Site icon TUNGATARANGA

ದೊಡ್ಡ ದೊಡ್ಡ ಕನಸು ಕಾಣುವ ಮೂಲಕ ದೊಡ್ಡದಾಗಿ ಬೆಳೆಯಲು ಸಾಧ್ಯ: ಸರ್ಜಿ ಫೌಂಡೇನ್‌ನ ಖ್ಯಾತ ವೈದ್ಯ ಡಾ. ಧನಂಜಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು

ಶಿವಮೊಗ್ಗ: ಜಗತ್ತು ನಮ್ಮನ್ನು ಪ್ರೀತಿಸಬೇಕೆಂದರೆ ನಾವು ಶುಚಿಯಾಗಿರಬೇಕು ಎಂದು ಸರ್ಜಿ ಫೌಂಡೇ?ನ್‌ನ ಖ್ಯಾತ ವೈದ್ಯ ಡಾ. ಧನಂಜಯ್ ಸರ್ಜಿ ಹೇಳಿದರು.


ಅವರು ಗಾಜನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾವಸಾರ ವಿ?ನ್ ಇಂಡಿಯಾ ಮತ್ತು ಬೆಲ್ಲಾ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸ್ಯಾನಿಟರಿ ಶುದ್ಧೀಕರಣದ ಬಗ್ಗೆ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣುವ ಮೂಲಕ ದೊಡ್ಡದಾಗಿ ಬೆಳೆಯಲು ಸಾಧ್ಯ. ಹೀಗಾಗಿ ಏಕಾಗ್ರತೆಯಿಂದ ಬೋಧನಾ ಕ್ರಮ ಅನುಸರಿಸಿ ಎಂದು ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ, ಆಂತರಿಕ ಶುದ್ಧೀಕರಣ ಬಹಳ ಮಹತ್ವದ್ದಾಗಿದೆ. ಆರೋಗ್ಯದ ದೃಷ್ಟಿಯಿಂದ ಇದು ಅವಶ್ಯಕವಾಗಿದ್ದು, ವ್ಯಾಸಂಗದ ಜೊತೆಗೆ ಇದು ಕೂಡ ಅವಶ್ಯ ಎಂದು ಹೇಳಿದರು. ಕೇಳಿ ಕಲಿಯಬೇಕು, ನೋಡಿ ತಿಳಿಯಬೇಕು. ಈ ಮೂಲಕ ಜ್ಞಾಪಕಶಕ್ತಿ ವೃದ್ಧಿಯಾಗಿಸಿಕೊಳ್ಳಲು, ವಿದ್ಯಾರ್ಥಿನಿಯರು ಮುಂದಾಗಬೇಕು ಎಂದರು.


ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಸಾಮಗ್ರಿಗಳನ್ನು ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಬೆಲ್ಲಾ ಸಂಸ್ಥೆಯ ಮುಖ್ಯಸ್ಥ ಮನೋಹರ್‌ಬಾಬು, ಶಾಲೆಯ ಪ್ರಾಂಶುಪಾಲ ಅರುಣ್ ಕುಮಾರ್, ಬಿವಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರ ಗಜೇಂದ್ರನಾಥ್ ಮಾಳೋದೆ, ಸಂಸ್ಥೆಯ ಕಾರ್ಯದರ್ಶಿ ಸಚಿನ್ ಬೇದ್ರೆ, ಮಮತಾ ಕಮಲಾಕರ್, ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಶೋಕ್‌ಕುಮಾರ್, ಸೇರಿದಂತೆ ಹಲವರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿವಿಐ ಅಧ್ಯಕ್ಷ ಪ್ರಭಾಕರ್ ವಹಿಸಿದ್ದರು.

Exit mobile version