ಶಿವಮೊಗ್ಗ: ಕನ್ನಡಿಗರ ಪ್ರೀತಿ ವಿಶ್ವಾಸಗಳೇ ನನ್ನ ಸಾಧನೆಗೆ ಕಾರಣ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಹೇಳಿದರು.
ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಮುಖಾಮುಖಿ ಎಸ್.ಟಿ. ರಂಗತಂಡ, ಕಾಮನ್ ಮ್ಯಾನ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಮಂಜಮ್ಮ ಜೋಗತಿಯವರ ಜೀವನ ಕಥೆ ಆಧಾರಿತ ಬೇಲೂರು
ರಘುನಂದನ್ ನಿರ್ದೇಶನದ ಹಾಗೂ ಅರುಣ್‌ಕುಮಾರ್ ಅಭಿನಯದ ‘ಮಾತಾ’ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ತುಳಸಿಗೌಡರವರ ಜೊತೆಗೆ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹೆತ್ತ ತಂದೆ ತಾಯಿಯೇ ನನ್ನ ಕತ್ತು ಹಿಡಿದು ಹೊರನೂಕಿದಾಗ ನಮ್ಮ ಊರಿನ ಜನರು ನನ್ನನ್ನು ಸಾಕಿ ಸಲಹಿದರು. ತಾಯಿ ಹುಲಿಗಮ್ಮನ ಭಕ್ತೆಯಾಗಿ ಮುತ್ತು ಕಟ್ಟಿಸಿಕೊಂಡು ನಾನು ಊರು ತಿರುಗಿ ದೇವಿಯ ಹೆಸರಿನಲ್ಲಿ ಹಾಡು ಹೇಳಿ ನೃತ್ಯ ಮಾಡಿ ನಾಟಕ ಮಾಡಿ ಜೀವನವನ್ನು ಸಾಗಿಸಿದೆ ಎಂದರು.
ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ನಂತರ ನನ್ನ ಜಾನಪದ ಕ್ಷೇತ್ರದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಆದ್ದರಿಂದ ಕ? ಬಂತು ಎಂದು ಯಾರೂ ಕೂಡ ಆತ್ಮಹತ್ಯೆಗೆ ಯತ್ನ ಮಾಡದೆ ಬದುಕಿದ್ದು ಸಾಧನೆ ಮಾಡಿ ತೋರಿಸಬೇಕು ಎಂದರು.
ಇತಿಹಾಸತಜ್ಞ ಡಾ.ಕೆ.ಜಿ. ವೆಂಕಟೇಶ್ ಮಾತನಾಡಿ, ಸಾಂಸ್ಕೃತಿಕ ಬರವಣಿಗೆಯಲ್ಲಿ ನಾಟಕವೇ ಮುಖ್ಯವಾದದ್ದು. ಅದು ಓದಲು ಬರೆಯಲು ಬರದೆ ಇರುವ ಸಾಮಾನ್ಯ ವ್ಯಕ್ತಿಗೂ ಕೂಡ ತಲುಪುತ್ತದೆ. ಅದರಲ್ಲೂ ಜೀವಂತ ವ್ಯಕ್ತಿಯೇ ಎದುರುಗಡೆ ಇದ್ದಾಗ ಆತನ ಎದುರಿಗೆ ಅವನ ಜೀವನದ ಕಥೆಯನ್ನು ಮಾಡಿ ತೋರಿಸುವುದು ಕ?ಕರ ವಿ?ಯ ಮಂಜಮ್ಮ ಜೋಗತಿಯವರು ಹೇಳಿದಂತೆ ಅಂತವರಿಗೆ ಎರಡು ಎದೆ ಗುಂಡಿಗೆ ಇರಬೇಕು. ಅದೇ ರೀತಿ ತುಳಸಿ ಗೌಡರವರು ಕೂಡ ಯಾವ ಸಸ್ಯ ವಿಜ್ಞಾನಿಗೂ ಕಡಿಮೆ ಇಲ್ಲದಂತೆ ಸಾಧನೆ ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ಡಾ|| ಧನಂಜಯ ಸರ್ಜಿ, ನಿವೇದನ್ ನೆಂಪೆ, ಕಾಮಿಡಿ ಕಿಲಾಡಿ ಕಲಾವಿದ ಸದಾನಂದ ಕಾಳೆ, ಉಮೇಶ್ ಹಾಲಡಿ, ಗಾಯತ್ರಿ, ಬಿ. ನೇತ್ರಾವತಿ ಗೌಡ ವಕೀಲರಾದ ಕೆ.ಪಿ. ಶ್ರೀಪಾಲ್, ಕಾಮಾನ್‌ಮ್ಯಾನ್ ಸಂಸ್ಥೆ ಅಧ್ಯಕ್ಷರಾದ ಗಣೇಶ್ ಬಿಳಿಗಿ, ನಿರ್ದೇಶಕರಾದ ಮಂಜುನಾಥ್ ಎಸ್.ಆರ್, ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖಾಮುಖಿ ಸಂಸ್ಥೆಯ ಅಧ್ಯಕ್ಷ ಮಂಜು ರಂಗಾಯಣ ವಹಿಸಿದ್ದರು.