Site icon TUNGATARANGA

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪುರ‍್ಯಾನಾಯ್ಕರಿಗೆ ಸನ್ಮಾನ”

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ದಿನಾಂಕ: ೧೮.ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿಯರಾದ ಶ್ರೀಮತಿ ಶಾರದಾ ಪೂರ‍್ಯಾನಾಯ್ಕರವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್‌ರವರು ಮಾತನಾಡಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿದ್ದು, ತಮ್ಮನ್ನು ಮತ್ತೊಮ್ಮೆ ಗ್ರಾಮಾಂತರದ ಸೇವೆಗೆ ಜನರು ಅಭಿಮಾನದಿಂದ ತಮ್ಮನ್ನು ಗುರುತಿಸಿ ಆಯ್ಕೆ ಮಾಡಿರುವುದು ಸಂತೋಷ ತಮ್ಮ ಈ ಅವದಿಯಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಸಾಗಲಿ ಎಂದು ಹಾರೈಸಿದರು

.

   ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕಿಯವರು ಗ್ರಾಮಾಂತರದ ಜನರು ಅವರ ಸೇವೆಗೆ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಗ್ರಾಮಾಂತರ ಕ್ಷೇತ್ರಕ್ಕೆ ಸರ್ಕಾರದದಿಂದ ಪಂಚರತ್ನ ಯೋಜನೆಯಂತ ಅನೇಕ ಉತ್ತಮವಾದ ಯೋಜನೆಗಳು ಇವೆ ಗ್ರಾಮಾಂತರ ಜನರ ಸೇವೆ ಮಾಡಿದ ಹಿಂದಿನ ಅನುಭವವೂ ಇದೆ ಹಾಗೂ ಮತ್ತೊಮ್ಮ ನನಗೆ ಅವಕಾಶ ಕಲ್ಪಿಸಿದ ಕ್ಷೇತ್ರದ ಜನತೆಗೆ ನಾನು ಅಭಾರಿಯಾಗಿದ್ದೇನೆ.  ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಸಹಕಾರದೊಂದಿಗೆ ಪಕ್ಷಾತೀತವಾಗಿ ಸೇವಾ ಕಾರ್ಯಗಳನ್ನು ನಿಷ್ಟೆ ಹಾಗೂ ಪ್ರಾಮಾಣಿಕತೆಯಲ್ಲಿ ಮಾಡುವುದಾಗಿ ತಿಳಿಸಿದರು.



ಕಾರ್ಯಕ್ರಮದಲ್ಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯ ಕುಮಾರ್, ನಿರ್ದೇಶಕರುಗಳಾದ ಗಣೇಶ ಎಂ. ಅಂಗಡಿ. ಬಿ. ಮಂಜೇಗೌಡ, ಈ ಪರಮೇಶ್ವರ್ ಸಂಘದ ಮಾಜಿ ಅಧ್ಯಕ್ಷರುಗಳಾದ ಆಶ್ವಥ್‌ನಾರಾಯಣ ಶೆಟ್ಟಿ, ಡಿ.ಎಂ. ಶಂಕರಪ್ಪ, ಹಾಗೂ ಶ್ರೀಮತಿ ಲಕ್ಷೀದೇವಿ ಗೋಪಿನಾಥ್ ಮುಂತಾದವರು ಉಪಸ್ಥಿತರಿದ್ದರು.

Exit mobile version