ಮದುವೆ ಕ್ಯಾನ್ಸಲ್: ಯುವಕ ಆತ್ಮಹತ್ಯೆ
ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಮಾಸೂರಿನ ಯುವಕನೋರ್ವ ಮದುವೆ ನಿಶ್ಚಿತಾರ್ಥ ಮುರಿದು ಬಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಒಂದು ವರ್ಷದ ಹಿಂದೆ ಶಿಕಾರಿಪುರ ತಾಲೂಕಿನ ಯುವತಿಯೊಂದಿಗೆ ನಿಶ್ವಿತಾರ್ಥವಾ ಗಿತ್ತು. ಯುವತಿಯ ತಂದೆ ಮದುವೆಗೆ ನಿರಾಕರಿಸಿದ ಕಾರಣ ಮುರಿದು ಬಿದ್ದಿತ್ತು. ಅಣ್ಣಪ್ಪ ಮೇ.10 ರಂದು ವಿಷ ಸೇವಿಸಿದ್ದನು. ಇಂದು ಬೆಳಿಗ್ಗೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ತೀರ್ಥಹಳ್ಳಿ: ವಿಷ ಸೇವಿಸಿ ಯುವಕ ಆತ್ಮಹತ್ಯೆ
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನಲ್ಲಿ ಕೋಳಿ ಫಾರಂನಲ್ಲಿ ಕೆಲಸ ಮಾಡಿಕೊಂಡಿದ್ದ ಆದರ್ಶ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.
ಹುಂಚ ಹೋಬಳಿ ಬನಶೆಟ್ಟಿಕೊಪ್ಪದ ಆದರ್ಶ (26) ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ.
ತೀರ್ಥಹಳ್ಳಿ ಕೋಣಂದೂರು ಬಳಿ ಕೋಳಿಫಾರಂಗೆ ಕೆಲಸಕ್ಕೆ ಹೋಗುತ್ತಿದ್ದನು ಎನ್ನಲಾಗಿದೆ.