Site icon TUNGATARANGA

ಯಶಸ್ವಿ ಹೋಟೆಲ್ ಉದ್ಯಮಿ ಎನ್. ಗೋಪಿನಾಥ್ ಸಾಧನೆಗೆ ಸಂದ ಗೌರವ/ ಶಿವಮೊಗ್ಗದ ಮಥುರಾ ಪ್ಯಾರಡೈಸ್ ಗೆ ಇಪ್ಪತೈದರ ಸಂಭ್ರಮ


ಗಜೇಂದ್ರ ಸ್ವಾಮಿ
ಶಿವಮೊಗ್ಗ,ಮೇ.17:
ಹಿಡಿದ ಕೆಲಸವನ್ನು ಚಾಚೂ ತಪ್ಪದೆ ಶ್ರದ್ಧೆಯಿಂದ ಮಾಡಬೇಕು. ತಮ್ಮ ಕೆಲಸದ ಬಗ್ಗೆ ಅತ್ಯಂತ ಗೌರವವನ್ನು ಹೊಂದಿರಬೇಕು. ತಮ್ಮ ಕಾರ್ಯದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸಂತೃಪ್ತಗೊಳಿಸಬೇಕು. ಪ್ರೀತಿ ವಿಶ್ವಾಸದ ನಡುವೆ ಉದ್ಯಮವನ್ನು ಬೆಳೆಸಬೇಕು ಎಂಬ ಉದ್ದೇಶಗಳ ನಡುವೆ ಸದ್ದು ಮಾಡದೆ ಸಾಧನೆ ಮಾಡಿದ ಕೀರ್ತಿ ಶಿವಮೊಗ್ಗದ ಹೋಟೆಲ್ ಉದ್ಯಮಿ ಹಾಗೂ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಎನ್ ಗೋಪಿನಾಥ್ ಅವರಿಗೆ ಸಲ್ಲುತ್ತದೆ.


ಶಿವಮೊಗ್ಗ ನಗರದ ಮೊಟ್ಟ ಮೊದಲ ಪ್ರಖ್ಯಾತ ಹಾಗೂ ವ್ಯವಸ್ಥಿತವಾದ ಹೋಟೆಲ್ ಉದ್ಯಮ ಎಂದರೆ ಬಾಲರಾಜ್ ಅರಸ್ ರಸ್ತೆಯ ಮಥುರ ಪ್ಯಾರಡೈಸ್ ಎಂದು ಸಾಕಷ್ಟು ಜನ ಹೇಳುತ್ತಾರೆ. ಕಳೆದ 24 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಹೋಟೆಲ್ ಉದ್ಯಮವನ್ನು ತೆರೆದು ಜಿಲ್ಲೆಗಷ್ಟೇ ಸೀಮಿತವಾಗದೆ ಹೊರ ಜಿಲ್ಲೆಗಳಿಂದ, ಹೊರದೇಶಗಳಿಂದ ಬಂದವರಿಗೂ ಸಹ ಅತ್ಯಂತ ವ್ಯವಸ್ಥಿತವಾದ ಸೌಕರ್ಯಗಳನ್ನು ಕಲ್ಪಿಸಿ ಜಿಲ್ಲೆಯ ಹಾಗೂ ಮಲೆನಾಡಿನ ಕೀರ್ತಿಗೆ ವಿಶೇಷತೆ ಮೆರಗು ಹಾಗೂ ಗೌರವ ಸಿಗುವಂತೆ ಮಾಡಲಾಗಿದೆ.


1999ರ ಪೂರ್ವದಲ್ಲಿ ಕೆಲವೇ ಕೆಲವು ಹೋಟೆಲ್ ಉದ್ಯಮಗಳು ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅಂದು ಹೋಟೆಲ್ ಉದ್ಯಮವನ್ನು ಆರಂಭಿಸಬೇಕು. ಅದು ಹೊಸತನದಲ್ಲಿ ಇರಬೇಕೆಂಬ ಕನಸು ಹೊತ್ತು ನಗರದ ಅತಿ ಮುಖ್ಯಸ್ಥಳದಲ್ಲಿ ಮಥುರ ಪ್ಯಾರಡೈಸ್ ಆರಂಭಿಸಿದ ಎನ್. ಗೋಪಿನಾಥ್ ಅವರ ತಂಡ ಇಡೀ ಹೋಟೆಲ್ ಉದ್ಯಮದಲ್ಲಿ ಹೊಸತನವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು 25ರ ಸಂಭ್ರಮದಲ್ಲೂ ಪ್ರಾರಡೈಸ್ ಗೆ ತನ್ನದೇ ಆದ ಹಿರಿಮೆ ಹಾಗೂ ಕೀರ್ತಿಯನ್ನು ಉಳಿಸಿದ್ದಾರೆ.
ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ಸಂಸದರಾಗಿದ್ದ ಎಸ್. ಬಂಗಾರಪ್ಪ ಅವರ ಅಮೃತ ಹಸ್ತದಿಂದ ಆರಂಭಗೊಂಡ ಮಥುರಾಪ್ಯಾರಡೈಸ್ ನ ಚಾಣಕ್ಯ ಸಭಾಂಗಣ, ವಸತಿ ಗೃಹಗಳು ಸೇರಿದಂತೆ ಸರಳ ಹಾಗೂ ಸುಂದರ ಸಮಾರಂಭವನ್ನು ನಡೆಸುವ ವಿಶೇಷ ಸಭಾಂಗಣವನ್ನು ಒಳಗೊಂಡಿದ್ದು ಇದಕ್ಕೆ ಗೋಪಿನಾಥ್ ಅವರ ತಂದೆ ಎಂ ಎಸ್ ನಾಗರಾಜ್ ಮತ್ತು ಅವರ ಮಕ್ಕಳು ಹಾಗೂ ಕುಟುಂಬ ವರ್ಗದ ಪ್ರಯತ್ನ ಅಪಾರವಾದದ್ದು.


