Site icon TUNGATARANGA

ನಗರದಲ್ಲಿ ಬಾಲಕಾರ್ಮಿಕ ಪತ್ತೆ: ಕಾರ್ಮಿಕ ಇಲಾಖೆಯಿಂದ ರಕ್ಷಣೆ


ಶಿವಮೊಗ್ಗ, ಜೂನ್ 16, ಶಿವಮೊಗ್ಗ ನಗರದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ” ಪ್ರಯುಕ್ತ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿಕಾಯ್ದೆ

2016ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮ ಮತ್ತು ತಪಾಸಣೆಯನ್ನು ಹಮ್ಮಿಕೊಂಡಿದ್ದು. ತಪಾಸಣೆಯಲ್ಲಿ ಒರ್ವ ಬಾಲಕಾರ್ಮಿಕ ಮೇಲಿನ ತುಂಗಾನಗರದ ಗುಜರಿ ಅಂಗಡಿಯಲ್ಲಿ ಪತ್ತೆಯಾಗಿರುತ್ತನೆ.


ಈ ಬಾಲಕನನ್ನು ಕೆಲಸದ ಸ್ಥಳದಿಂದ ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗಿದ್ದು, ನಂತರ ಮಾಲೀಕರ ಮೇಲೆ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕÀ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ 2016ರಡಿ ಪ್ರಕರಣ ದಾಖಲಿಸಲಾಯಿತು.


ಈ ತಂಡದಲ್ಲಿ ಕಾರ್ಮಿಕ ನಿರೀಕ್ಷಕಿ ಸುಖೀತ ಕೆ.ಸಿ., ಯೋಜನಾ ನಿರ್ದೇಶಕ ರಘುನಾಥ ಎ,ಎಸ್., ಮಕ್ಕಳ ಸಹಾಯವಾಣಿಯ ಪ್ರಮೋದ್ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Exit mobile version