು ಆಶ್ರಯಿಸಬೇಕಾಗುತ್ತದೆ. ಆದ್ದರಿಂದ ಮನು?ನಿಗೆ ಪ್ರಮುಖ ಅಂಗವಾದ ಕಣ್ಣಿನ ಬಗ್ಗೆ ಎಚ್ಚರವಹಿಸಿ ಮತ್ತು ಮಕ್ಕಳು ಕೂಡ ಕಣ್ಣಿನ ದೋ?ವಿದ್ದರೆ ಈ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆಯಿರಿ ಎಂದು ಸೂಚಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕಿ ಗಾಯತ್ರಿ ಶಾಂತರಾಮ್ ಮಾತನಾಡಿ, ಶಂಕರ ಕಣ್ಣಿನ ಆಸ್ಪತ್ರೆಯಿಂದ ಲಕ್ಷಾಂತರ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಶಿಬಿರಗಳ ಮೂಲಕ ಚಿಕಿತ್ಸೆ ನೀಡಲಾಗಿದೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಕಣ್ಣಿನ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದರು. ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ವಿನಂತಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷೆ ನಿರ್ಮಲ ಕಾಶಿ ಶಂಕರ್ ನಾರಾಯಣ ಕಾಶಿ ಟ್ರಸ್ಟ್ ಶಿವಮೊಗ್ಗದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ ಇದು ಅಧಿಕೃತವಾಗಿ ನಮ್ಮ ಮೊದಲನೆಯ ಸಾಮಾಜಿಕ ಕಾರ್ಯಕ್ರಮ ವಾಗಿದ್ದರೂ ಸಹ ಹಿಂದೆ ಟ್ರಸ್ಟ್ ಸ್ಥಾಪನೆಗೂ ಮುನ್ನ ಅನೇಕ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಹಿಂದೆಯೂ ಕೂಡ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೆವು ಎಂದರು
ಇದೇ ಸಂದರ್ಭದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಡಾಕ್ಟರ್ ಹ?ದ್ ಮತ್ತು ತಂಡದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಅಶೋಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದೇವೇಂದ್ರಕುಮಾರ್ ಟಿ.ಆರ್. ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ. ನಾಗರಾಜ್ ಹಾಗೂ ಎಚ್.ಆರ್. ನಟರಾಜ್. ಉದಯ್ ಶಂಕರ್ ಶಾಸ್ತ್ರಿ. ಮತ್ತಿತರರಿದ್ದರು.