Site icon TUNGATARANGA

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್‌ಗೆ ಮಾಹಿತಿ ಹಕ್ಕು ಆಯೋಗದಿಂದ ದಂಡ ! ಯಾಕೆ ಗೊತ್ತಾ ?

ಹಿಂದಿನ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್ ಅವರಿಗೆ ಮಾಹಿತಿಹಕ್ಕು ಆಯೋಗ ೧೦ಸಾವಿರ ರೂ. ದಂಡ ವಿಧಿಸಿದ ಎಂದು ತಾಲ್ಲೂಕು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗೌಡ ಅದರಂತೆ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಅವರಿಗೆ ಎರಡನೇ ಬಾರಿ ಮಾಹಿತಿ ಹಕ್ಕು ಆಯೋಗ ದಂಡ ವಿಧಿಸಿದೆ ಎಂದು ಹೇಳಿದರು.


ತಾಲ್ಲೂಕಿನ ಭಾರಂಗಿ ಹೋಬಳಿಯ ಇಡುವಾಣಿ ಗ್ರಾಮದ ಸರ್ವೇ ನಂ. ೨೬ರಲ್ಲಿ ಸಾಗರ ನಗರದ ಕೆಲವು ಭೂಮಾಫಿಯಾ ವ್ಯಕ್ತಿಗಳಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಚಂದ್ರಶೇಖರ ನಾಯ್ಕ್ ಮಾಹಿತಿ ನೀಡಲು ಸತಾಯಿಸಿದ್ದರು. ಫ್ರಾನ್ಸಿಸ್ ಡಯಾಸ್ ಈ ಬಗ್ಗೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಲು ಸೂಚನೆ ನೀಡಿದ್ದಾಗ್ಯೂ ಚಂದ್ರಶೇಖರ್ ನಾಯ್ಕ್ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಆಯೋಗವು ೧೦ಸಾವಿರ ರೂ. ದಂಡ iತ್ತು ಮಾಹಿತಿ ನೀಡಲು ಆದೇಶ ಮಾಡಿತ್ತು ಎಂದು ಹೇಳಿದರು.


ಆದರೆ ನಿಗಧಿತ ಅವಧಿಯೊಳಗೆ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ದಂಡ ಕಟ್ಟದೆ ಆಯೋಗ ವನ್ನು ಯಾಮಾರಿಸಿದ್ದಾರೆ. ತಹಶೀಲ್ದಾರ್ ಮಾಹಿತಿ ನೀಡದೆ ಇರುವುದರಿಂದ ಫ್ರಾನ್ಸಿಸ್ ಡಯಾಸ್ ಆಯುಕ್ತರಿಗೆ ದೂರು ನೀಡಿದ್ದರು. ತಹಶೀಲ್ದಾರ್ ಅವರು ನಂತರ ದಂಡ ಕಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಹ ಚಂದ್ರಶೇಖರ್ ನಾಯ್ಕ್ ೧೦ಸಾವಿರ ರೂ. ದಂಡ ಕಟ್ಟಿದ್ದಾರೆ. ಹಿಂದೆ ದಂಡ ಕಟ್ಟಿದ್ದ ಹಣದ ರಶೀದಿಯನ್ನು ಆಯೋಗಕ್ಕೆ ನೀಡಿ ವಂಚಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅರ್ಜಿದಾರರು ತಕಾರರು ಸಲ್ಲಿಸಿದ್ದರು. ಮಾಹಿತಿಹಕ್ಕು ಆಯೋಗಕ್ಕೆ

ವಂಚಿಸಿದ್ದರಿಂದ ಚಂದ್ರಶೇಖರ್ ನಾಯ್ಕ್‌ಗೆ ಖಡಕ್ ಸೂಚನೆ ಆಯೋಗ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಚಂದ್ರಶೇಖರ್ ನಾಯ್ಕ್ ಕೋರ್ಟ್ ಹಾಲ್ ೨ರಕ್ಕೆ ಹಣ ಪಾವತಿ ಮಾಡಿದ್ದಾರೆ. ಇದೀಗ ಚಂದ್ರಶೇಖರ್ ನಾಯ್ಕ್ ಮತ್ತೆ ಸಾಗರಕ್ಕೆ ವರ್ಗಾವಣೆಯಾಗುವ ಪ್ರಯತ್ನ ನಡೆಸುತ್ತಿದ್ದು, ಇವರ ಮೇಲೆ ಅನೇಕ ಅವ್ಯವಹಾರಗಳ ದೂರು ಇದೆ. ಲೋಕಾಯುಕ್ತಕ್ಕೆ ಸಹ ದೂರು ಸಲ್ಲಿಸಲಾಗಿದೆ. ಇವರನ್ನು ಯಾವುದೇ ಕಾರಣಕ್ಕೂ ಸಾಗರಕ್ಕೆ ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದರು.


ಗೋಷ್ಟಿಯಲ್ಲಿ ನಾಗರಾಜ್ ಚೌಡಿಮನೆ, ದೇವಪ್ರಸಾದ್ ವಿನ್‌ಫ್ರೆಡ್, ಸುಮನಾ ಹೆಗಡೆ ಇದ್ದರು.

Exit mobile version