Site icon TUNGATARANGA

ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಎಂ ಕೆ ಸುರೇಶ್ ಕುಮಾರ್ ಆಯ್ಕೆ


ಶಿವಮೊಗ್ಗ, ಜೂ.13:
ಶಿವಮೊಗ್ಗದ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕಿನ 2023-24ನೇ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಹಿರಿಯ ಸಹಕಾರಿ ಧುರೀಣರು ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರು ಬ್ಯಾಂಕಿನ ಹಿರಿಯ ನಿರ್ದೇಶಕರಾದ ಎಂ ಕೆ ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.


ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚುನಾವಣಾಧಿಕಾರಿಯದ ರುದ್ರಪ್ಪನವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೆ ರಂಗನಾಥ್ ಖಜಾಂಚಿಯಾದ ರುಕ್ಮಿಣಿ ವೇದ ವ್ಯಾಸ ರವರು ನಿರ್ದೇಶಕರಾದ ಎಸ್ ಪಿ ಶೇಷಾದ್ರಿ, ಸಿ ಹೊನ್ನಪ್ಪ, ಜಿ ಚಂದ್ರಶೇಖರು ಜಿ ರಾಜು, ಉಮೇಶ್ ಪುಟ್ಟಪ್ಪ ಎಮ್ ರಾಕೇಶ್, ರೇಖಾ ಚಂದ್ರಶೇಖರ್, ರಘುವೀರ್ ಸಿಂಗ್, ಸೀತಾರಾಮ್ ನಾಯಕ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಧಿಕಾರಿ ಮನೋಜ್ ಕುಮಾರ್ ಇದ್ದರು.

Exit mobile version