Site icon TUNGATARANGA

ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ | ರಾಜಕೀಯ ಚಟಕ್ಕಾಗಿ ಉಚಿತ ಯೋಜನೆ ಕಾಂಗ್ರೆಸ್ ಘೋಷಣೆ : ಸಂಸದ ಬಿ.ವೈ. ರಾಘವೇಂದ್ರ

ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ವತಿಯಿಂದ ಇಂದು ಬೆಳಗ್ಗೆ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.


ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತ ನಾಡಿದ ಸಂಸದ ಬಿ.ವೈ. ರಾಘವೇಂದ್ರ, ರಾಜಕೀಯ ಚಟಕ್ಕಾಗಿ ಉಚಿತ ಯೋಜನೆ ಕಾಂಗ್ರೆಸ್ ಘೋಷಣೆ ಮಾಡಿತ್ತು. ಯೋಜನೆ ಜಾರಿ ಮಾಡಲು ಮೀನಮೇಷ ಎಣಿಸುತ್ತಿದೆ. ಹಿಂದಿನ ಸರ್ಕಾರದ ಯಾವುದೇ ಯೋಜನೆ ನಿಲ್ಲಿಸಬಾರದು. ಗ್ರಾಹಕರ ಮೇಲೆ ಹೊಸ ಹೊರೆ ಹೊರಿಸಬಾರದು ಎಂದರು.


ರಾಜ್ಯದ ಜನತೆ ಬುದ್ಧಿವಂತರಿದ್ದಾರೆ. ವಿದ್ಯುತ್ ಉಚಿತ ಎಂದು ಹೇಳಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಷಡ್ಯಂತ್ರದ ಮೂಲಕ ಉಚಿತವಾಗಿ ಕೊಟ್ಟ ಹಾಗೆ ಮಾಡಿ ಗ್ರಾಹಕರ ಮೇಲೆ ಬರೆ ಎಳೆದಿದೆ ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯ್ಕ್, ಪ್ರಮುಖರಾದ ರತ್ನಾಕರ್ ಶೆಣೈ, ಟಿ.ಬಿ. ಜಗದೀಶ್, ಪದ್ಮಿನಿ ಮೊದಲಾದವರಿದ್ದರು.

Exit mobile version