Site icon TUNGATARANGA

ಸಾಗರ | 75 ಕೋಟಿ ರೂಗಳ ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ ಡೆಕ್ ಸ್ಲ್ಯಾಬ್ | ಮೋರಿ ಕುಸಿದು ಶಾಲಾ ಬಸ್ಸು ಸಿಲುಕಿಕೊಂಡಿರುವ ಘಟನೆ


ಸಾಗರ: ಸಾಗರ ಪಟ್ಟಣದ ವ್ಯಾಪ್ತಿಯಲ್ಲಿ ೭೫ ಕೋಟಿ ರೂಗಳ ಮೊತ್ತದ ಯೋಜನೆಯಲ್ಲಿ ನಿರ್ಮಾಣ ವಾಗುತ್ತಿರುವ ದ್ವಿಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಡೆಕ್ ಸ್ಲ್ಯಾಬ್ ಮೋರಿ ಕುಸಿದು ಶಾಲಾ ಬಸ್ಸು ಸಿಲುಕಿಕೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಂದ ವರದಹಳ್ಳಿ ರಸ್ತೆಗೆ ತಿರುಗುವ ಮೋರಿ ಕುಸಿದರೂ ಅದೃಷ್ಟವಶಾತ್ ವಿದ್ಯಾರ್ಥಿ ಗಳು ಬಚಾವ್ ಆಗಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಸಾಗರ ಪಟ್ಟಣದ ತ್ಯಾಗರ್ತಿ ಕ್ರಾಸ್‌ನಿಂದ ಆರಂಭವಾಗಿ ಎಲ್.ಬಿ. ಕಾಲೇಜಿನವರೆಗೂ ಕಳೆದ ೪ ತಿಂಗಳಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ .ತರಾತುರಿಯಲ್ಲಿ ಚುನಾವಣೆ ಬರುತ್ತಿದೆಯೆಂದು ಹಿಂದಿನ ಶಾಸಕ ಹಾಲಪ್ಪನವರು ಗುತ್ತಿಗೆದಾರರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಬಿಯಂತರರುಗಳಿಗೆ ಒತ್ತಡ ಹೇರಿ ತಮ್ಮ ಅವಧಿಯ ಅಬಿವೃದ್ಧಿ ಯೋಜನೆ ಪ್ರದರ್ಶಿಸುವ ಸಲುವಾಗಿ ಡೆಕ್ ಸ್ಲ್ಯಾಬ್ ಚರಂಡಿ ಕಾಮಗಾರಿ ಯನ್ನು ಆರಂಭಿಸಿದ್ದರು.


ಸದರಿ ಕಾಮಗಾರಿಯಲ್ಲಿ ಲೋಪವಿರುವ ಕುರಿತು ಈಗಾಗಲೇ ವರದಿ ಮಾಡುವ ಮೂಲಕ ಸಾರ್ವಜನಿಕರ ಮತ್ತು ಅಧಿಕಾರಿಗಳ ಗಮನಸೆಳೆಯುವ ಕೆಲಸವನ್ನು ಮಾಡಲಾಗಿತ್ತು.ಹೆದ್ದಾರಿ ಕಾಮಗಾರಿಯ ಶಿಸ್ತು ಉಲ್ಲಂಘನೆ ಯಾಗುತ್ತಿರುವ ಕುರಿತು ಸಚಿತ್ರ ವರದಿ ಮಾಡಿದ್ದರೂ ಇಂಜಿನಿಯರ್ ಮತ್ತು ಗುತ್ತಿಗೆದಾರರು ದಿವ್ಯ ನಿರ್ಲಕ್ಷ್ಯವಹಿಸಿದ್ದರು.


