Site icon TUNGATARANGA

ಬೈಕ್ ಕಳ್ಳರನ್ನ ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡ ಪೋಲಿಸರು

ಶಿವಮೊಗ್ಗ: ಮೂರು ದ್ವಿಚಕ್ರ ವಾಹನ ಕದ್ದ ಕಳ್ಳನನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಇತ್ತೀಚೆಗೆ ಸಂಜೆ ಶಿಕಾರಿಪುರ ತಾಲ್ಲೂಕಿನ ಬಿಳಕಿ ಗ್ರಾಮದ ವಾಸಿ ತಮ್ಮ ಹೀರೋ ಹೋಂಡ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದು, ಕಳ್ಳರು ಅಪಹರಿ ಸಿದ್ದರು. ಈ ಬಗ್ಗೆ ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.


ಸದರಿ ಪ್ರಕರಣದ ಆರೋಪಿ ತರು ಹಾಗೂ ಕಳುವಾದ ಬೈಕ್ ಪತ್ತೆ ಗಾಗಿ ಎಸ್‌ಪಿ ಮಿಥುನ್‌ಕುಮಾರ್ ಜಿ.ಕೆ. ತಂಡವೊಂದನ್ನು ರಚಿಸಿದ್ದರು.
ಸದರಿ ತಂಡವು ತನಿಖೆ ನಡೆಸಿ ಪ್ರಕರಣದ ಆರೋಪಿ ಶಿರಾಳ ಕೊಪ್ಪದ ಜಿಯಾವುಲ್ಲಾ ಅಲಿಯಾಸ್ ಜಿಯಾ, (೩೧) ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಶಿರಾಳ ಕೊಪ್ಪ ಪೊಲೀಸ್ ಠಾಣೆಯ ೦೧, ದಾವಣಗೆರೆ ಜಿಲ್ಲೆಯ

ಬಸವನಗರ ಪೊಲೀಸ್ ಠಾಣೆಯ ೦೧ ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯ ೦೧ ಪ್ರಕರಣ ಸೇರಿದಂತೆ ಒಟ್ಟು ೦೩ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ ೧,೧೯,೦೦೦ ರೂ.ಗಳ ೦೩ ದ್ವಿಚಕ್ರ ವಾಹನಗಳನ್ನು ಅಮಾನತು ಪಡಿಸಿಕೊಳ್ಳಲಾಗಿದೆ.


ತನಿಖಾ ತಂಡದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗ ದರ್ಶನದಲ್ಲಿ ಶಿಕಾರಿಪುರ ಉಪ ವಿಭಾಗದ ಉಪ ಅಧೀಕ್ಷಕ ಶಿವಾನಂದ ಮತ್ತು ರುದ್ರೇಶ್, ಪೊಲೀಸ್ ವೃತ್ತ ನಿರೀಕ್ಷಕರು, ಶಿಕಾರಿಪುರ ಟೌನ್ ವೃತ್ತ ರವರ ಮೇಲ್ವಿಚಾರಣೆಯ, ಮಂಜುನಾಥ್ ಎಸ್.ಕುರಿ, ಪೊಲೀಸ್ ಉಪ ನಿರೀಕ್ಷಕರು, ಶಿರಾಳಕೊಪ್ಪ ಪೊಲೀಸ್ ಠಾಣೆರವರ ನೇತೃತ್ವದ ಸಿಬ್ಬಂದಿಗಳಾದ ಹೆಚ್.ಸಿ. ಸಂತೋಷ್, ಗಿರೀಶ್, ಪಿಸಿ ಸಲ್ಮಾನ್, ಕಾರ್ತಿಕ್, ವೀರಭದ್ರಪ್ಪ, ಚಂದ್ರಪ್ಪ ಮತ್ತು ಕಾಂತೇಶ್ ಇದ್ದರು. ಸದರಿ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ

Exit mobile version