ಶಿವಮೊಗ್ಗ, ಮೇ. ೨೩:
ನಗರದ ಪುರಾಣ, ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿದೇವಾಲಯದಲ್ಲಿ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ, ಅನಂತರಾಮಅಯ್ಯಂಗಾರ್ ಸ್ಮಾರಕಟ್ರಸ್ಟ್ ಹಾಗೂ ದೇವಾಲಯ ಸಮಿತಿಗಳ ಸಂಯುಕ್ತಆಶ್ರಯದಲ್ಲಿಜೂ. ೦೧ರಿಂದ ೦೩ರವರೆಗೆ ಹನುಮ ಜಯಂತಿ ಮಹೋತ್ಸವವುಆಯೋಜನೆಗೊಂಡಿದ್ದು, ಇದರ ಅಂಗವಾಗಿ ಮೇ.೨೫ರಿಂದ ೩೧ ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ ೦೭ಗಂಟೆಗೆ ದೇವಾಲ ಯದ ಆವರಣದಲ್ಲಿನ ಸಭಾ ಮಂಟಪದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಮೇ. ೨೫ರಂದು ಬೆಂಗಳೂರಿನ ಗಾನಶ್ರೀ ಶ್ರೀನಿವಾ ಸುಲು ಮತ್ತು ಸಂಗಡಿಗರಿಂದ ಕರ್ನಾಟಕ ಶಾಸೀಯ ಸಂಗೀತ, ೨೬ರಂದು ಶ್ರೀವತ್ಸ ಮತ್ತು ಸಂಗಡಿಗರಿಂದ ವೇಣು ನಾದ ಲಯ ವಿನೋದ, ೨೭ರಂದು ಬೆಂಗಳೂರಿನ ರವಿ ಮುರೂರು ಹಾಗೂ ಶಿವಮೊಗ್ಗೆಯ ಸುರೇಖಾ ಹೆಗಡೆತಂಡದವರಿಂದ ಭಕ್ತಿ ಭಾವ ಸಂಧ್ಯಾ, ೨೮ರಂದು, ಮತ್ತೂರಿನ ವಿಧಾತ್ರಿ ಮತ್ತುಅಚ್ಯುತ ಅವಧಾನಿಗಳಿಂದ ಗಮಕ ವಾಚನ ವ್ಯಾಖ್ಯಾನ, ೨೯ರಂದು, ವಿದ್ವಾನ್ ಜಿ. ಎಸ್.
ನಟೇಶ್‌ರವರಿಂದ ಮಂಕುತಿಮ್ಮನ ಕಗ್ಗ ಕುರಿತು ಉಪನ್ಯಾಸ, ೩೦ರಂದು ಶ್ರೀ ಬ್ರಹ್ಮಣ್ಯ ಆಚಾರ್ಯ ರವರಿಂದ ಉಪನ್ಯಾಸ ಹಾಗೂ ಮೇ. ೩೧ರಂದು ಬೆಂಗಳೂರಿನ ಆಧ್ಯಾತ್ಮಚಿಂತಕಿ ವೀಣಾ ಬನ್ನಂಜೆಯವರಿಂದ ರಾಮನ ಭಕ್ತಿ, ಹನುಮನ ಶಕ್ತಿ ಕುರಿತು ಉಪನ್ಯಾಸ ನಡೆಯಲಿದೆ.
ಧಾರ್ಮಿಕಕಾರ್ಯಕ್ರಮಗಳು: ಹನುಮ ಜಯಂತಿ ಅಂಗವಾಗಿ, ಜೂ. ೦೧ರಂದು ಸ್ವಾತಿ ನಕ್ಷತ್ರ ಬೆಳಿಗ್ಗೆ ೦೮ರಿಂದ ಶ್ರೀ ಆಂಜ ನೇಯ, ಶ್ರೀ ನಾರಸಿಂಹರಿಗೆ ಅಭಿಷೇಕ, ನಂತರ ಸುದರ್ಶನ ಹೋಮ, ಸಂಜೆ ಶ್ರೀ ಲಕ್ಷ್ಮೀ ನರಸಿಂಹರ ಪಲ್ಲಕ್ಕಿಉತ್ಸವ ನಡೆಯಲಿದೆ. ಜೂ
. ೦೨ರಂದು ವಿಶಾಖ ನಕ್ಷತ್ರ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ನಂತರ ಶ್ರೀ ರಾಮತಾರಕ ಹೋಮ, ರಾತ್ರಿ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ಜೂ.೦೩ರಂದು ಅನುರಾಧ ನಕ್ಷತ್ರ ಶ್ರೀ ಹನುಮ ಜಯಂತಿ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ಶ್ರೀ ಮಾರುತಿ ಮೂಲ ಮಂತ್ರ ಹೋಮ, ಸಂಜೆ ೦೭ರಿಂದ ಶ್ರೀ ರಾಮ, ಹನುಮರ ಎದುರು ಉತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.