ಪ್ರಸ್ತುತ ಶಾಲೆಗೆ ವಿದ್ಯಾರ್ಥಿ ಗಳನ್ನು ತುಂಬಿಕೊಂಡು ಹೊರಟಿದ್ದ ಖಾಸಗಿ ಶಾಲಾ ಬಸ್ಸು ಹೆದ್ದಾರಿ ಅಗಲೀಕರಣ ದಿಂದ ನಿರ್ಮಿಸಲಾಗಿದ್ದ ಡೆಕ್ ಸ್ಲ್ಯಾಬ್ ಮೇಲೆ ಬರುತ್ತಿದ್ದಂತೆ ಮೋರಿ ಕುಸಿದು ಬಸ್ಸು ಸಿಲುಕಿ ಕೊಂಡಿತು,ಬಸ್ಸಿನ ಹೌಸಿಂಗ್ ಸಮೀಪದ ಯೂತ್‌ಮಿಲ್ಲರ್ ಸ್ಟಾರ್‌ಫುಲ್ಲಿ ಕಳಚಿ ಕೊಂಡಿತು.ತಕ್ಷಣ ಬಸ್ಸಿನಲ್ಲಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿ ಇಳಿದು ಬೇರೆ ವಾಹನದಲ್ಲಿ ಶಾಲೆಗೆ ತೆರಳಿದರು.

.


ಹೆದ್ದಾರಿ ಕಾಮಗಾರಿ ನಿರ್ಮಿಸುತ್ತಿರುವ ಗುತ್ತಿಗೆ ದಾರರು ರೋಡ್‌ಕ್ರಾಸಿಂಗ್ ಮೋರಿಗಳಿಗೂ ಕೇವಲ ೮ ಎಂ.ಎಂ ರಾಡುಗಳ ಅಳವಡಿಸಿರುವುದು ರಸ್ತೆ ಕುಸಿತಕ್ಕೆ ಕಾರಣವಾಗಿದೆ. ಹೆದ್ದಾರಿಂದ ವಿವಿಧ ರಸ್ತೆಗಳಗೆ ಕ್ರಾಸ್ ಮಾಡುವ ಚರಂಡಿ ಮೇಲಿನ ಮೊರಿ ಗಳನ್ನು ಬಲೀಷ್ಠ ಉತ್ತಮ ಗುಣಮಟ್ಟದ ರಾಡುಗಳ ಅಳವಡಿಸುವ ಮೂಲಕ ಗುಣಮಟ್ಟದ ಕಾಮಗಾರಿ ಮಾಡದಿರುವುದು ದುರಂತಕ್ಕೆ ಕಾರಣವಾಗುತ್ತಿದೆ.
ಹೆದ್ದಾರಿ ನಿರ್ಮಿಸುವ ಗುತ್ತಿಗೆದಾರರು ಚುನಾವಣಾ ಉದ್ದೇಶದಿಂದ ಎಲ್‌ಬಿ ಕಾಲೇಜು ಸಮೀಪ ಕುಗ್ವೆ ಯಿಂದ ತ್ಯಾಗರ್ತಿ ಕ್ರಾಸ್ ವರೆಗೂ ಏಕಕಾಲದಲ್ಲಿ ಕಾಮಗಾರಿ ಆರಂಭಿಸಿರು ವುದು ಅವೈಜ್ಞಾನಿಕ ಹಾಗೂ ಸಾರ್ವಜನಿಕರುಗಳಿಗೆ ತೀವ್ರ ಅಡಚಣೆಗೆ ಕಾರಣ ವಾಗಿದೆ.ಈಗ ಮಳೆಗಾಲ ಆರಂಭವಾಗುತ್ತಿದ್ದಂತೆ ಮುಂದಿನ ೪-೫ ತಿಂಗಳು ರಸ್ತೆ ಕಾಮಗಾರಿ ಸ್ಥಗಿತ ಗೊಳ್ಳುತ್ತದೆ.ಮಳೆಯ ನೀರು ರಸ್ತೆಗೆ ಹಾಗೂ ಸುತ್ತಲಿನ ಮನೆಗಳಿಗೆ ನುಗ್ಗುವ ಅಪಾಯವೂ ಇರುತ್ತದೆ.


