Site icon TUNGATARANGA

5 ಗ್ಯಾರಂಟಿಗಳ ಘೊಷಣೆ, ಪ್ರಯಾಣ ಉಚಿತ, ಷರತ್ತು ನಿಯಮಿತ, ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆ ವೇಳೆ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಇಂದು ಘೋಷಣೆ ಮಾಡಿದೆ. ಸಚಿವ ಸಂಪುಟ ಸಭೆಯ ಬಳಿಕ ಪ್ರಮುಖ ಸಚಿವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದರು.

ಗ್ಯಾರಂಟಿ ಯೋಜನೆಗಳ ವಿವರಗಳು

1 ಗೃಹ ಜ್ಯೋತಿ ಯೋಜನೆ

ಒಬ್ಬಾತ 12 ತಿಂಗಳಲ್ಲಿ ಬಳಸಿದ ವಿದ್ಯುತ್ ನ ಸರಾಸರಿಗೆ ಹತ್ತು ಶೇಕಡಾ ಹೆಚ್ಚಿಸಿ ಅಷ್ಟು ಪ್ರಮಾಣದ ವಿದ್ಯುತ್ ಉಚಿತ. (200 ಯುನಿಟ್ ವರೆಗೆ)

ಪ್ರತಿ ತಿಂಗಳು ವಿದ್ಯುತ್ ಬಿಲ್ ನೀಡಲಾಗುವುದು.

ಜುಲೈ 1ರಿಂದ ಎಲ್ಲಾ ಜನರಿಗೆ ವಿದ್ಯುತ್ ಉಚಿತ

ಈಗಾಗಲೇ ಪಾವತಿ ಬಾಕಿ ಉಳಿದಿರುವುದನ್ನು ಆತನೇ ಕಟ್ಟಬೇಕು.

2 ಗೃಹ ಲಕ್ಷ್ಮೀ ಯೋಜನೆ

ಮನೆಯ ಯಜಮಾನಿಯ ಖಾತೆಗೆ ತಿಂಗಳಿಗೆ 2000 ರೂ ಜಮೆ.

ಬಿಪಿಎಲ್ – ಎಪಿಎಲ್ ಎಲ್ಲರಿಗೂ ಈ ಯೋಜನೆ ಎಲ್ಲರಿಗೂ ಅನ್ವಯವಾಗಲಿದೆ.

ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ನೊಂದಿಗೆ ಅರ್ಜಿ ನೀಡಬೇಕು.

ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಕೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ.

ಜುಲೈ 15ರಿಂದ ಆಗಸ್ಟ್ 15ರವರೆಗೆ ಪ್ರಕ್ರಿಯೆ ನಡೆದು ಆಗಸ್ಟ್ 15ರಂದು ಹಣಾ ಜಮೆ ಮಾಡಲಾಗುತ್ತದೆ.

ವಿಧವಾ ವೇತನ, ವೃದ್ಯಾಪ್ಯ ವೇತನ ಪಡೆಯುತ್ತಿರುವ ಮಹಿಳೆಯರಿಗೂ ಈ ಯೋಜನೆ ಸಿಗಲಿದೆ.

3 ಅನ್ನ ಭಾಗ್ಯ ಯೋಜನೆ

ಜುಲೈ 1ರಿಂದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ತಲಾ ಹತ್ತು ಕೆಜಿ ಆಹಾರ ಧಾನ್ಯ ಉಚಿತ.

4 ಶಕ್ತಿ ಯೋಜನೆ

ಎಲ್ಲಾ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೇರಿ ರಾಜ್ಯದಲ್ಲಿ ಎಲ್ಲಿಯೂ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ

ಜೂನ್ 11ರಿಂದ ಯೋಜನೆ ಜಾರಿ

ಕರ್ನಾಟಕ ರಾಜ್ಯದೊಳಗೆ ಸೀಮಿತ. ಎಷ್ಟು ದೂರವೂ ಸಂಚರಿಸಬಹುದು.

ಎಸಿ ಬಸ್ ಮತ್ತು ಲಕ್ಸುರಿ ಬಸ್ ಹೊರತು ಪಡಿಸಿ ಯಾವುದೇ ಬಸ್ ನಲ್ಲೂ ಸಂಚರಿಸಬಹುದು. (ಬಿಎಂಟಿಸಿ ಸೇರಿ)

ಕೆಎಸ್ ಆರ್ ಟಿಸಿ ಮಹಿಳೆಯರಿಗೆ ಶೇಕಡಾ ಮೀಸಲು. ಬಿಎಂಟಿಸಿ ಬಸ್ ನಲ್ಲಿ ಯಾವುದೇ ಮೀಸಲು ಇಲ್ಲ.

5 ಯುವ ನಿಧಿ

2022-23ರಲ್ಲಿ ವ್ಯಾಸಂಗಿ ಮಾಡಿ ಯಾವುದೇ ಪದವಿ ಪಡೆದವರಿಗೆ 24 ತಿಂಗಳವರೆಗೆ ಪ್ರತಿ ತಿಂಗಳಿಗೆ 3000 ರೂ, ಡಿಪ್ಲೊಮಾ ಮಾಡಿದವರಿಗೆ 1500 ನೀಡಲಾಗುವುದು.

ಈ ಎರಡು ವರ್ಷದೊಳಗೆ ಉದ್ಯೋಗ ಪಡೆದರೆ ಹಣ ನಿಲ್ಲಿಸಲಾಗುವುದು.

ಇದು ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯವಾಗಲಿದೆ.

ಅರ್ಹರು ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಆರು ತಿಂಗಳವರೆಗೆ ಅವಕಾಶವಿದೆ.

Exit mobile version