Site icon TUNGATARANGA

ನಿವೃತ್ತ ಉಪನ್ಯಾಸಕಿ ಅಂಜನಾ ಗೋವಿಂದರಾಜು ನಿಧನ

ಶಿವಮೊಗ್ಗ,ಅ.26:

ನಗರದ ಕಸ್ತೂರ ಬಾ ಪ್ರೌಢಶಾಲೆ ಹಾಗೂ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶ್ರೀಮತಿ ಅಂಜನಾ ಗೋವಿಂದರಾಜು ಅವರು ಇಂದು (ಅಕ್ಟೋಬರ್ 25) ರಾತ್ರಿ 8 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 70 ವರ್ಷ ವಯಸ್ಸಾಗಿತ್ತು. ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಧಾರವಾಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದ ಅಂಜನಾ ಅವರು ಖ್ಯಾತ ಲೇಖಕ, ಶಿರಾಳಕೊಪ್ಪದ ಭೀಮಪ್ಪ ಮೇಷ್ಟ್ರ ಪುತ್ರಿ. ಸಾಹಿತ್ಯ ಚಟುವಟಿಕೆಯಲ್ಲಿ ಆಸಕ್ತರಾಗಿದ್ದ ಇವರು ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪತಿ ದಿವಂಗತ ಗೋವಿಂದರಾಜು ಅವರು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಶ್ರೀಮತಿ ಅಂಜನಾ ಗೋವಿಂದರಾಜು ಅವರು ಮೂರು ದಶಕಗಳ ಕಾಲ ಬೋಧಕರಾಗಿ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದರು.

ಇವರ ಅಂತ್ಯ ಸಂಸ್ಕಾರವು ಬೆಂಗಳೂರಿನಲ್ಲಿ ಸೋಮವಾರ (ಅಕ್ಟೋಬರ್ 26) ಮಧ್ಯಾಹ್ನ ನಡೆಯಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Exit mobile version