Site icon TUNGATARANGA

ಸಮಗ್ರ ಮಾಹಿತಿ ಅರಿತಿರುವಂತಹ ಮುಖಂಡರಿಗೆ ಆದ್ಯತೆ ? ಶಿವಮೊಗ್ಗದಲ್ಲಿ ಬಿ.ಕೆ.ಸಂಗಮೇಶ್ , ಎಲ್. ಸತ್ಯನಾರಾಯಣರಾವ್, ಹೆಚ್.ಎಸ್.ಸುಂದರೇಶ್ ಹೆಸರು- ಸಚಿವ ಸಂಪುಟ ಆಯ್ತು, ಈ ತಿಂಗಳಲ್ಲಿ ನಿಗಮ ಮಂಡಳಿಗೂ ನೇಮಕ


ಶಿವಮೊಗ್ಗ,
ಕಳೆದ ತಿಂಗಳ ೧೩ ರಂದು ಬಹುಮತ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ತಿಂಗಳು ಬರುವ ಮುನ್ನವೇ ಸಚಿವ ಸಂಪುಟವನ್ನು ಅತ್ಯಂತ ಹೆಚ್ಚು ಕಿರಿಕಿರಿಗಳು ಉಂಟಾಗದಂತೆ ನೋಡಿಕೊಂಡು ರಚಿಸಿಕೊಂಡ ಬೆನ್ನಲ್ಲೇ ಬರುವ ಜಿಲ್ಲಾ ಪಂಚಾ ಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ನಿಗಮ ಮಂಡಳಿಗಳಿಗೆ ನೇಮಕಾತಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಂದಿಷ್ಟು ಬೇಸರವಾದವರನ್ನು ಅತ್ಯಂತ ಪ್ರಭಾವಿ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಮುನ್ಸೂಚನೆ ಇದ್ದು, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರಿಗೆ ಪ್ರಧಾನ ಮಂಡಳಿಯೊಂದರ ಅಧ್ಯಕ್ಷರಾಗುವ ಸಾಧ್ಯತೆಗಳು ನಿಚ್ಚಳವಾಗಿವೇ.
ರಾಜ್ಯ ಸರ್ಕಾರದ ಪ್ರಧಾನ ನಿಗಮ ಮಂಡಳಿಗಳ ಜೊತೆ ಜಿಲ್ಲಾವಾರು ಇರುವಂ ತಹ ನಿಗಮ ಮಂಡಳಿಗಳಿಗೂ ಸಹ ಇದೇ ಸಂದರ್ಭದಲ್ಲಿ ನೇಮಕವಾಗುವ ಸಾಧ್ಯತೆಗಳಿದ್ದು, ಶಿವಮೊಗ್ಗದ ಭದ್ರಾ ಅಚ್ಚಕಟ್ಟು ಪ್ರಾಧಿಕಾರ (ಕಾಡಾ), ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಿ (ಸೂಡಾ) ಹಾಗೂ ವಿಶೇಷವಾಗಿ ಮಲೆನಾಡು ಪ್ರಾದೇಶಾಭಿವೃದ್ಧಿ ಮಂಡಳಿ (ಎಂಎ ಡಿಬಿ) ಗಳಿಗೆ ನೇಮಕಾತಿ ಅಂದರೆ ಅಧ್ಯಕ್ಷರು ಹಾಗೂ ನಿರ್ದೇಶಕರ ಹೆಸರುಗಳನ್ನು ಘೋಷಿಸುವ ಸಾಧ್ಯತೆಗಳು ಖಚಿತವೆನ್ನಲಾಗಿದೆ.


