ಈ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ಅವರಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ತಾಲೂಕು ಬಂಜಾರ ಸಂಘದ ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಶೋಕ್ ನಾಯ್ಕ ಅವರ ದುರಹಂಕಾರಿ ವರ್ತನೆ ಯನ್ನು ಎಲ್ಲಾ ಸಮುದಾಯದ ಜನರು ತಿರಸ್ಕರಿಸಿದ್ದಾರೆ. ನೈತಿಕವಾಗಿ ನಿಮಗೆ ಜಿಲ್ಲಾ ಬಂಜಾರ ಅಧ್ಯಕ್ಷರಾಗಿ ಮುಂದುವರಿಯುವ ಹಕ್ಕಿಲ್ಲ. ಕೂಡಲೇ ಜಿಲ್ಲಾ ಬಂಜಾರ ಸಂಘದ ವಾರ್ಷಿಕ ಮಹಾಸಭೆ ಕರೆದು ಲೆಕ್ಕ ಪತ್ರ ಮಂಡಿಸಿ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಮೀಸಲಾತಿ ವರ್ಗಿಕರಣವನ್ನು ಬಂಜಾರ ಸಮುದಾಯ ವಿರೋಧಿಸಿ ತಕ್ಕ ಪಾಠ ಕಲಿಸಿದೆ. ಬಿಜೆಪಿಯನ್ನು ಇಡೀ ರಾಜ್ಯದಲ್ಲಿ ಬಂಜಾರ ಸಮು ದಾಯ ತಿರಸ್ಕರಿಸಿದೆ. ಗೆದ್ದ ಕಾಂಗ್ರೆಸ್ ಹಿರಿಯ ಶಾಸಕ ದುಗ್ಗಪ್ಪ ಲಮಾಣಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ಕಾಂಗ್ರೆಸ್ ಸರ್ಕಾರದಲ್ಲಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಶೋಕ ನಾಯ್ಕರು ಅವರ ಭ್ರಷ್ಟಾಚಾರದಿಂದಲೇ ಸೋಲುಂಡರು. ಭ್ರಷ್ಟಾಚಾರರಿತ ವ್ಯಕ್ತಿ ಎಂದು ಅವರು ಪ್ರಮಾಣ ಮಾಡುವುದಾದರ ಸೂರಗೊಂಡನಕೊಪ್ಪ ದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲೆಸೆದರು. ಒಂದು ಪಕ್ಷದ ಮುಖವಾಣಿಯಾಗಿ ತಾಲೂಕು ಬಂಜಾರ ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ಸರ್ವಾಧಿಕಾರಿ ಧೋರಣೆ
ತೋರಿಸಿ ನೂತನ ಬಂಜಾರ ಭವನ ಉದ್ಘಾಟನೆಯ ಸಂದರ್ಭ ದಲ್ಲಿ ತಾಲೂಕು ಬಂಜಾರ ಸಮಾಜದ ಪ್ರಮುಖರನ್ನು ಹೊರಗಿಟ್ಟಿದ್ದಾರೆ. ಅವರ ಕೈಗೊಂಬೆಯಾದವರನ್ನು ಮಾತ್ರ ಪಕ್ಕಕ್ಕಿಟ್ಟುಕೊಂಡು ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಬಂದ ಅನುದಾನ ಮತ್ತು ಸಮಾಜದ ದೇಣಿಗೆಯ ಲೆಕ್ಕ ಕೊಟ್ಟಿಲ್ಲ. ಹಿಂದಿನ ಕಟ್ಟಡದಲ್ಲಿ ಬಡ ವಿದ್ಯಾರ್ಥಿಗಳಿಗೆ ನಿಲ್ಲಲು ಅವಕಾಶವಿತ್ತು. ಈಗ ಹೊಸ ಕಟ್ಟಡದಲ್ಲಿ ನಿರ್ಮಿಸಿದ ಕೊಠಡಿಗಳನ್ನು ಬಂಜಾರ ಭವನದ ಕಾರ್ಯಕ್ರಮಕ್ಕೆ ಬಂದವರಿಗೆ ನೀಡಲಾಗುತ್ತಿದೆ. ಮೂಲ ಉದ್ದೇಶಕ್ಕೆ ಧಕ್ಕೆಯಾಗಿ ಈ ಭವನ ನಿರ್ಮಾಣಗೊಂಡಿದೆ ಎಂದು ಅವರು ಮತದಾರರು ಆ ಕ್ಷೇತ್ರದಲ್ಲಿ ಅವರನ್ನು ತಿರಸ್ಕರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಟಿ. ನಾನ್ಯಾ ನಾಯ್ಕ, ಮಂಜುನಾಥ ನಾಯ್ಕ, ಪರಮೇಶ್ವರ ನಾಯ್ಕ, ಕುಮಾರ್ ನಾಯ್ಕ, ರೇಣುಕಾ ನಾಯ್ಕ, ಬಸವರಾಜ ನಾಯ್ಕ ಮತ್ತಿತರರು ಇದ್ದರು.