Site icon TUNGATARANGA

ಭದ್ರಾವತಿ ಇತಿಹಾಸದಲ್ಲೆ ಯಾರಿಗೂ ಸಚಿವ ಸ್ದಾನ ಸಿಕಿಲ್ಲ | ಏಳು ಭಾರಿ ಸ್ಪರ್ಧಿಸಿ ನಾಲ್ಕು ಭಾರಿ ಗೆದ್ದಿರುವ ಶಾಸಕ ಸಂಗಮೇಶ್‌ಗೆ ಸಚಿವ ಸ್ಧಾನ ನೀಡಲು ಅಗ್ರಹ

ಶಿವಮೊಗ್ಗ: ಭದ್ರಾವತಿ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿ.ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಭದ್ರಾವತಿಯ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ


ಸೋಮವಾರ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಷಡಾಕ್ಷರಿ, ಸಂಗಮೇಶ್ ಅವರು ಏಳು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದಿದ್ದಾರೆ. ಭದ್ರಾವತಿಯ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾರಿಗ ಸಚಿವ ಸ್ಥಾನ ನೀಡಿಲ್ಲ. ಈ ಬಾರಿಯಾದರೂ ಹಿರಿಯರಾದ ಬಿ.ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದರು.


ಕಾಂಗ್ರೆಸ್ ಮುಖಂಡರು ಭದ್ರಾವತಿಗೆ ಚುನಾವಣಾ ಪ್ರಚಾರಕ್ಕೆ ಬಂದಾಗ ಸಂಗಮೇಶ್ ಅವರನ್ನು ಗೆಲ್ಲಿಸಿ. ಅವರಿಗೆ ಸಚಿವ ಸ್ಥಾನ ನೀಡುವುದು ನಮ್ಮ ಜವಾಬ್ದಾರಿ ಎಂದಿದ್ದರು. ಈಗ ಗೆಲ್ಲಿಸಿದ್ದೇವೆ. ಕೊಟ್ಟ ಮಾತಿನಂತೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.


ಮತ್ತೊಬ್ಬ ಮುಖಂಡ ಮಾಜಿ ಜಿ.ಪಂ ಸದಸ್ಯ ಮಣಿಶೇಖರ್ ಮಾತನಾಡಿ, ಸಂಗಮೇಶ್ ಅವರು ಭದ್ರಾವತಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಚಿವ ಸ್ಥಾನಕ್ಕೆ ಖಾಲಿ ಇರುವ ಕ್ಷೇತ್ರ ಎಂದರೆ ಭದ್ರಾವತಿ ಮಾತ್ರ. ಕಾರ್ಖಾನೆಗಳ ಅಭಿವೃದ್ಧಿ ಸೇರಿದಂತೆ ಮತ್ತಷ್ಟು ಅಭಿವೃದ್ಧಿಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ ಇಷ್ಟರಲ್ಲಿಯೇ ಭದ್ರಾವತಿಯಿಂದ ಕಾಂಗ್ರೆಸ್ ಮುಖಂಡರ ನಿಯೋಗ ಹೈಕಮಾಂಡ್ ಬಳಿ ತೆರಳಿ ಮನವಿ ಮಾಡುತ್ತೇವೆ. ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ನಮ್ಮದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಪ್ರಮುಖರಾದ ಬಿ.ಗಂಗಾಧರ್, ಜಗದೀಶ್, ರಮೇಶ್, ಮಂಜುನಾಥ್ ಮುಂತಾದವರಿದ್ದರು.

Exit mobile version