ನಿಜವಾಗಿಯೂ ಅಭಿವೃ ದ್ಧಿಯ ಕಾಳಜಿ ಹಾಗೂ ಗುಣಮಟ್ಟದ ಕಾಮಗಾರಿ ಯಾಗಬೇಕಿದ್ದರೇ ಒಂದು ದಿಕ್ಕಿನಿಂದ ಹೆದ್ದಾರಿ ಕಾಮಗಾರಿ ಆರಂಭಿಸಿ ಚರಂಡಿಯ ಕಾಮಗಾರಿಯ ಜೊತೆಗೆ ಡಾಂಬರೀಕರಣ ಮಾಡುತ್ತಾ ಹೋಗಿದ್ದರೇ ಒಂದು ದಿಕ್ಕಿನಿಂದ ಪರಿಪೂರ್ಣ ರಸ್ತೆಯಾಗು ತ್ತಿತ್ತು.ಎಲ್ಲಿಗೆ ಮಳೆಗಾಲ ಬರುತ್ತದೋ ಅಲ್ಲಿಂದ ಮುಂದೆ ಮುಂದಿನ ಬೇಸಿಗೆಯಲ್ಲಿ ಉಳಿದ ಕಾಮಗಾರಿ ಮಾಡುವುದರಿಂದ ಜನರಿಗೂ ಅಡಚu ಯಾಗುತ್ತಿರಲಿಲ್ಲ.


ಆದರೇ ಅಸಲಿ ವಿಷಯವೇ ಬೇರೆಯಿದೆ.ಹೆದ್ದಾರಿ ಯೋಜನೆ ನಿರ್ವಹಣೆಯ ಹಾಗೂ ಒಟ್ಟಾರೆ ಎಲ್ಲಾ ಕಾಮಗಾರಿಗಳ ಹೊಣೆ ಹೊತ್ತಿರುವ ಇಂಜಿನಿಯರುಗಳಿಗೆ ಹಾಲಪ್ಪನವರ ಧಮಕಿ ಹೇಗಿತ್ತು ಎಂದರೇ ಚುನಾವಣಾ ಪೂರ್ವ ದಲ್ಲಿ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪ್ರಗತಿ ಸಾಧಿಸದೇ ಇದ್ದಲ್ಲಿ ಉತ್ತಮ ಬೆಳೆ ಬರುವ ಹೊತ್ತಿನಲ್ಲಿ ನಿಮ್ಮನ್ನು ಎತ್ತಂಗಡಿ ಮಾಡಿಸಬೇಕಾಗುತ್ತದೆ ಎನ್ನುವ ಮೂಲಕ ಕಾಮಗಾರಿಗಳ ಪರ್ಸೆಂಟೇಜ್ ಫಲ ಸಿಗದಂತೆ ಮಾಡುತ್ತೇನೆ ಎಂದು ಹೆದರಿಸಿ ತರಾತುರಿಯಲ್ಲಿ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಮಾಡಿಸಿರುವ ಕಾಮಗಾರಿಗಳು ಗುಣಮಟ್ಟವನ್ನು ಕಳೆದುಕೊಂಡಿವೆ.


ಈಗಲೂ ಕಾಲ ಮಿಂಚಿಲ್ಲ.ಹೆದ್ದಾರಿಯಿಂದ ಅಡ್ಡ ರಸ್ತೆಗಳ ಚರಂಡಿ ಮೇಲಿನ ಸ್ಲ್ಯಾಬ್‌ಗಳ ಗುಣಮಟ್ಟದ ಕಾಮಗಾರಿಗೆ ನೂತನ ಶಾಸಕರು ಕ್ರಮವಹಿಸಬೇಕು.ಮುಂದೆ ಅನಾಹುತಗಳು ಮಳೆ ಗಾಲದಲ್ಲಿ ಸಂಬವಿಸದಂತೆ ಜಾಗೃತೆವಹಿಸುವಂತೆ ಆಗ್ರಹಿಸಿರುವ ಸಾರ್ವಜನಿಕರು ೭೫ ಕೋಟಿ ರೂಗಳ ಕಾಮಗಾರಿಯ ಡ್ರಾಯಿಂಗ್ ಹಾಗೂ ಗುತ್ತಿಗೆದಾರರ ಹೆಸರು ಮತ್ತು ಕಾಮಗಾರಿಯ ವಿವರಗಳ ಪ್ಲಕ್ಸ್‌ಬೋರ್ಡ್ ಅಳವಡಿಸುವಂತೆ ಒತ್ತಾಯಿಸಿದ್ದಾರೆ.

Exit mobile version