ಶಿವಮೊಗ್ಗ, ಜೂ.೦2:
ವಿನೋಬನಗರದ ಡಿವಿಎಸ್ ಶಾಲೆ ಎದುರಿನಲ್ಲಿ ನಿರ್ಮಿಸಿರುವ ಎ-೩ ಆರ್ಕೆಡ್ ಕಟ್ಟಡದಲ್ಲಿ ನರೇನ್ ಫಿಟ್‌ನೆಸ್ ಜಿಮ್‌ನ ಉದ್ಘಾಟನೆಯನ್ನು ಜೂ.3ರ ನಾಳೆ ಸಂಜೆ6 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಫಿಟ್‌ನೆಸ್ ಸೆಂಟರ್‌ನ ಎಂಡಿ. ರಾಹುಲ್ ನರೇನ್, ನಿವೃತ್ತ ದೈಹಿಕ ಶಿಕ್ಷಣ ಇಲಾಖೆ ಅಧಿಕಾರಿ ನರೇಂದ್ರ ಹೇಳಿದರು.
ಅವರು ಇಂದು ಜಿಮ್‌ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ, ಸಂಸದ ಬಿವೈ. ರಾಘವೇಂದ್ರ, ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ. ಸರ್ಜಿ ಆಸ್ಪತ್ರೆಯ ವೈದ್ಯ ಧನಂಜಯ ಸರ್ಜಿ, ಚಲನಚಿತ್ರ ತಾರೆ ಸಮೀಕ್ಷಾ ಆಗಮಿಸಲಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಡಾ. ಲೋಕೇಶ್, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸೇರಿದಂತೆ ಹಲವು ಗಣ್ಯರು ಭಾಗವ ಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕ್ರೀಡಾಸಾಧಕರಾದ ಅರ್ಜುನ ಪ್ರಶಸ್ತಿ ವಿಜೇತ ಎಸ್. ಪ್ರಕಾಶ್, ಏಕಲವ್ಯ ಪ್ರಶಸ್ತಿ ವಿಜೇತರಾದ ಎಂ.ಎಂ ಗೋಪಿ,ನಾಗರಾಜ, ಭಾರತಿ ಅನಿಲ್‌ಕುಮಾರ್, ಶೈಲಜಾ ಕೆ.ಎನ್, ರಾಜ್ಯ ಪ್ರಶಸ್ತಿ ವಿಜೇತ ಸಂಜೀವ ರಾಜಶೇಖರ ಕನಕ., ಏಷ್ಯನ್ ಮೆಡಲಿಸ್ಟ್ ಅಬ್ದುಲ್ ಜಾಫರ್, ಮಿಸ್ಟರ್ ಇಂಡಿಯಾ ಮೆಡಲಿಸ್ಟ್‌ಗಳಾದ ಆಕಾಶ್, ಲೋಕೇಶ್ ಪಟೇಲ್ ಅವರನ್ನು ಸನ್ಮಾನಿಸಲಾಗುವುದು ಮತ್ತು ಹಿರಿಯ ಕ್ರೀಡಾಪಟುಗಳಾದ ಸತೀಶ್‌ಕುಮಾರ್, ಗೋವಿಂದಣ್ಣ ಜಯಪ್ರಕಾಶ್ ಕಳ್ಳಿ, ವಿಕ್ಟರ್ ಡಿಸೋಜ್, ಡೇವಿಡ್ ಪ್ರಕಾಶ್, ಪ್ರಕಾಶ್‌ರನ್ನು ಸನ್ಮಾನಿಸಲಾಗುವುದು ಎಂದರು.
ನರೇನ್ ಫಿಟ್‌ನೆಸ್‌ನ ತರಬೇತುದಾರ ರೋಹನ್ ಮಾತನಾಡಿ, ನರೇನ್ ಫಿಟ್‌ನೆಸ್ ಶಿವಮೊಗ್ಗದಲ್ಲಿಯೇ ಅತ್ಯುತ್ತಮ ಜಿಮ್ ಆಗಿದೆ. ವಿಶಾಲವಾದ ಎರಡು ಅಂತಸ್ತಿನಲ್ಲಿ ತರಬೇತಿ ನೀಡಲಾಗುವುದು. ಮುಖ್ಯವಾಗಿ ಕಾರ್ಡಿಯೊ, ಸ್ಟ್ರೆಂಥ್ ಟ್ರೈನಿಂಗ್, ಗ್ರೂಪ್ ಕ್ಲಾಸ್, ಕ್ರಾಸ್ ಫಿಟ್, ವರ್ಕೌಟ್‌ಗಳಿಗೆ ವಿಶೇಷ ಸ್ಥಳಾವಕಾಶ ಇದೆ. ಜೊತೆಗೆ ಸ್ಟೀಂ, ಶವರ್ ಬಾತ್ ವ್ಯವಸ್ಥೆ ಇದೆ. ಎಸಿ ವ್ಯವಸ್ಥೆ ಇದೆ. ಅಡ್ವಾನ್‌ಸ್ಡ್, ಕಾಂಪೊಸಿಷನ್, ಅನಲೈಸಿಂಗ್ ಮೆಷಿನ್ ಇದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಎಂಡಿ. ರಾಹುಲ್ ನರೇನ್, ತರಬೇತುದಾರರಾದ ನಾಗೇಂದ್ರ, ಮೇಘಾ , ವೀಣಾ, ಚೇತನ್ ಸೇರಿದಂತೆ ಹಲವರಿದ್ದರು.