ಮಥುರ ಪ್ಯಾರಡೈಸ್ ನ ಚಾಣಕ್ಯ ಸಭಾಂಗಣ ಶಿವಮೊಗ್ಗ ನಗರದ ಪತ್ರಿಕಾಗೋಷ್ಠಿ ಹಾಗೂ ಸಭೆ ಸಮಾರಂಭಗಳ ಪ್ರಮುಖ ಸ್ಥಳವಾಗಿ ಕಂಗೊಳಿಸುತ್ತಿದ್ದನ್ನು ಸುಮಾರು ಒಂದುವರೆ ದಶಕದ ಇತಿಹಾಸದಲ್ಲಿ ಕಾಣುತ್ತೇವೆ.


ಪತ್ರಿಕಾಗೋಷ್ಠಿಯನ್ನು ಅತ್ಯಂತ ಕಡಿಮೆ ದರದಲ್ಲಿ ಯಾರು ಬೇಕಾದರೂ ನಡೆಸಬಹುದು ಎಂಬುದನ್ನು ಸುಲಭವಾಗಿ ರೂಪಿಸಿಕೊಟ್ಟ ಚಾಣಕ್ಯ ಸಭಾಂಗಣದ ಈ ಅಂಗಣ ಈಗಲೂ ಸಾಕಷ್ಟು ಹಿರಿಯ ಪತ್ರಕರ್ತರ ನೆನಪಿನಲ್ಲಿ ಮರೆ ಮಾಸದೆ ನಿಂತಿದೆ.
ಪ್ರಸ್ತುತ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ ಮಥುರಾ ಪ್ಯಾರಡೈಸ್ ನ ಹಾಲ್ ನಲ್ಲಿ ನಾಮಕರಣ, ನಿಶ್ಚಿತಾರ್ಥ, ಆರತಿ ಹಾಗೂ ಜನುಮದಿನದ ಸಮಾರಂಭಗಳು ಸಾಕಷ್ಟು ನಡೆಯುತ್ತವೆ. ಹಿಂದೆ ದುಬಾರಿ ವೆಚ್ಚದ ಕಲ್ಯಾಣ ಮಂಟಪದ ಬದಲು ಅತ್ಯಂತ ವ್ಯವಸ್ಥಿತವಾಗಿ ನಗರದ ಪ್ರಮುಖ ಸ್ಥಳದಲ್ಲಿರುವ ಮಧುರ ಪ್ಯಾರಡೈಸ್ ಬಳಕೆಯಾಗುತ್ತಿತ್ತು.


ಮಧುರ ಹೋಟೆಲ್ ಇಷ್ಟೊಂದು ಸುಂದರವಾಗಿ ವ್ಯವಸ್ಥಿತವಾಗಿ ನಡೆಯಲು ಕಾರಣ ಸಾಕಷ್ಟು ಶ್ರಮ ಹಾಗೂ ನಂಬಲರ್ಹ ಪ್ರಯತ್ನಗಳು ಎಂದರೆ ತಪ್ಪಾಗಲಿಕ್ಕಿಲ್. ಈಗಲೂ ಗೋಪಿನಾಥ ಅವರು ನಿತ್ಯ ಮಥುರ ಹೋಟೆಲ್ ನಲ್ಲಿ ಸಿದ್ಧವಾಗುವ ಪ್ರತಿ ಅಡುಗೆಗಳನ್ನು ಚಾಚೂ ತಪ್ಪದೆ ಪರೀಕ್ಷಿಸುತ್ತಾರೆ.
ತಾವೇ ದೋಸೆ ಹೊಯ್ದು ಅದು ಗ್ರಾಹಕನಿಗೆ ಇಷ್ಟವಾಗುತ್ತದೆಯೇ ಎಂಬುದನ್ನು ನೋಡುತ್ತಾರೆ.ಉಪ್ಪು, ಹುಳಿ, ಖಾರದ ಸಮಪ್ರಮಾಣ ಹೊಂದಿರುವ ಆಹಾರಧಾನ್ಯದ ಜೊತೆಗೆ ಆ ಆಹಾರಧಾನ್ಯದ ಗುಣಮಟ್ಟ ಸ್ವಚ್ಚತೆ ಪರೀಕ್ಷಿಸುವ ಗೋಪಿನಾಥ್ ಅವರ ಈ ಪ್ರಯತ್ನದ ಪರವಾಗಿ ಈಗಲೂ ಮತ್ತು ಪ್ಯಾರಡೈಸ್ ಶಿವಮೊಗ್ಗ ಜನಮಾನಸದಲ್ಲಿ ಹೊಸತನದಲ್ಲೇ ಕಾಣಿಸಿಕೊಳ್ಳುತ್ತದೆ.


