Site icon TUNGATARANGA

ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಒಂದು ತಿಂಗಳು ಉಚಿತ ಕಾರ್ಯಾಗಾರ: ಸಂಸ್ಥೆಯ ಸಂಚಾಲಕಿ ಪವಿತ್ರ

ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಎಂಬ ಒಂದು ತಿಂಗಳ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ಪವಿತ್ರ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಿಲಕ್‌ನಗರದ ರಾಘವೇಂದ್ರಸ್ವಾಮಿ ಮಠದ ರಸ್ತೆಯಲ್ಲಿ ನಮ್ಮ ಕೋಚಿಂಗ್ ಸೆಂಟರ್ ಕಳೆದ ೮ ವರ್ಷಗಳಿಂದ ನಡೆಯುತ್ತಿದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಇಲ್ಲಿ ತರಬೇತಿ ಪಡೆದು ಉದ್ಯೋಗ ಪಡೆದಿದ್ದಾರೆ. ಈಗ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಒಂದು ತಿಂಗಳ ಕಾಲ ಉಚಿತ ಕಾರ್ಯಾಗಾರವನ್ನು ಜೂ.೩ರಿಂದ ಹಮ್ಮಿಕೊಂಡಿದ್ದೇವೆ ಎಂದರು.


ಈ ಕಾರ್ಯಾಗಾರದಲ್ಲಿ ಕೆಎಎಸ್, ಪಿಎಸ್‌ಐ, ಪಿಸಿ, ಪಿಡಿಒ, ಎಫ್‌ಡಿಎ, ಎಸ್‌ಡಿಎ, ಕೆಪಿಎಸ್‌ಸಿ ಪರಿಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರಪ್ಪ, ಮರಿಗೌಡ್ರು ಮತ್ತು ಪೊಲೀಸ್ ಇಲಾಖೆಗೆ ಆಯ್ಕೆಯಾದ ಪಿಎಸ್‌ಐಗಳು ಭಾಗವಹಿಸಲಿದ್ದಾರೆ. ಸ್ಪರ್ಧಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾ ಗಿದೆ ಎಂದ ಅವರು, ಎಸ್‌ಎಸ್‌ಎಲ್‌ಸಿ ಪಿಯುಸಿ, ಡಿಪ್ಲೊಮೊ, ಪದವಿ, ಸ್ನಾತಕೋತ್ತರ ಪದವಿ ಪಡೆದವರು ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಗತಿಗಳು ನಡೆಯುತ್ತವೆ ಎಂದರು.


ಅತ್ಯಂತ ಕಡಿಮೆ ದರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತದೆ. ಸಾಮಾನ್ಯವಾಗಿ ಮೂರು ತಿಂಗಳ ತರಬೇತಿ ಇದಾಗಿದ್ದು, ಇದು ನಿರಂತರವಾಗಿ ನಡೆಯುತ್ತದೆ. ಈಗಾಗಲೇ ತರಬೇತಿ ಪಡೆದವರಿಗೆ ಮತ್ತು ಹೊಸಬರಿಗೆ ಮರು ಓದಿಗಾಗಿ ಒಂದು ತಿಂಗಳ ಉಚಿತ

ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ೧೦೦ ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಷರತ್ತುಗಳು ಕೂಡ ಅನ್ವಯವಾಗುತ್ತವೆ . ಹೆಚ್ಚಿನ ವಿವರಕ್ಕೆ ಮೊ: ೭೩೩೭೬೮೩೬೬೮ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹೇಮಚಂದ್ರ, ಮಹೇಶ್, ವರುಣ್ ಇದ್ದರು.

Exit mobile version