Site icon TUNGATARANGA

ನಾಳೆಯಿಂದ ಶಿವಮೊಗ್ಗ ನಗರದಲ್ಲೊಂದು 2 ದಿನ ಎನ್‌ಇಎಸ್ “ಹಬ್ಬ”| , ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ ಹಾಸ್ಯ, ಭಾಷಣಕಾರ ಗಂಗಾವತಿ ಪ್ರಾಣೇಶ್, ನಟ ವಸಿಷ್ಠ ಸಿಂಹ ಆಗಮನ

ಶಿವಮೊಗ್ಗ,
ಬಡ ಹಾಗೂ ಮದ್ಯಮವರ್ಗದ ಮಕ್ಕಳಿಗೆ ಉತ್ತಮವಾದ ಹಾಗೂ ಉನ್ನತ ಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಆರಂಭಗೊಂಡ ರಾಷ್ಟ್ರೀಯ ಶಿಕ್ಷಣ ಸಮಿತಿ ೭೫ರ ಸಂಭ್ರಮ ಮುಗಿಸಿ ಕಳೆದ ವರ್ಷದಿಂದ ನಡೆದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಕ್ಷಣಗಣನೆ ಆರಂಭ ಗೊಂಡಿದೆ.


ಪ್ರಸ್ತುತ ೨೬ ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಎನ್‌ಇಎಸ್‌ನ ಸಂಸ್ಥೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಇಲ್ಲಿಯ ವರೆಗೆ ಕಟ್ಟಿ ಬೆಳೆಸಿದ ಅಧ್ಯಕ್ಷರು ಗೌರವ ಕಾರ್ಯದರ್ಶಿಗಳು ಹಾಗೂ ಪದಾಧಿಕಾ ರಿಗಳು, ನಿರ್ದೇಶಕರುಗಳನ್ನು ಸ್ಮರಿಸುವ ಜೊತೆಗೆ ಎನ್‌ಇಎಸ್ ಹಬ್ಬವನ್ನು ಶಿವಮೊಗ್ಗ ನಗರದಲ್ಲೊಂದು ವಿಶೇಷ ರಂಗಾಗಿ ಮೂಡಿಸುವಲ್ಲಿ ಪ್ರಸಕ್ತ ಆಡಳಿತ ಮಂಡಳಿ ಕಟಿಬದ್ದವಾಗಿದೆ.
ಶಿಕ್ಷಣದ ಗುಣಮಟ್ಟವನ್ನು ಒಂದೆಡೆ ಅತ್ಯುತ್ತಮವಾಗಿ ರೂಪಿಸಿ ಪ್ರವೇಶ ಶುಲ್ಕವನ್ನು ಬಡ ಹಾಗೂ ಮದ್ಯಮವರ್ಗದ ಮಕ್ಕಳಿಗೆ ಭಾರವಾಗದಂತೆ ರೂಪಿಸಿರುವ ಸಂಸ್ಥೆಯ ಹಿರಿಯರು ಶಿವಮೊಗ್ಗದ ಅತ್ಯಂತ ಪ್ರಬುತ್ವದ ಹಾಗೂ ಪ್ರಧಾನ ಶಿಕ್ಷಣ ಸಂಸ್ಥೆಯನ್ನಾಗಿ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.


ಸಂಸ್ಥೆಯ ಪ್ರಸಕ್ತ ಅಧ್ಯಕ್ಷ ಜಿ.ಎಸ್. ನಾರಾಯಣ್ ರಾವ್, ಪ್ರಧಾನ ಕಾರ್ಯ ದರ್ಶಿ ಎಸ್.ಎನ್.ನಾಗರಾಜ್, ಉಪಾ ಧ್ಯಕ್ಷ ಸಿ.ಆರ್.ನಾಗರಾಜ್, ಸಹಕಾರ್ಯ ದರ್ಶಿ ಡಾ. ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಹಿರಿಯ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣಶ್ರೇಷ್ಠಿ ಹಾಗೂ ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು, ವಿಶೇಷವಾಗಿ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕವೃಂದ, ಆಡಳಿತ ಅಧಿಕಾರಿಗಳು ಹಾಗೂ ಪ್ರಬುದ್ಧ ಮಕ್ಕಳ ಕೂಟ ಇಂತಹದೊಂದು ಯಶಸ್ವಿ ಹಬ್ಬದ ಆಚರಣೆಗೆ ತಯಾರಿ ನಡೆಸಿದೆ.

.


ನಾಳೆ ಬೆಳಗ್ಗೆ ೧೦ ಗಂಟೆಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಹಾಸ್ಯ, ಭಾಷಣಕಾರ ಗಂಗಾವತಿ ಪ್ರಾಣೇಶ್ ಆಗಮಿಸಲಿದ್ದಾರೆ. ಸಂಜೆ ಶಾಸಕ ಚೆನ್ನಬಸಪ್ಪ ಅವರಿಗೆ ಗೌರವಿಸಲಾಗುತ್ತಿದೆ. ಸಂಸ್ಥೆಯ ೧೦ ಸಾವಿರಕ್ಕೂ ಹೆಚ್ಚು ಮಕ್ಕಳು ಈ ಹಬ್ಬದಲ್ಲಿ ನಡೆಯಲಿರುವ ಸಾಂಸ್ಕೃತಿಕ ವೈಭವದಲ್ಲಿ ಭಿನ್ನ-ವಿಭಿನ್ನ ಕಾರ್ಯಕ್ರಮಗಳು ನೀಡಲಿದ್ದಾರೆ.


ಜೂನ್.೨೧ರಂದು ಸಮಾರೋಪ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ, ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ ಅವರು ಸಮಾರೋಮ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಆಹ್ವಾನಿಸಲಾಗಿದೆ.

Exit mobile version