ಶಿವಮೊಗ್ಗದ ಕಾಡಾ ಹಾಗೂ ಸೂಡಾಗೆ ಹಲವು ಕಾಂಗ್ರೆಸ್ ಪಕ್ಷದ ನಾಯಕರ ಹೆಸರುಗಳು ಸುಳಿದಾಡುತ್ತಿದ್ದು, ವಿಶೇಷವಾಗಿ ಪಕ್ಷನಿಷ್ಠೆ ಹಾಗೂ ಈ ಮಂಡಳಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಅರಿತಿರುವಂತಹ ಮುಖಂಡರಿಗೆ ಅದ್ಯತೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಾಡಾ ಅಧ್ಯಕ್ಷರಾಗಿ ಅನುಭವ ಇರುವಂತಹ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹಾಗೂ ಶಿವಮೊಗ್ಗ ನಗರಸಭೆಯ ಅಧ್ಯಕ್ಷರಾಗಿ ಹತ್ತು ಹಲವು ಉಪಯುಕ್ತ ಕಾಮಗಾರಿಗಳನ್ನು ಶಿವಮೊಗ್ಗ ಪಾಲಿಗೆ ನೀಡಿದಂತಹ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಸತ್ಯನಾರಾಯಣ್ ಅವರ ಹೆಸರು ಈ ನೇಮಕಾತಿಯ ವಿಚಾರದಲ್ಲಿ ಮುಂಚೂಣಿಯಲ್ಲಿವೆ ಎಂದು ಪಕ್ಷದ ಹಿರಿಯ ಮೂಲಗಳು ತಿಳಿಸಿವೆ.


ಎಲ್.ಸತ್ಯನಾರಾಯಣ್ ರಾವ್ ಅವರು ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗ ನಗರಸಭೆಯ ಅದ್ಯಕ್ಷರಾಗಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವಾತವಾದ ಪರಿಹಾರವನ್ನು ಹುಡುಕುವಲ್ಲಿ ಯಶಸ್ವಿಯಾಗಿ ಹಗಲು ರಾತ್ರಿ ಎನ್ನದೇ ತಮ್ಮ ಅಧಿಕಾರವಾಧಿಯೊಳಗೆ ಕುಡಿಯುವ ನೀರಿನ ೨ನೇ ಹಂತದ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡಿಸಿದ ಹಿರಿಮೆ ಹೊಂದಿದ್ದಾರೆ. ಅವರು ಅಧ್ಯಕ್ಷರಾ ಗಿದ್ದ ಅವಧಿಯಲ್ಲಿಯೆ ಬೊಮ್ಮನಕಟ್ಟೆ ಆಶ್ರಯ ನಿವೇಶನಗಳಿಗೆ ಅಡಿಪಾಯ ಬಿದ್ದದ್ದು ಮತ್ತೊಂದು ವಿಶೇಷ. ಜಟ್‌ಪಟ್ ನಗರದ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಿ ಬರುವ ನಾಯಕರಲ್ಲಿ ಮುಂಚೂಣಿ ಯಲ್ಲಿದ್ದ ಸತ್ಯನಾರಾಯಣ್ ರಾವ್ ವಿಶೇಷ ವಾಗಿ ಶಿವಮೊಗ್ಗ ವಿನೋಬನಗರ ಕರ್ನಾಟಕ ಹೌಸಿಂಗ್‌ಬೋರ್ಡ್ ಮನೆಗಳ ಕಂದಾಯ ಹೆಚ್ಚಳವನ್ನು ಕಡಿಮೆ ಮಾಡಿಸಿದ್ದು ಮತ್ತೊಂದು ವಿಶೇಷ. ಪಕ್ಷಕ್ಕೆ ಯಾವಾಗಲೂ ಜೊತೆಯಾಗಿರುವ ಸಂಗಮೇಶ್, ಸತ್ಯನಾರಾ ಯಣರಾವ್, ಸುಂದರೇಶ್ ಹಾಗೂ ಒಂದಿ ಬ್ಬರ ನಾಯಕರ ಹೆಸರು ನಿಗಮ ಮಂಡಳಿಗಳ ಆಯ್ಕೆ ವಿಚಾರದಲ್ಲಿ ಮುಂಚೂಣಿಯಲ್ಲಿವೆ.

ಶಿವಮೊಗ್ಗದ ಕಾಡಾ ಹಾಗೂ ಸೂಡಾಗೆ ಹಲವು ಕಾಂಗ್ರೆಸ್ ಪಕ್ಷದ ನಾಯಕರ ಹೆಸರುಗಳು.ಪಕ್ಷನಿಷ್ಠೆ ಹಾಗೂ ಈ ಮಂಡಳಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಅರಿತವರಿಗೆ ಆದ್ಯತೆಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಸತ್ಯನಾರಾಯಣ್, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೆಸರು ಮುಂಚೂಣಿಯಲ್ಲಿವೆ ಎಂದು ಪಕ್ಷದ ಹಿರಿಯ ಮೂಲಗಳು ತಿಳಿಸಿವೆ.

Exit mobile version