Site icon TUNGATARANGA

ಎಸ್ಸೆಸ್ಸೆಲ್ಸಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ರಷ್ಟು ಫಲಿತಾಂಶ

ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಹನ್ನೊಂದು ವಿದ್ಯಾರ್ಥಿಗಳು ೬೦೦ಕ್ಕೂ ಹೆಚ್ಚು ಅಂಕ ಪಡೆದು ಶಾಲೆಗೆ ಮತ್ತು ಶಿವಮೊಗ್ಗ ನಗರಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆ ಆರಂಭವಾಗಿ ಹನ್ನೆರಡು ವರ್ಷಗಳಾಗಿವೆ. ಹನ್ನೆರಡು ವರ್ಷಗಳಿಂದ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದ್ದೇವೆ ಎಂದರು.


ಶೋಭಿತ್ ಎಂಬ ವಿದ್ಯಾರ್ಥಿ ೬೨೫ಕ್ಕೆ ೬೨೨ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಅದೇ ರೀತಿ ಹೃಷಿಕಾ ೬೧೭, ಗೌರವ್ ೬೧೭, ಗೌತಮಿ ೬೧೧, ತನುಜ್ ೬೧೦, ಭೂಮಿಕಾ ೬೦೭, ರಭಿಯಾ ೬೦೫, ದಿಶಾ ಎಂ. ೬೦೫, ಸಾಹಿತ್ಯ ೬೦೨, ಸಾನಿಕಾ ಜಿ.ಎಸ್. ೬೦೨, ತೇಜಸ್೬೦೦ ಅಂಕಗಳನ್ನು ಪಡೆದಿದ್ದಾರೆ ಎಂದು ವಿವರಿಸಿದರು.


ಹಾಗೆಯೇ ೧೪ ವಿದ್ಯಾರ್ಥಿಗಳು ಗಣಿತದಲ್ಲಿ, ೬ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ೭ ವಿದ್ಯಾರ್ಥಿಗಳು ಕನ್ನಡದಲ್ಲಿ , ೯ ವಿದ್ಯಾರ್ಥಿಗಳು ಹಿಂದಿಯಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ೧೩೪ ಹೈಸ್ಕೂಲ್‌ಗಳಿದ್ದು, ಅದರಲ್ಲಿ ನಮ್ಮ ಶಾಲೆಯೂ ಸೇರಿದಂತೆ ೯ ಶಾಲೆಗಳಲ್ಲಿ (ಮಾತ್ರ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಬಂದಿದೆ. ವಿಶೇಷವೆಂದರೆ ಹನ್ನೆರಡು ವರ್ಷಗಳಿಂದಲೂ ನಾವು ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆಯುತ್ತಿದ್ದೇವೆ ಎಂದರು.


ಪ್ರಾಂಶುಪಾಲೆ ಸುನೀತಾದೇವಿ ಬಿ.ಜೆ. ಮಾತನಾಡಿ, ನಮ್ಮ ಶಾಲೆಯಲ್ಲಿ ಕೇವಲ ಅಂಕಗಳಿಗೆ ಮಾತ್ರ ಮಹತ್ವ ನೀಡದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಗಮನಹರಿಸುತ್ತೇವೆ. ವಿಶೇಷ ತರಗತಿಗಳನ್ನು ನಡೆಸುತ್ತೇವೆ. ಪಠ್ಯಗಳನ್ನು ಬೇಗನೆ ಮುಗಿಸುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ವ್ಯಾಸಂಗವನ್ನು ಗಮನಿಸುತ್ತೇವೆ. ಕ್ರೀಡೆ, ಕಲೆ, ಸಾಹಿತ್ಯ, ಹೀಗೆ ಎಲ್ಲಾ ರೀತಿಯಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇವೆ ಎಂದ ಅವರು, ಮುಂದೆ ೫ನೇ ಹಾಗೂ ೮ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬರಲಿದ್ದು ಅದಕ್ಕೂ ಕೂಡ ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಪ್ರಾಂಶುಪಾಲ ಪ್ರವೀಣ್ ಮತ್ತು ೬೦೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿದ್ದರು.

Exit mobile version