Site icon TUNGATARANGA

ಟೈಲರ್ಸ್ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಜಾರಿಗೊಳಿಸಲು ಶಾಸಕರಿಗೆ ಮನವಿ

ಟೈಲರ್ಸ್ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಟೇಟ್ ಟೈಲರ್ಸ್ ಅಸೋಸಿಯೇಷನ್ ಶೀವಮೊಗ್ಗ ಜಿಲ್ಲಾ ಸಮಿತಿ ಶಾಸಕ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದೆ.


ಟೈಲರ್ಸ್ ವೃತ್ತಿಪರರು ಅಸಂಘಟಿತ ಕಾರ್ಮಿಕರ ವಲಯದ ಭಾಗವಾಗಿದ್ದು, ನಿರ್ಗಮಿತ ರಾಜ್ಯ ಸರ್ಕಾ ರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಅಧಿವೇಶನದಲ್ಲಿ ಟೈಲರ್ಸ್‌ಗಳ ಮಕ್ಕಳಿಗೂ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯನ್ನು ಪ್ರಸ್ತು ವರ್ಷದಲ್ಲೇ ಜಾರಿಗೊಳಿಸಿ ಕೊಡಬೇಕೆಂದು ಅಸೋಸಿಯೇಷನ್ ವತಿಯಿಂದ ಒತ್ತಾಯಿಸಲಾಯಿತು.


ಈ ಸದಂರ್ಭದಲ್ಲಿ ಶಾಸಕರು ಕಾರ್ಮಿಕ ಅಧಿಕಾರಿ ಸುಮಾ ಅವರನ್ನು ಸ್ಥಳಕ್ಕೆ ಕರೆಸಿ ಈ ಬೇಡಿಕೆ ಈಡೇರಿಸುವಂತೆ ಸಲಹೆ ನೀಡಿದರು.
ಅಧಿಕಾರಿಗಳು ಕೂಡ ಅಸಂಘಟಿತ ಕಾರ್ಮಿಕ ವಲಯದಲ್ಲಿ ಇದುವರೆಗೆ ಟೈಲರ್ಸ್‌ಗಳ ಸಂಘ ಸೇರಿಸಿಲ್ಲ. ವೈಯಕ್ತಿಕವಾಗಿ ಟೈಲರ್ಸ್‌ಗಳು ಕಾರ್ಮಿಕ ಇಲಾಖೆಗೆ ಬಂದು ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರದ ಅಧಿಕೃತ ಸುತ್ತೋಲೆ ಬಂದ ಕೂಡಲೇ ಇವರಿಗೂ ವಿದ್ಯಾಸಿರಿ ಯೋಜನೆ ಸೌಲಭ್ಯ ಕಲ್ಪಿಸಲಾಗು ವುದು ಎಂದರು.


ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಮುಖರಾದ ಜೆ.ಎಸ್. ಸುಬ್ರಹ್ಮಣ್ಯ, ರವೀಂದ್ರ, ಡಿ.ಎಸ್. ಪರಮೇಶ್ವರಪ್ಪ ಮೊದಲಾದವರಿದ್ದರು.

Exit mobile version