Site icon TUNGATARANGA

ಡಯಾನ ಬುಕ್ ಗ್ಯಾಲರಿ ಯಿಂದ ಜೂ.17 ರಂದು :ಡಯಾನ ಸ್ಪೋರ್ಟ್ಸ್ ಎಂಡ್ ಟಾಯ್ಸ್ ಸಂಸ್ಥೆ ಆರಂಭ

ನಗರದ ಪ್ರತಿಷ್ಟಿತ ಪುಸ್ತಕ ಸಂಗ್ರಹ ಮಳಿಗೆಯಾದ ಡಯಾನ ಬುಕ್ ಗ್ಯಾಲರಿಯು ಇದೀಗ ತನ್ನ ಅಂಗ ಸಂಸ್ಥೆಯಾಗಿ ಡಯಾನ ಸ್ಪೋರ್ಟ್ಸ್ ಅಂಡ್ ಟಾಯ್ಸ್ ಸಂಸ್ಥೆಯನ್ನು ಪ್ರಾರಂಭಿಸಲಿದೆ.


ಪುಸ್ತಕ ಸಂಗ್ರಹ ಮತ್ತು ಮಾರಾಟದಲ್ಲಿ ಅಪಾರ ಸಾಧನೆ ಮಾಡಿರುವ ಡಯಾನ ಬುಕ್ ಗ್ಯಾಲರಿಯ ಮಾಲೀಕರಾದ ಕೆ. ಎಲ್. ಈಶ್ವರ್ ಅವರು ತಮ್ಮ ಉದ್ಯಮವನ್ನು ವಿಸ್ತರಿಸಿದ್ದು, ಕ್ರೀಡೆ ಮತ್ತು ಮಕ್ಕಳ ಆಟಿಕೆಗಳ ಲೋಕಕ್ಕೆ ಕಾಲಿಡುತ್ತಿದ್ದಾರೆ.
ಜೂ.೧೭ ರಂದು ಬೆಳಗ್ಗೆ ೧೦.೩೦ ಕ್ಕೆ ಈಗಿರುವ ಡಯಾನ ಬುಕ್ ಗ್ಯಾಲರಿಯ ಕಟ್ಟಡದಲ್ಲಿಯೇ ನೂತನ ಕ್ರೀಡಾ ಸಾಮಗ್ರಿಗಳು ಮತ್ತು ಮಕ್ಕಳ ಆಟಿಕೆಗಳ ವಿಶಾಲ ಮಳಿಗೆ ಶುಭಾರಂಭಗೊಳ್ಳಲಿದೆ.


ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವ ಆನಂದಪುರದ ಬೆಕ್ಕಿನ ಕಲ್ಮಠದ ಶ್ರೀ ಡಾ.ಮಲ್ಲಿಕಾ ರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸು ವರು. ಬಿಲ್ಲಿಂಗ್ ಸಿಸ್ಟಮ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡುವರು. ಶಾರ್ವಿ ಮಹೇಶ್, ರುವಾಂಶಿ ರಾಜಶೇಖರ್. ಸ್ವರ ಮಿಥುನ್ ದೀಪ ಬೆಳಗಲಿದ್ದಾ?ರೆ. ಕ್ರೀಡಾ ವಿಭಾಗಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಲಿದ್ದಾರೆ. ಮಕ್ಕಳ ಆಟಿಕೆ ವಿಭಾಗಕ್ಕೆ ಶಾಸಕರಾದ ಬಿ.ವೈ.ವಿಜಯೇಂದ್ರ ಚಾಲನೆ ನೀಡಲಿದರೆ.

ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷ್ ಸದಸ್ಯ ಎಸ್. ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಮಾಜಿ ಅ‘ಯಕ್ಷ ಜ್ಯೋತಿ ಪ್ರಕಾಶ್, ವೈದ್ಯರಾದ ಡಾ.ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಮಾಲೀಕರಾದ ಕೆ. ಎಲ್. ಈಶ್ವರ್ ಮತ್ತವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಈ ಬಾರಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಾದ ಪ್ರಣಮ್ಯ ಮತ್ತು ಜಿ. ಎಂ. ಹರ್ಷಿತ ಅವರನ್ನು ಅಭಿನಂದಿಸಲಾಗುವುದು ಎಂದು ಈಶ್ವರ್ ತಿಳಿಸಿದ್ದಾರೆ.

Exit mobile version