ಶಿವಮೊಗ್ಗ : ಸಾಮಾಜಿಕ ಜಾಲತಾಣವನ್ನು ಬಳಸುವಾಗ ಎಚ್ಚರಿಕೆಯಿಂದಿರಲು ವಿದ್ಯಾರ್ಥಿಗಳಿಗೆ ಸಿಇಎನ್ ಪೊಲೀಸ್ ಠಾಣೆಯ ನಿರೀಕ್ಷಕ ಸಂತೋಷ್ ಎಂ ಪಾಟೇಲ್ ಕರೆ ನೀಡಿದರು.
ಅವರು ಇಂದು ಸಿಇಎನ್ ಪೊಲೀಸ್ ಠಾಣೆ ನೇತೃತ್ವದಲ್ಲಿ ಕಮಲಾ ನೆಹರು ಮಹಿಳಾ ಕಾಲೇಜನಲ್ಲಿ ಸೈಬರ್ ಕ್ರೈಂ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯವಾಣಿ 1930 ಬಳಕೆಯ ಕುರಿತು, ಲೋನ್ ಆಪ್ ಗಳಿಂದಾಗುವ ಮೋಸದ ಬಗ್ಗೆ, ತುರ್ತು ಸಂದರ್ಭದಲ್ಲಿ ಇಆರ್ಎಸ್ಎಸ್-112 ಸಹಾಯವಾಣಿಯ ಬಳಕೆಯ ಬಗ್ಗೆ ಹಾಗೂ ಮೊಬೈಲ್ ಫೊನ್ ಕಳೆದು ಹೋದ ಸಂದರ್ಭದಲ್ಲಿ CEIR ಪೋರ್ಟಲ್ ನ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಾಗಭೂಷಣ್, ಶಿಕ್ಷಕರ ವೃಂದ ಮತ್ತು ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.