Site icon TUNGATARANGA

ಶಿವಮೊಗ್ಗ | ಆಸ್ತಿ ವಿಚಾರಕ್ಕೆ ಸಹೋದರನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ


ಶಿವಮೊಗ್ಗ : ಆಸ್ತಿ ವಿಚಾರಕ್ಕೆ ಸಹೋದರನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿದೆ.


ಇಲ್ಲಿನ ಶರಾವತಿ ನಗರ ನಿವಾಸಿ ರೇವಣಪ್ಪ (೫೧) ಅವರನ್ನು 2018 ರಲ್ಲಿ ಕೊಲೆ ಮಾಡಲಾಗಿತ್ತು.


ಆಸ್ತಿ ವಿವಾದದಿಂದಾಗಿ ಅವರ ಸಹೋದರ ಹೊಳಲೂರು ಗ್ರಾಮದ ಪ್ರಕಾಶ್ (೪೫) ಮತ್ತು ಮಂಜಪ್ಪ, ಶಂಕ್ರಪ್ಪ, ಮೌನೇಶ್ವರಪ್ಪ, ಆಶಾ ಸೇರಿಕೊಂಡು ಕೊಲೆ ಮಾಡಿದ್ದರು ಎಂದು ರೇವಣಪ್ಪ ಅವರ ಪತ್ನಿ ಕಮಲಮ್ಮ ದೂರು ನೀಡಿದ್ದರು. ಆಗಿನ ತನಿಖಾಧಿಕಾರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಜೆ. ಲೋಕೇಶ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.


ಪ್ರಕಾಶ್ ಮೇಲಿನ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ನೀಡಲಾಗಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಸುರೇಶ ಕುಮಾರ್ ವಾದ ಮಂಡಿಸಿದ್ದರು.

Exit mobile version