Site icon TUNGATARANGA

ಸೂಡಾ ಅಧ್ಯಕ್ಷರಾಗಿ ಡಾ.ಸೆಲ್ವಮಣಿ. ಜಿಲ್ಲಾಧಿಕಾರಿ ಪದಗ್ರಹಣ


ಶಿವಮೊಗ್ಗ, ಮೇ
    ಸರ್ಕಾರದ ಸುತ್ತೋಲೆಯನ್ವಯ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ.ಆರ್ ಇವರು
ದಿ : 23-05-2023 ರಂದು ಪೂರ್ವಾಹ್ನ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
    ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಹಾಗೂ ವೈಯಕ್ತಿಕವಾಗಿ ಗಮನಕ್ಕೆ

ತರಬೇಕಾದಂತಹ ಅರೆ ಸರ್ಕಾರಿ ಪತ್ರಗಳು, ಗೌಪ್ಯ ಪತ್ರಗಳನ್ನು ಡಾ.ಸೆಲ್ವಮಣಿ ಆರ್, ಭಾ.ಆ.ಸೇ., ಜಿಲ್ಲಾಧಿಕಾರಿಗಳು, ಶಿವಮೊಗ್ಗ ಹಾಗೂ ಅಧ್ಯಕ್ಷರು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ, 100 ಅಡಿ ರಸ್ತೆ, ವಿನೋಬನಗರ,

ಶಿವಮೊಗ್ಗ 577204 ದೂ.ಸಂ : 08182-249576 ವಿಳಾಸಕ್ಕೆ ಕಳುಹಿಸಿಕೊಡಬಹುದೆಂದು ಜಿಲ್ಲಾಧಿಕಾರಿ ಹಾಗೂ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.

Exit mobile version