Site icon TUNGATARANGA

ಹಿಮಾಲಯದಲ್ಲಿ 4 ನೇ ಬಾರಿ ಸಂಸ್ಕೃತ ಧ್ವಜಾರೋಹಣ

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗೀರ್ವಾಣಿ ಭಾರತಿ ಸಂಸ್ಕೃತ ಘಟಕ ಶ್ರೀ ಆದಿಚುಂಚನಗಿರಿ, ಸಂಸ್ಕೃತ ಭಾರತಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ವತಿಯಿಂದ ಚಂದ್ರಕಾಣಿ ಪರ್ವತದ ತುಟ್ಟ ತುದಿಯಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕೃತ ಕಲಿಸಿ ಎನ್ನುವ ಸಂದೇಶ ಹೊತ್ತ ಸಂಸ್ಕೃತದ ಧ್ವಜಾರೋಹಣ 12750 ಅಡಿ ಎತ್ತರದಲ್ಲಿ 20-05-2023 ರಂದು ಮಾಡಲಾಯಿತು.

ಧ್ವಜಾರೋಹಣ ವನ್ನು ರಾಜಸ್ಥಾನದ ಚಿತ್ತೋಸ್ ಗಡದಲ್ಲಿರುವ ಸಂಸ್ಕೃತಾಶ್ರಮದ ಓಂ ಮುನಿಮಹಾರಾಜ ಸ್ವಾಮಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ, ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲೆಯ ಸಂಯೋಜಕ ಟಿ.ವಿ.ನರಸಿಂಹ ಮೂರ್ತಿ, ಸಂಸ್ಕೃತ ಭಾರತಿ ವಿಭಾಗ ಸಂಯೋಜಕ ಗುರುಮೂರ್ತಿ, ಲೆಖ್ಖ ಪರಿಶೋಧಕ ಕೆ.ವಿ.ವಸಂತಕುಮಾರ್, ತರುಣೋದಯ ಘಟಕದ ಅ.ನಾ.ವಿಜಯೇಂದ್ರರಾವ್, ಆದಿತ್ಯಪ್ರಸಾದ್, ಧ್ವಜ ನಾಗರಾಜ್, ತಂಡದ  ನಾಯಕ ಕೊಪ್ಪದ ಸುಭಾಷ್ ಅಶ್ವಥ್ ಪುರ್

ನೆರವೇರಿಸಿದರು. 

ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಸ್ಕೃತ ಶಿಕ್ಷಕ,ಶಿಕ್ಷಕಿಯರು, ಸಂಸ್ಕತಾಭಿಮಾನಿಗಳು ಸೇರಿದಂತೆ 38 ಜನ ಉಪಸ್ಥಿತರಿದ್ದರು.

ಧ್ವಜಾರೋಹಣ ನೆರವೇರಿದ ನಂತರ  ಓಂ ಮುನಿ ಮಹಾರಾಜ ಸ್ವಾಮಿಗಳು ಮಾತನಾಡುತ್ತ ಬಾಲ್ಯದ ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಸಂಸ್ಕೃತ ಶಿಕ್ಷಣ ಅತ್ಯವಶ್ಯಕವಾಗಿದೆ. ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ಸಂಸ್ಕೃತಿಗಳ ಪರಿಚಯಿಸುವಂತಹ ಕೆಲಸವಾಗಬೇಕು. ಭಾರತ ದೇಶದ ಸಂಸ್ಕೃತಿ ಸಂಸ್ಕೃತ ದಲ್ಲಿ ಅಡಕವಾಗಿದೆ. 

ಸಂಸ್ಕೃತ ಕೇವಲ ಅದೊಂದು ಭಾಷೆಯಲ್ಲ ಅದು ಜ್ಞಾನದ ಭಂಡಾರ, ಇದನ್ನು ಮಕ್ಕಳಿಗೆ ಕಲಿಸುವತ್ತ ನಾವು ನೀವು ಮುಂದಾಗಬೇಕೆಂದು ಕರೆ ನೀಡಿದರು.

ಪ್ರಪಂಚದ ಹಲವಾರು ರಾಷ್ಟ್ರಗಳು ಇಂದು ಸಂಸ್ಕೃತ ಕಲಿಸುವತ್ತ ಮುಂದಾಗಿದ್ದಾರೆ ಈ ಕೆಲಸ ಭಾರತ ದೇಶದಲ್ಲೂ ಆಗಬೇಕು, ಕೇವಲ ಮಠ ಮಂದಿರಗಳಲ್ಲಿ ಕಲಿಸಿದರೆ ಸಾಲದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಕಲಿಸುವ ಕೆಲಸವಾಗಬೇಕು ಇದಕ್ಕೆ ನಮ್ಮ ಆಶ್ರಮದಿಂದ ಎಲ್ಲಾ ಸಹಾಯವನ್ನು ಮಾಡಲಾಗುವುದು ಎಂದರು.

ಈ ಹಿಂದೆ ಹಿಮಾಲಯದ ಸಾಂದಕಪುವಿನಲ್ಲಿ ಒಂದು ಬಾರಿ ಚಂದ್ರಕಾಣಿ ಪಾಸ್ ಬೇಸ್ ನಲ್ಲಿ ಎರಡು ಬಾರಿ, ಈ ಬಾರಿ ಚಂದ್ರಕಾಣಿ ಪಾಸ್ ನಲ್ಲಿ ಒಂದು ಬಾರಿ ಒಟ್ಟು ನಾಲಕ್ಕು ಬಾರಿ ಸಂಸ್ಕೃತ ಧ್ವಜಾರೋಹಣ ಮಾಡಿದ ಕೀರ್ತಿ ಶಿವಮೊಗ್ಗ ನಗರಕ್ಕೆ ಸಂದಿದೆ.

Exit mobile version