Site icon TUNGATARANGA

ಶಿವಮೊಗ್ಗ : ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್​​​ ಹತ್ಯೆ

ಶಿವಮೊಗ್ಗ: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್​​​ನನ್ನು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ನಡೆದಿದೆ.

ಸಚಿನ್(27) ಮೃತ ಬಾರ್​ ಕ್ಯಾಶಿಯರ್. ಮೂವರು ದುಷ್ಕರ್ಮಿಗಳು ಸಚಿತ್​ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ (ಜೂ.05) ಬಾರ್​ಗೆ ಗಾಂಜಾ ಅಮಲಿನಲ್ಲಿ ಬಂದ ಮೂವರು ಮದ್ಯ ಕೇಳಿದ್ದಾರೆ. ಅದಕ್ಕೆ ಕ್ಯಾಶಿಯರ್​ ಸಚಿನ್​​ ಸಮಯ ಮುಗದಿದೆ ಮದ್ಯ ನೀಡಲು ಆಗುವುದಿಲ್ಲ ಎಂದಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಮೂವರು ಗಲಾಟೆ ಮಾಡಿದ್ದಾರೆ. ನಂತರ ಡ್ರ್ಯಾಗನ್​ನಿಂದ ದುಷ್ಕರ್ಮಿಗಳು ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೇ ಆರೋಪಿಗಳು ಬಾರ್​ ಸನಿಹ ಗಸ್ತಿಗೆ ನೀಯೋಜಿಸಿದ್ದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.


ಇದರಿಂದ ಗಂಭೀರಗೊಂಡ ಕ್ಯಾಶಿಯರ್ ಸಚಿನ್​​ನನ್ನು ಸ್ಥಳೀಯರು ಕೂಡಲೇ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಚಿನ್​ ಸಾವನ್ನಪ್ಪಿದ್ದಾರೆ. ಕುಂಸಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version