Site icon TUNGATARANGA

ಜೂ.4 ರಂದು: ನಿಮ್ಮೊಳಗಿನ “ಆಧ್ಯಾತ್ಮಿಕತೆ” ಕುರಿತ ವಿಶಿಷ್ಟ ಕಾರ್ಯಾಗಾರ ಆಯೋಜನೆ

ನಿಮ್ಮೊಳಗಿನ “ಆಧ್ಯಾತ್ಮಿಕತೆ” ಕುರಿತ ವಿಶಿಷ್ಟ ಕಾರ್ಯಾಗಾರವನ್ನು ಭಾನುವಾರ ಜೂನ್ ೪ ರಂದು ಬೆಳಿಗ್ಗೆ ೯:೩೦ ರಿಂದ ಸಂಜೆ ೫ ವರೆಗೆ ಕುವೆಂಪು ರಂಗಮಂದಿರದಲ್ಲಿ ಯೂನಿವರ್ಸಲ್ ನಾಲೇಜ್ ಟ್ರಸ್ಟ್ ಮಂಗಳೂರು ಇವರು ಏರ್ಪಡಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ನ ಮುಖಂಡರು, ಆಧ್ಯಾತ್ಮಿಕ ಶಕ್ತಿಯ ಮೂಲಕ ಧನಾತ್ಮಕವಾಗಿ ಆಂತರಿಕ ಬದಲಾವಣೆಗೆ ಸಹಾಯ ಮಾಡಿ. ಸಕಾರಾತ್ಮಕ ಜೀವನ, ಹೀಲಿಂಗ್, ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಬೆಳವಣಿಗೆಯ ವಿವಿಧ ಹಂತಗಳನ್ನು ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದರು.


ಈ ವಿಶಿಷ್ಟ ಕಾರ್ಯಾಗಾರದಲ್ಲಿ ನಾವು ಇದುವರೆಗೆ ಅರ್ಥಮಾಡಿಕೊಳ್ಳಲಾಗದ ದೇಹ ವಿಜ್ಞಾನ ಹಾಗೂ ಆಧ್ಯಾತ್ಮಿಕತೆ, ಇವುಗಳಿಗೆ ಇರುವ ಸಂಬಂಧಗಳನ್ನು ಅರಿಯಲಿದ್ದೇವೆ. ಈ ಮೂಲಕ ಬಹು ದಿನಗಳು, ಬಹು ತಿಂಗಳುಗಳು, ಬಹು ವರ್ಷಗಳಿಂದ ಗುಣಪಡಿಸಲಾಗದ ಖಾಯಿಲೆಗಳು, ವ್ಯಸನಗಳು, ಮಾನಸಿಕ ಖಿನ್ನತೆ, ಸಂಬಂಧಗಳಲ್ಲಿ ಉಂಟಾಗಿರುವ ಬಿರುಕು ಇತ್ಯಾದಿಗ ಳನ್ನು ಯಾವುದೇ ಔಷದೋಪಚಾರಗಳಿಲ್ಲದೇ ಸ್ವಯಂ ಗುಣಪಡಿಸಿಕೊಳ್ಳುವ ಶಕ್ತಿಯನ್ನು ಈ ದೇಹ ಹೊಂದಿದೆ ಎಂಬುದರ ಮಹತ್ವವನ್ನು ಉನ್ನತ ತರಬೇತುದಾರರು ತಿಳಿಸಿಕೊಡಲಿದ್ದಾರೆ ಎಂದ ವಿವರಿಸಿದರು.


ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್‌ನ ಮಾಸ್ಟರ್ ಟ್ರೈನರ್‌ಗಳ ತಂಡ ಹಾಗೂ ನೇಚರ್ ಪಾಸಿಟಿವ್ ಎನರ್ಜಿ ಹೀಲಿಂಗ್ ವಿಧಾನಗಳ ಅನುಭವಿ ಮಾರ್ಗ ದರ್ಶಕರು ಉಪಸ್ಥಿತರಿದ್ದು ತಮ್ಮ ಜ್ಞಾನ ಮತ್ತು ಪರಿಣತಿ ಯನ್ನು ಪಾಲ್ಗೊಳ್ಳುವವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಅಭ್ಯಾಸಗಳು ನೀಡುವ ಅದ್ಭುತ ಪ್ರಯೋಜನಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ಹೇಳಿದರು.


ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸುವ ಎಲ್ಲರೂ ಹೆಚ್ಚಿನ ಜ್ಞಾನವನ್ನು ಪಡೆದು ಹೆಚ್ಚಿನ ಮಾನಸಿಕ ಧೃಡತೆ ಯೊಂದಿಗೆ ಪರಿವರ್ತನೆಯ (ಅನುಭವವನ್ನು ಹೊಂದಲಿದ್ದಾರೆ. ಸಕಾರಾತ್ಮಕ ಜೀವನ, ಹೀಲಿಂಗ್ಸ್, ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದರು.


ಈ ಕಾರ್ಯಾಗಾರಗಳು ಹುಬ್ಬಳ್ಳಿ, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆದಿದ್ದು ನೂರಾರು ಫಲಾನುಭವಿಗಳು ಇದರ ಪ್ರಯೋಜನ ಪಡೆದಿರುತ್ತಾರೆ. ಈ ಕಾರ್ಯಾಗಾರಕ್ಕೆ ಆಹ್ವಾನ ಪತ್ರಿಕೆ ಯೊಂದಿಗೆ ಉಚಿತ ಪ್ರವೇಶವಿದ್ದು ಭಾಗವಹಿಸುವ ಆಸಕ್ತಿ ಹೊಂದಿದ್ದಲ್ಲಿ ೯೬೩೨೧೭೧೧೫೬ ಅಥವಾ ೯೪೪೮೧೩೯೨೭೧ನ್ನು ಸಂಪರ್ಕಿಸಬಹುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಅಧ್ಯಕ್ಷೆ ಶಮ್ಮಿ ಶಿರಿ, ಕಾರ‍್ಯದರ್ಶಿ ಕೃಷ್ಣಾನಂದ ಶೆಣೈ, ಕಾರ‍್ಯಕ್ರಮ ಆಯೋಜಕ ನಾಗರಾಜ ಶೆಟ್ಟರ್ ಇದ್ದರು.

Exit mobile version