ಪ್ರಸಕ್ತ ಇರುವ ಮಥುರಾ ಪ್ಯಾರಡೈಸ್ ನ ವಸತಿ ವಿಭಾಗದಲ್ಲಿ ವಿಭಾಗಕ್ಕೆ ಚಿತ್ರನಟರಾದ ವಿಷ್ಣುವರ್ಧನ್, ಜಯಮಾಲಾ, ರಮೇಶ್, ದೊಡ್ಡಣ್ಣ ರಾಜಕಾರಣಿಗಳಾದ ಬಂಗಾರಪ್ಪ, ದೇವೇಗೌಡ, ಯಡಿಯೂರಪ್ಪ ಹಾಗೂ ಸಂಗೀತ ನಿರ್ದೇಶಕ ಅಶ್ವಥ್ ಸೇರಿದಂತೆ ರಾಜ್ಯದ ಎಲ್ಲಾ ಗಣ್ಯರು ಉಳಿದುಕೊಂಡು ಅಂದಿನ ವಸತಿ ಹಾಗೂ ವ್ಯವಸ್ಥೆಗೆ ಸಂತಸಪಟ್ಟು ತಮ್ಮ ಮನೆಯಂತೆ ಭಾವಿಸಿ ಹೋಗಿರುವುದನ್ನು ಹಾಗೂ ಅದನ್ನು ಬರಹದಲ್ಲಿ ದಾಖಲಿಸಿರುವುದನ್ನು ಗಮನಿಸಬಹುದು.


ಕಳೆದ ಎರಡು ವರ್ಷಗಳಿಂದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರೂ ಆಗಿರುವ ಗೋಪಿನಾಥ್ ಅವರು ಆ ಕರ್ತವ್ಯದ ನಡುವೆ ಶಿವಮೊಗ್ಗ ಜನರ ಜೊತೆ ಬೆರೆತು ಅದರೊಂದಿಗೆ ಹೋಟೆಲ್ ಉದ್ಯಮಕ್ಕೆ ವಿಶೇಷ ಗಮನಹರಿಸಿ ಅತ್ಯಂತ ಸ್ವಚ್ಛ ಹಾಗೂ ರುಚಿಕಟ್ಟಾದ ಆಹಾರ ಧಾನ್ಯಗಳನ್ನು ನೀಡುತ್ತಿರುವುದು ಮಧುರ ಪ್ಯಾರಡೈಸ್ 25ರ ಸಂಭ್ರಮದ ಆಚರಣೆಗೆ ಕಾರಣ ಎನ್ನಬಹುದು.
ಗೋಪಿನಾಥ್ ಅವರೊಂದಿಗೆ ಅವರ ಪತ್ನಿ ಲಕ್ಷ್ಮಿ ಗೋಪಿನಾಥ್ ( ಲಕ್ಷ್ಮೀ ಗೋಪಿನಾಥ್ ಅವರು ಅಹಾರ ತಯಾರಿಕೆಯಲ್ಲಿ ಪರಿಣತರಾಗಿ, ಸ್ವಂತ ಉದ್ಯಮ ನಡೆಸುತ್ತಿದ್ದಾರೆ ಹಾಗೂ ದೇಶ ವಿದೇಶಗಳಲ್ಕಿ ಅಹಾರ ತಯಾರಿಕೆ ಕುರಿತು ಉಪನ್ಯಾಸ ನೀಡಿದ್ದಾರೆ ಹಾಗೂ ಸಾಕಷ್ಟು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.) ಹಾಗೂ ಕುಟುಂಬ ವರ್ಗ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಮತ್ತು ಅಲ್ಲಿರುವ ಸಿಬ್ಬಂದಿಗಳು ಮನೆಯವರಂತೆ ಇರುವ ಕಾರಣದಿಂದ ಮಥುರ ಪ್ಯಾರಡೈಸ್ ಕೇವಲ ಹೋಟೆಲ್ ಎಂದಾಗದೆ ಅದೊಂದು ಮನೆ ಎಂಬಂತಹ ವಾತಾವರಣವನ್ನು ರೂಪಿಸಿಕೊಂಡಿದೆ.
25ರ ಸಂಭ್ರಮದಲ್ಲಿರುವ ಮಥುರ ಪ್ಯಾರಡೈಸ್ 100 ರ ಸಂಭ್ರಮವನ್ನು ಆಚರಿಸಲಿ. ಗೋಪಿನಾಥ್ ಅವರ ಶ್ರಮಕ್ಕೆ ತಕ್ಕ ಗೌರವ ದೊರೆಯಲಿ. ಶುಭವಾಗಲಿ. ಅಭಿನಂದನೆಗಳು.

Exit mobile version