Site icon TUNGATARANGA

ಮೆಕ್ಕೆಜೋಳ ತಂತ್ರಜ್ಞಾನದಿಂದ ಕ್ಯಾರಿ ಬ್ಯಾಕ್‌ |ಒನ್‌ನೆಸ್ ಸಲೂಷನ್ ಸಂಸ್ಥೆಯ ಮುಖ್ಯಸ್ಥ ಎ.ಎನ್. ಪ್ರಕಾಶ್

ಶಿವಮೊಗ್ಗ
ಒನ್‌ನೆಸ್ ಸಲೂಷನ್ ಸಂಸ್ಥೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮೆಕ್ಕೆಜೋಳದಿಂದ ತಂತ್ರಜ್ಞಾ ನದ ಮೂಲಕ ವಿಶೇಷ ಕ್ಯಾರಿ ಬ್ಯಾಗ್‌ಗಳನ್ನು ತಯಾರಿಸಿದೆ. ಇದು ಪರಿಸರಸ್ನೇಹಿಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಎ.ಎನ್. ಪ್ರಕಾಶ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕ್ಯಾರಿಬ್ಯಾಗುಗಳು ಪ್ಲಾಸ್ಟಿಕ್ ಬ್ಯಾಗಿಗಿಂತ ಭಿನ್ನವಾಗಿರುತ್ತವೆ. ಪರಿಸರಕ್ಕೆ ಮಾರಕವಾಗುವುದಿಲ್ಲ. ಮಣ್ಣಿಗೆ ಸೇರಿದರೂ ತೊಂದರೆಯಾಗುವುದಿಲ್ಲ. ಸುಲಭವಾಗಿ ಮಣ್ಣಿನ ಜೊತೆ ಮಣ್ಣಾಗುತ್ತದೆ. ಸುಟ್ಟರೆ ಕಾರ್ಬನ್ ಡೈ ಆಕ್ಷೈಡ್ ಪರಿಸರವನ್ನು ಸೇರುವುದಿಲ್ಲ. ಬದಲಾಗಿ ಬೂದಿಯಾಗುತ್ತದೆ. ಪ್ರಾಣಿಗಳು ಸೇವಿಸಿದರೂ ಆರೋಗ್ಯಕ್ಕೆ ಹಾನಿ ಆಗವುದಿಲ್ಲ. ಇದು ಪರಿಸರ ಸ್ನೇಹಿ ಮತ್ತು ರೈತಸ್ನೇಹಿಯಾಗಿದೆ ಎಂದರು.


ಎಲ್ಲಾ ಅಳತೆಯ ಕ್ಯಾರಿ ಬ್ಯಾಗುಗಳ ಉತ್ಪಾದನೆಯನ್ನು ನಾವು ಆರಂಭಿಸಿದ್ದೇವೆ. ಈಗಾಗಲೇ ಹೊರದೇಶಗಳಿಗೂ ರಫ್ತು ಮಾಡಿದ್ದೇವೆ. ಭಾರತದ ದೊಡ್ಡ ದೊಡ್ಡ ಕಂಪೆನಿಗಳು ನಮ್ಮ ಉತ್ಪಾದನೆಯ ಬ್ಯಾಗುಗಳನ್ನು ಖರೀದಿಸುತ್ತಿವೆ. ಪರಿಸರ ನಾಶಕ್ಕೆ ಪ್ಲಾಸ್ಟಿಕ್ ಕಾರಣ ಎಂದು ಈಗಾಗಲೇ ಗೊತ್ತಾಗಿದೆ. ಇದಕ್ಕೆ ಪರ್ಯಾಯ ಏನು ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿತ್ತು. ಅದನ್ನು ನಮ್ಮ ಸಂಸ್ಥೆ ಈಗ ನಿವಾರಿಸಿದೆ. ಕೇವಲ ಮೆಕ್ಕೆಜೋಳದಿಂದ ಹೊಸ ತಂತ್ರಜ್ಞಾನದ ಮೂಲಕ ಈ ಬ್ಯಾಗನ್ನು ತಯಾರಿಸುತ್ತಿದ್ದೇವೆ. ಮೆಕ್ಕೆಜೋಳವನ್ನು ರೈತರು ಹೆಚ್ಚು ಬೆಳೆಯುವುದರಿಂದ ರೈತರಿಗೂ ಇದು ಅನುಕೂಲವಾಗುತ್ತದೆ ಎಂದರು.


ಸಂಸ್ಥೆಯ ರೋಹಿತ್ ಮಾತನಾಡಿ, ನಾವು ಉತ್ಪಾದಿಸುವ ಜೈವಿಕ ಕ್ಯಾರಿ ಬ್ಯಾಗುಗಳಿಗೆ ಡಿ.ಆರ್.ಡಿ.ಒ ಮಾನ್ಯತೆ ನೀಡಿದೆ. ಈಗಾಗಲೇ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದೆ. ಈ ಎಲ್ಲಾ ಪರೀಕ್ಷೆಗಳಲ್ಲೂ ನಮ್ಮ ಕ್ಯಾರಿಬ್ಯಾಗ್ ಪರಿಸರಸ್ನೇಹಿಯಾಗಿದೆ ಎಂಬು ದನ್ನು ದೃಢಪ ಡಿಸಿದೆ ಎಂದು ಪ್ರಾತ್ಯಕ್ಷತೆಯ ಮೂಲಕ ತೋರಿಸಿದರು. ಒನ್‌ನೆಸ್ ಸಲ್ಯೂಷನ್ಸ್ ಬ್ಯಾಗು ಗಳು ಕಾರ್ಬನ್‌ಮುಕ್ತವಾಗಿವೆ. ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹಕ್ಕೆ ದೊಡ್ಡ ಬ್ಯಾಗುಗಳು, ದಿನಸಿ ಪದಾರ್ಥಗಳಿಗಾಗಿ ಎಲ್ಲಾ ಅಳತೆಯ ಚೀಲಗಳು, ಊಟದ ಟೇಬಲ್ ಮೇಲೆ ಹಾಸಬಲ್ಲ ಶೀಟು ಗಳನ್ನು ನಾವು ತಯಾರಿಸುತ್ತಿದ್ದೇವೆ ಎಂದರು.


ವಿತರಕ ಗಣೇಶ್ ಎಂ. ಅಂಗಡಿ ಮಾತನಾಡಿ, ಜೂನ್.೧೯ರಂದು ಬೆಳಿಗ್ಗೆ ೯-೩೦ಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಜೈವಿಕ ಕ್ಯಾರಿ ಬ್ಯಾಗ್ ಮತ್ತಿತರ ಉತ್ಪನ್ನಗಳ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಕಾರ್ಯಕ್ರಮ ಉದ್ಘಾಟಿ ಸುವರು. ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಜೈವಿಕ ಉತ್ಪನ್ನಗಳನ್ನು ಬಿಡುಗಡೆ ಮಾಡುವರು. ಶಾಸಕ ಎಸ್.ಎನ್. ಚನ್ನಬಸಪ್ಪ, ಕೈಗಾರಿಕಾ ಸಂಘದ ಅಧ್ಯಕ್ಷ ಎಂ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

Exit mobile version