Site icon TUNGATARANGA

ಪರಿಸರವನ್ನು ನಾವು ರಕ್ಷಿಸಬೇಕು ಪರಿಸರದ ವಿರುದ್ಧ ಹೋಗುತ್ತಿರುವ ಮನುಜ ಕುಲಕ್ಕೆ ಉಳಿಗಾಲವಿಲ್ಲ : ನ್ಯಾ ರವಿಕುಮಾರ್ ಕೆ

ಹೊಸನಗರ: ನಾವು ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಇಲ್ಲವಾದರೆ ಪರಿಸರದ ವಿರುದ್ಧ ಹೋಗುತ್ತೇವೆ ಎಂದು ಮನುಕುಲ ಹೋರಟರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆಯವರು ಹೇಳಿದರು.


ಹೊಸನಗರದ ನ್ಯಾಯಾಲಯದ ಆವರಣದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವದ ಅಂಗವಾಗಿ ಹೊಸನಗರ ಅರಣ್ಯ ಇಲಾಖೆ ಮತ್ತು ನ್ಯಾಯಾಲಯದ ಸಹಬಾಗಿತ್ವದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದರು.


ಒಬ್ಬ ಮನುಷ್ಯ ವರ್ಷಕ್ಕೆ ಒಂದು ಗಿಡದಂತೆ ನೆಟ್ಟು ಹಾರೈಕೆ ಮಾಡಿದರೇ ಅವರ ಸಾಮಾನ್ಯ ಜೀವಿತವಾಧಿ ೬೦ ವರ್ಷಗಳೆಂದು ತಿಳಿದುಕೊಂಡರೂ ೬೦ಗಿಡಗಳನ್ನು ನೆಡಬಹುದು ಆದರೆ ನಾನು ನೆಟ್ಟ ಗಿಡವನ್ನು ಮರವಾಗಿ ಮಾಡುವ ಹೊಣೆಗಾರಿಕೆ ಹೊಂದಿರಬೇಕು ಎಂದರು.
ಇಂದು ವಿಶ್ವ ಪರಿಸರ ದಿನ, ಪರಿಸರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್೫ರಂದು ಪರಿಸರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಪ್ರತಿ ವರ್ಷ ವಿಬಿನ್ನ ಧ್ಯೇಯದೊಂದಿಗೆ ಆಚರಿಸಲಾಗುತ್ತಿದ್ದು ಈ ಬಾರೀಯ ವಿಶೇಷ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ನಾವು ಮಾಡಬೇಕಾಗಿದೆ


ಇಂದು ಪ್ಲಾಸ್ಟಿಕ್ ಬಳಕೆ ಮೀರಿದೆ ಪ್ಲಾಸ್ಟಿಕ್ ಬಳಕೆ ಇಲ್ಲದ ದಿನವನ್ನು ಊಹಿಸಲು ಸಾಧ್ಯವಿಲ್ಲ ಆಹಾರದಿಂದ ಹಿಡಿದು ಬಟ್ಟೆಯ ಪ್ಯಾಕ್‌ವರೆವಿಗೆ ಪ್ಲಾಸ್ಟಿಕ್ ಎಲ್ಲಡೇ ವ್ಯಾಪಿಸಿದೆ ಸುಲಭವಾಗಿ ಕರಗದ ಇದು ಜೀವ ವೈವಿದ್ಯಕ್ಕೆ ಮಾರಕವಾಗಿದೆ ಇದನ್ನು ನಮ್ಮ ಭಾರತ ದೇಶದಿಂದ ಕಿತ್ತೊಗೆಯಬೇಕಾಗಿದೆ ನಾವು ನಿವೇಲ್ಲರೂ ಸೇರಿ ಪರಿಸರ ಉಳಿಸುವುದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಭಾರತ ದೇಶವನ್ನಾಗಿ ಮಾಡೋಣ ಎಂದರು.


ಈ ಸಂದರ್ಭ ನ್ಯಾಯಾಲಯದ ಶಿರಾಸ್ತೆದಾರ್ ನೇತ್ರಾವತಿ, ಬಾಗ್ಯ, ಎ.ಪಿ.ಪಿ ಗೋಪಾಲ್ ವಕೀಲರ ಸಂಘದ ಅಧ್ಯಕ್ಷರಾದ ವಾಲೇಮನೆ ಶಿವಕುಮಾರ್, ವಕೀಲರಾದ ಹಿರಿಯಪ್ಪ, ಗುರು ಮಂಡಾಣಿ ಅರಣ್ಯ ಇಲಾಖೆಯ ಎಸಿಎಫ್ ಪ್ರಕಾಶ್ ಕೆ.ಜಿ, ಆರ್‌ಎಫ್‌ಓ ರಾಘವೇಂದ್ರ, ಷಣ್ಮುಖ ಪಾಟೇಲ್, ನರೆಂದ್ರಕುಮಾರ್ ಶಶಿಕುಮಾರ್, ಪ್ರಮೋದ್, ಜಗದೀಶ್, ಚಂದ್ರಪ್ಪ, ಷಣ್ಮಖಪ್ಪ, ಶ್ರೀಮತಿ ರೇಖಾ ಹರೀಶ್, ಗುರುಕಿರಣ್, ಬಸವರಾಜ್ ಗಗ್ಗ, ಮಹೇಶ್ ವೈ.ಪಿ, ಲೋಕ ಅದಾಲತ್ ಗುರು ಇನ್ನೂ ಮುಂತಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version