Site icon TUNGATARANGA

ಶಾಸಕ ಗೋಪಾಲಕೃಷ್ಣ ಬೇಳೂರುರವರಿಗೆ ಸನ್ಮಾನಿಸಿ ಬೇಡಿಕೆಯನ್ನು ಈಡೇರಿಸುವಂತೆ ಮನವಿ

ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿ ಸುಮಾರು ೩೧ ಗ್ರಾಮ ಸಹಾಯಕರಿದ್ದು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾದ ಬಾಳೆಕೊಪ್ಪ ನಾಗಪ್ಪನವರ ನೇತೃತ್ವದಲ್ಲಿ ಅವರೆಲ್ಲರೂ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣರವರ ಸಾಗರದ ಅವರ ಮನೆಗೆ ತೆರಳಿ ಅದ್ದೂರಿಯಾಗಿ ಸನ್ಮಾನಿಸಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದರು.


ಗ್ರಾಮ ಸಹಾಯಕರ ಬೇಡಿಕೆಯಾಗಿರುವ ನಮ್ಮನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ನಾವು ರಾಜ್ಯದಲ್ಲಿ ಸುಮಾರು ೧೦೪೫೦ ಗ್ರಾಮ ಸಹಾಯಕರು ಕೆಲಸ ಮಾಡುತ್ತಿದ್ದು ಕಳೆದ ೪೦ವರ್ಷಗಳಿಂದ ಯಾವುದೇ ಸೇವಾ ಭದ್ರತೆ ಇಲ್ಲದೇ ಕೇವಲ ಗೌರವ ಧನದ ಅದಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದೇವೆ ನಮಗೆ ಪ್ರತಿ ತಿಂಗಳು ೧೩೦೦೦ಸಾವಿರ ಗೌರವ

ಧನ ನೀಡುತ್ತಿದ್ದು ಈಗಿನ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ನಮ್ಮ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಹಾಗೂ ನಮಗೆ ಯಾವುದೇ ಪಿ.ಎಫ್ ಮತ್ತು ಇ.ಎಸ್.ಐ ಸೌಲಭ್ಯ ಸಹ ಇರುವುದಿಲ್ಲ

ಒಂದೊಮ್ಮೆ ನಾವು ಮರಣ ಹೊಂದಿದರೆ ನಂತರ ನಮ್ಮ ಕುಟುಂಬಕ್ಕೂ ಸಹ ಯಾವುದೇ ಭದ್ರತೆ ಸಹ ಇರುವುದಿಲ್ಲ ಆದ್ದರಿಂದ ತಾವು ಈ ವಿಷಯವನ್ನು ವಿಧಾನಸಭೆಯಲ್ಲಿ ಚರ್ಚಿಸಿ ನಮಗೆ ಡಿ ಗ್ರೂಪ್ ನೌಕರರೆಂದು ಗುರುತಿಸುವಂತೆ ಮಾಡಬೇಕೆಂದು ಮನವಿ ಸಲ್ಲಿಸಿದರು.


ಮನವಿ ಸ್ವೀಕರಿಸಿದ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ನೀವು ಕೆಳುತ್ತಿರುವ ಬೇಡಿಕೆ ಸರಿಯಾಗಿದೆ ಇದನ್ನು ಕಂದಾಯ ಸಚಿವರ ಗಮನಕ್ಕೆ ಹಾಗೂ ಸರ್ಕಾರದ ಗಮನಕ್ಕೆ ತಂದು ನಿಮಗೆ ನ್ಯಾಯ ಕೊಡಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.

Exit mobile version