Site icon TUNGATARANGA

ಜವಳಿ ಇಲಾಖೆಯ ನೀತಿ ನಿಯಮ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಕೈಮಗ್ಗ ಮತ್ತು ಜವಳಿ ಇಲಾಖೆಯ ನೀತಿ ನಿಯಮಗಳ ಸಮಗ್ರ ಹಾಗೂ ಸ್ವತಂತ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಗಳ ಮಹಿಳೆಯರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಂಸ್ಥಾಪಕರಾದ ಚರಕಪ್ರಸನ್ನ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.


ಪವಿತ್ರ ವಸ್ತ್ರ ಅಭಿಯಾನದಡಿ ಚರಕ ಮಹಿಳಾ ಸಹಕಾರ ಸಂಘವು ನೈಸರ್ಗಿಕ ಬಣ್ಣದ ಕೈಮಗ್ಗ ಬಟ್ಟೆ ಹಾಗೂ ಸಿದ್ಧ ಉಡುಪುಗಳ ಕ್ಷೇತ್ರದಲ್ಲಿ ದೇಶದಲ್ಲಿಯೆ ಮೊದಲ ಸಂಸ್ಥೆಯಾಗಿದ್ದು, ೭೦೦ ಜನ ನೇಕಾ ರರು ಹಾಗೂ ತತ್ಸಂಬಂಧಿ ಕೆಲಸಗಾ ರರಿಗೆ ಉದ್ಯೋಗಾವಕಾಶ ಕಲ್ಪಿಸಿಕೊ ಟ್ಟಿದೆ

ಸಂಘದ ಶೇ.೯೦ ಪ್ರತಿಶತ ಸದಸ್ಯರು ಬಿಪಿಎಲ್ ಮಿತಿಗಿಂತ ಕೆಳಗಿನ ಬಡ ಜನರೇ ಆಗಿರುತ್ತಾರೆ. ಸಂಘವು ಕೂಡ ಲಾಭದಾಯ ಕವಾಗಿ ನಡೆಯುತ್ತಿದ್ದರೂ ಕೈಮಗ್ಗ ಇಲಾಖೆ ತೀವ್ರವಾದ ಅಸಡೆ ಹಾಗೂ ಅವಗಣನೆಗೆ ಸಂಘವನ್ನು ಗುರಿಮಾಡಿದ್ದು, ಕಳೆದ ಹಲವಾರು ವರ್ಷಗಳಿಂದ ಸಂಘಕ್ಕೆ ಪಾವತಿ ಯಾಗಬೇಕಿದ್ದ ೯೦ ಲಕ್ಷಕ್ಕೂ ಹೆಚ್ಚು ಹಣವನ್ನು ಖಾಸಗಿ ಬ್ಯಾಂಕಿನಲ್ಲಿ ಇಟ್ಟು ವರ್ಷಗಟ್ಟಲೆ ಸತಾಯಿ ಸುತ್ತಿದೆ.


ಮಾತ್ರವಲ್ಲ, ಸರ್ಕಾರವು ಸಂಘದೊಟ್ಟಿಗೆ ಆರಂಭಿ ಸಿದ ಪಿಪಿಪಿ ಯೋಜನೆ ಪೂರ್ಣಗೊಂಡು ಹಲವು ವರ್ಷಗಳಾದರೂ ಸಂಘಕ್ಕೆ ಇನ್ನೂ ಹಣ ತಲುಪಿಸಿಲ್ಲ. ಸದರಿ ಯೋಜನೆಯನ್ನೇ ಈಗ ರದ್ದುಗೊಳಿಸಿದೆ.


ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಜಂಟಿ ಖಾತೆಯಲ್ಲಿ ಇರಿಸಿಕೊಂಡು ಫಲಾನುಭವಿಗಳನ್ನು ಸತಾಯಿಸುವ ಅಕ್ರಮ ವ್ಯವಸ್ಥೆಯೊಂದನ್ನು ಕೈಮಗ್ಗ ಇಲಾಖೆ ಜಾರಿ ಮಾಡಿಕೊಂಡಿದ್ದು, ಇದರಿಂದ ಕೈಮಗ್ಗ ಸಹಕಾರ ಸಂಘಗಳು ನೆಲಕಚ್ಚಿ ಕೆಎಚ್‌ಡಿಸಿ ಮುಚ್ಚುವ ಸ್ಥಿತಿ ತಲುಪಿದೆ. ಈ ಎಲ್ಲಾ ಸಂಗತಿಗಳನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದು ಕಪ್ಟುಪಟ್ಟಿ ಧರಿಸಿ ಉಪವಾಸ ಸತ್ಯಾಗ್ರಹ ಮಾಡಿದರು ಕೂಡ ಸರ್ಕಾರ ಕಿವುಡಾಗಿದ್ದು ಎಂದರು.


ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳ ಮನವಿ ಸ್ವೀಕರಿಸಿ ಕೆಎಎಸ್ ಅಧಿಕಾರಿಯೊಬ್ಬರಿಂದ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದರು., ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗೌರಮ್ಮ, ನಿರ್ದೇಶಕಿ ಮಹಾಲಕ್ಷ್ಮಿ, ಕಾರ್ಯದರ್ಶಿ ರಮೇಶ್ ಹಾಗೂ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ನೂರಾರು ಮಹಿಳಾ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Exit mobile version