ಹೊಸನಗರ ತಾಲ್ಲೂಕು ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿಂಡಲಮನೆ ಗ್ರಾಮದಲ್ಲಿ ೧೦ದಿನಗಳಿಂದ ವಿದ್ಯುತ್ ಸ್ಥಗಿತ ಸಾರ್ವಜನಿಕರಿಗೆ ಗೋಳು ಕೇಳುವವರ‍್ಯಾರು?
ಹೊಸನಗರ:ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿಂಡಲಮನೆಯಲ್ಲಿ ಸುಮಾರು ೧೦ದಿನಗಳ ಹಿಂದೆ ಭರ್ಜರಿ ಮಳೆಯಾಗಿದ್ದು ಗಾಳಿ-ಮಳೆಯ ರಭಸಕ್ಕೆ ಮರಗಳು ಬಿದ್ದು ಹಿಂಡಲಮನೆ ಗ್ರಾಮದಲ್ಲಿ ಸುಮಾರು ೧೦ದಿನಗಳಿಂದ ಈ ಭಾಗದಲ್ಲಿ ವಾಸಿಸುತ್ತಿದ್ದ ಸುಮಾರು ೩೨ಮನೆಗಳಿಗೆ ವಿದ್ಯುತ್ ಸ್ಥಗಿತವಾಗಿದೆ ಎಂದು ಆ ಗ್ರಾಮದ ವಸಂತ್‌ಕುಮಾರ್‌ರವರು ಪತ್ರಿಕಾ ಹೇಳಿಕೆಯ
ಮೂಲಕ ತಿಳಿಸಿದ್ದಾರೆ
೧೦ದಿನಗಳ ಹಿಂದೆ ಈ ಗ್ರಾಮದಲ್ಲಿ ಮಳೆಯಾಗಿದೆ ಕೆಲವು ಮರಗಳ ಧರೆಗೆ ಉರುಳಿದ್ದು ವಿದ್ಯುತ್ ಕಂಬಗಳಿಗೆ ಹಾಗೂ ವಯ್ಯರುಗಳಿಗೆ ಹಾನಿಯಾಗಿದೆ ಈ ಬಗ್ಗೆ ಕೋಡೂರು ಗ್ರಾಮ ಪಂಚಾಯತಿಯವರ ಗಮನಕ್ಕೂ ತರಲಾಗಿದೆ ಹೊಸನಗರದ ಮೆಸ್ಕಾಂ ಇಲಾಖೆಯವರ ಗಮನಕ್ಕೂ ತರಲಾಗಿದೆ ಹಿಂಡಲಮನೆ ಸಮೀಪವಿರುವ ಟಿ.ಸಿ ಹಾಳಾಗಿದೆ ಎಂದು ಹೇಳಲಾಗಿದ್ದು ಟಿ.ಸಿ ಹಾಗೂ ಹಾಳಾಗಿರುವ ವಿದ್ಯುತ್ ತಂತಿ ಹಾಗೂ ಕಂಬಗಳನ್ನು ದುರಸ್ಥಿ ಮಾಡಲು ಇಷ್ಟು ದಿನಗಳ ಬೇಕೆ?
ಮೇಸ್ಕಾಂ ಇಲಾಖೆಗೆ ಹಾಗೂ ಕೋಡೂರು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸುವುದರ ಜೊತೆಗ ಮೌಖಿಕವಾಗಿಯು ಸಹ ಹೇಳಲಾಗಿದ್ದು ಆದರೆ ಇಲ್ಲಿಯವರೆವಿಗೆ ಸರಿ ಪಡಿಸಲು ಗ್ರಾಮ ಪಂಚಾಯತಿಯಾಗಲೀ ಅಥವಾ ಮೆಸ್ಕಾಂ
ಇಲಾಖೆಯವರು ಸ್ವಂದಿಸುವ ಕೆಲಸ ಮಾಡುತ್ತಿಲ್ಲ ಈ ಭಾಗದಲ್ಲಿ ಮನೆಗಳಿಗೂ ಹಾಗೂ ಗದ್ದೆ ತೋಟಗಳಿಗೆ ನೀರಿಲ್ಲದೇ ಒಣಗಿ ಹೋಗುತ್ತಿದ್ದು ಸಂಬಂದ ಪಟ್ಟ ಮೆಸ್ಕಾಂ ಇಲಾಖೆ ಹಾಗೂ ಕೊಡೂರು ಗ್ರಾಮ ಪಂಚಾಯತಿಯವರು ತಕ್ಷಣ ಸ್ವಂದಿಸುವುದರ ಜೊತೆಗೆ ತಕ್ಷಣ ವಿದ್ಯುತ್ ಸ್ಥಗಿತವನ್ನು ಸರಿಪಡಿಸಲೀ ಎಂದು ಆಗ್ರಹಿಸಿದ್ದಾರೆ.