Site icon TUNGATARANGA

ಶಿವಮೊಗ್ಗ: ನಾಳೆ ಹಳೇಮಂಡ್ಲಿ ವ್ಯಾಪ್ತಿಯಲ್ಲಿ ಕರೆಂಟ್ ಕಟ್


ಶಿವಮೊಗ್ಗ: ಶಿವಮೊಗ್ಗ ನಗರ ಉಪವಿಭಾಗ-೨ರ ವ್ಯಾಪ್ತಿಯಲ್ಲಿನ ಘಟಕ-೬ರ ಶಾಖೆಯಲ್ಲಿ ಎಲ್.ಟಿ.ರೀ-ಕಂಡಕ್ಟರಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ನಾಳೆ ಬೆಳಿಗ್ಗೆ 10-00 ರಿಂದ ಸಂಜೆ 6-೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.


ಹಳೇಮಂಡ್ಲಿ, ಗಜಾನನ ಗ್ಯಾರೇಜ್, ಎಫ್-೧೮ ಹೊಸಳ್ಳಿ, ಎಫ್-೦೫ ಗಾಜನೂರು ಗ್ರಾಮಾಂತರ ಪ್ರದೇಶ, ಹೊಸಳ್ಳಿ, ಇಂದಿರಾನಗರ, ಲಕ್ಷ್ಮೀಪುರ, ಹೊಸಕೊಪ್ಪ, ವೀರಾಪುರ, ಎಫ್-೦೮ ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಬೈರಾಪುರ, ಬಸವಪುರಾ, ಐಹೊಳೆ, ಭಾರತಿನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‌ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version