Site icon TUNGATARANGA

ಶಿವಮೊಗ್ಗದ ಬಹುತೇಕ ಪೋಲೀಸರಿಗೆ ಡ್ರಿಲ್ ಮಾಡಿಸಿದ ಎಸ್ಪಿ..,!


ಗಾಬರಿಯಾಗಬೇಡಿ ದೈಹಿಕ ಸದೃಢತೆಗೆ ಮಿಥುನ್ ಕುಮಾರ್ ತಾವೂ ಜೊತೆಗೂಡಿ ದೈಹಿಕ ಕಸರತ್ತು ನಡೆಸಿದರು


ಶಿವಮೊಗ್ಗ : ಪೊಲೀಸ್ ಇಲಾಖೆಯ ಕೆಲಸವೆಂದರೆ, ಕಾನೂನು ವ್ಯವಸ್ಥೆ ಕಾಪಾಡುವ ಜೊತೆಗೆ ಅಪರಾಧ ಚಟುವಟಿಕೆಗಳನ್ನು ಹತ್ತಿಕುವ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದುವಂತಹ ದೈಹಿಕ ಸದೃಢತೆಯನ್ನು ಹೊಂದುವಂತಹವರಿಗೆ ಸೂಕ್ತವಾದುದು.


ಸದಾ ಕಾಲ ಸಮಾಜದ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನಿಸುತ್ತಾ ಅವುಗಳನ್ನು ತಡೆಯುವ ಮೂಲಕ ಸಮಾಜಕ್ಕೆ ಯಾವುದೇ ಕಂಟಕಗಳು ಲಭಿಸದಂತೆ ನೋಡಿಕೊಳ್ಳುವ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದಾ ದೈಹಿಕ ಸಾಮರ್ಥ್ಯವನ್ನು ಹೊಂದಿರಲೇಬೇಕು.


ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಇಂದು ನಡೆಯುವ ಪೊಲೀಸ್ ಪೆರೇಡ್ ವಿಧಾನವನ್ನು ಬದಲಿಸಿ ಇಡೀ ಶಿವಮೊಗ್ಗದ ಬಹುತೇಕ ಕಡೆ ಸುಮಾರು ಏನಿಲ್ಲವೆಂದರೂ ಸಾರು 8 ಕಿಲೋಮೀಟರ್ ದೂರ ನಡೆಗೆ ಹಾಗೂ ಓಟದ ಮೂಲಕ ತಾವೂ ಭಾಗವಹಿಸಿ ಪೊಲೀಸರನ್ನು ಹಾಗೂ ಅಧಿಕಾರಿಗಳನ್ನು ಜೊತೆಗೆ ಕರೆದೊಯ್ಯುವ ಮೂಲಕ ಪೊಲೀಸರ ದೈಹಿಕ ಸಾಮರ್ಥ್ಯ ವೃದ್ಧಿಸುವಲ್ಲಿ ಅತಿ ಮುಖ್ಯ ಪಾತ್ರದ ಕಾರ್ಯವನ್ನು ಮಾಡಿದರು.


ಶಿವಮೊಗ್ಗದಲ್ಲಿ ಪೊಲೀಸರ ನಡುಗೆ ಹಾಗೂ ಓಟದ ಅಂಕಣವು ನಗರದ ಬಹುತೇಕ ಮುಖ್ಯ ರಸ್ತೆಗಳಲ್ಲಿ ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಹಿರಿಯ ಅಧಿಕಾರಿಗಳು ಕೈಜೋಡಿಸಿದ್ದು ವಿಶೇಷವಾಗಿತ್ತು.


ಸಮಗ್ರ ವಿವರ:
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ದೈಹಿಕ ಸದೃಢತೆ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಇಂದು ಬೆಳಗ್ಗೆ ಮಿಥುನ್ ಕುಮಾರ್ ಜಿ. ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈದಾನದಿಂದ ನಡಿಗೆ ಮತ್ತು ಓಟ(Walk and Run)ವನ್ನು ಪ್ರಾರಂಭಿಸಿ ಅಶೋಕ ವೃತ್ತ, ಸುಂದರಾಶ್ರಯ, ಓಟಿ ರಸ್ತೆ, ಅಮೀರ್ ಅಹಮ್ಮದ್ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ರಸ್ತೆ, ಜೈಲ್ ವೃತ್ತ, ಕುವೆಂಪು ರಸ್ತೆ, ಹೆಲಿಪ್ಯಾಡ್ ವೃತ್ತ, ಸಾಗರ ರಸ್ತೆ ಮೂಲಕ ಡಿಎಆರ್ ಪರೇಡ್ ಗ್ರೌಂಡ್ ನಲ್ಲಿ ಮುಕ್ತಾಯ ಮಾಡಲಾಯಿತು.


ನಡಿಗೆ ಮತ್ತು ಓಟ (Walk and Run) ದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಬಾಲರಾಜ್, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪ ವಿಭಾಗ, ನಿಶೀಮಪ್ಪ ಹನಕನಹಳ್ಳಿ, ಪೊಲೀಸ್ ಉಪಾಧೀಕ್ಷರು ಡಿಎಆರ್, ಶಿವಮೊಗ್ಗ, ಕು. ಬಿಂದುಮಣಿ, ಐಪಿಎಸ್ (ಪ್ರೊ), ಹರೀಶ್ ಪಟೇಲ್, ಪೊಲೀಸ್ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ, ದೀಪಕ್, ಪೊಲೀಸ್ ನಿರೀಕ್ಷಕರು, ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗ, ಮಾದಪ್ಪ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಅಂಜನ್ ಕುಮಾರ್* ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ, ಸಂತೋಷ್ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ, ಶಿವಾನಂದ ಗುಣದಾಳ್* ಆರ್.ಪಿ.ಐ ಶಿವಮೊಗ್ಗ ಡಿಎಆರ್, ಮತ್ತು ಸತೀಶ ಕುಮಾರ್ ಕೆ. ವಿ ಪೊಲೀಸ್ ನಿರೀಕ್ಷಕರು, ಜಿಲ್ಲಾ ನಿಸ್ತಂತು ಘಟಕ ಶಿವಮೊಗ್ಗ ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Exit mobile version